Posts

ಗಣಕದ ಕಥೆ

ಗಣಕದ ಕಥೆ ಈ ವರ್ಷದಾರಂಬದ(2017) ಜನವರಿ ತಿಂಗಳಿನಲ್ಲಿಯೇ ನನ್ನ ಮೇಜು-ಗಣಕ ಕೆಟ್ಟು ಹೋಯಿತು. ಅದರಲ್ಲಿದ್ದ ಗಣಕ-ಚಾಲಕ ತಂತ್ರಾಂಶದ ತಿರುಗಣೆ ಹಾಳಾಗಿ ಹೋಗಿತ್ತು. ಹೊಸದೊಂದು ತಿರುಗಣೆಯನ್ನು ತಂದುಹಾಕಲು ಕುಟುಂಬದ ಕಾರ್ಯಕ್ರಮದ ಸಲುವಾಗಿ ಕೂಡಲೆ ಸಾಧ್ಯವಾಗಲಿಲ್ಲ. ಹಾಗೂ ಸಮಯಮಾಡಿಕೊಂಡು ಒಂದು ಹೊಸ-ತಿರುಗಣೆಯನ್ನು ತಂದುಹಾಕಿದ ಒಂದೇ ತಿಂಗಳಿನಲ್ಲಿಯೇ ಹಳೆಯದರ ಜೊತೆಗೆ ಹೊಸದೂ ಸೇರಿಕೊಂಡಿತು ಮಾತೃಯಲಗೆಯೂ ಸೇರಿ. ಒಟ್ಟಾರೆ ಮೇಜು-ಗಣಕ ಮೂಲೆಗುಂಪಾಗಿ ನನ್ನ ಬರವಣಿಗೆ ನಿಂತು ಹೋಯಿತು. ನನ್ನ ಉಡಿ-ಗಣಕದಲ್ಲಿ ಬೆರಳಚ್ಚಿಸಲು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಕಾರಣ ನನ್ನ ಬರವಣಿಗೆ ಪೂರ್ಣವಾಗಿ ನಿಂತೇ ಹೋಯಿತು. ಇದೇ ಸಮಯದಲ್ಲಿ ನನ್ನ ಬಂಧುವೊಬ್ಬರು ಅವರು ಅನುವಾದಿಸಿದ್ದ "ಅರೆಶತಮಾನದ ಮೌನ" ಎಂಬ ಪುಸ್ತಕವನ್ನು ಅಂಚೆ/ಚಾರಕ ಮೂಲಕ ಕಳುಹಿಸಿಕೊಟ್ಟಿದ್ದರು. ಅದನ್ನು ಸಮಯವಾಗದೆ ಓದದೆ ಹಾಗೇ ಉಳಿಸಿಬಿಟ್ಟಿದ್ದೆ. ಇತ್ತೀಚೆಗೆ ಅದನ್ನು ಓದಿ ಮುಗಿಸಿ ಅದರ ಬಗ್ಗೆ ನನ್ನ ಅನಿಸಿಕೆಯನ್ನು ಅನುವಾದಕರಿಗೆ ಬರೆದು ಕಳುಹಿಸಲು ಪುನಃ ನನ್ನ ಬರವಣಿಗೆಯನ್ನು ಪ್ರಾರಂಬಿಸಿದ್ದೇನೆ. ಆ ನನ್ನ ಅನಿಸಿಕಾ ಬರವಣಿಗೆಯನ್ನು ಈಗಾಗಲೇ ನನ್ನ ಬ್ಲಾಗಿನಲ್ಲಿ ನೀವೆಲ್ಲಾ ಓದುಗರಿಗಾಗಿ ಪ್ರಕಟಿಸಿದ್ದೇನೆ.### ದಿವಾಕರ ತಿಮ್ಮಣ್ಣ

ಅರೆಶತಮಾನದ ಒಳಬೇಗುದಿಯ ಮೌನ

ಅರೆಶತಮಾನದ ಒಳಬೇಗುದಿಯ ಮೌನ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನೀ ಸೈನಿಕರ ದೌರ್ಜನ್ಯಕ್ಕೊಳಗಾದ "ಸುಖದಾಯಿ ಹೆಂಗಸರು" ಎಂಬ ಹಣೆಪಟ್ಟಿಯನ್ನಂಟಿಸಿಕೊಂಡು ಲೈಂಗಿಕ ಗುಲಾಮಗಿರಿಗೆ ಬಿದ್ದಿದ್ದ ಯಾನ್‌ ರಫ್‌ ಓ-ಹರ್ನ್‌ ಎಂಬ ಡಚ್‌ ಈಸ್ಟ್‌ ಇಂಡಿಯನ್‌ ಜಾವಾ ಮೂಲದ ಹೆಣ್ಣುಮಗಳು ಅನುಭವಿಸಿದ ಯಾತನೆಯ ಜೀವಂತ ಕಥನ “ಅರೆಶತಮಾನದ ಮೌನ"... ಪುಸ್ತಕವನ್ನು ಇತ್ತೀಚೆಗೆ ಸಮಯದ ಬಿಡುವು ಮಾಡಿಕೊಂಡು ಓದಿದ್ದಾಯಿತು. ಓದಿದ ಮೇಲೆ ಒಂದೊಮ್ಮೆ ಸ್ವಲ್ಪಹೊತ್ತು ಯೋಚನೆಗೆ ಬಿದ್ದು ನಂತರ ನನ್ನ ಪತ್ನಿ ವಸಂತಳೊಡನೆ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿ ಸೈನಿಕರು ನಡೆಸಿದ ಅಮಾನವೀಯ ಘಟನೆಗಳ ಬಗ್ಗೆ ಚರ್ಚಿಸಲಾಯಿತು. ಸೆರೆಸಿಕ್ಕ ಹೆಣ್ಣುಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಮನಸ್ಸಿನ ಮೇಲೆ ಬಹಳೇ ಘಾಸಿಗೊಳಿಸಿತು. ನನಗೆ ಒಂದರೆಗಳಿಗೆ ಯೋಚನೆಗೆ ಬಂದದ್ದು ಓ-ಹರ್ನ್‌ 20ನೇ ಶತಮಾನದ ಅಕ್ಷರ ಕಲಿತ ಮಹಿಳೆಯಾಗಿದ್ದುದರಿಂದ ಅದನ್ನು 50 ವರ್ಷಗಳನಂತರ ಬರವಣಿಗೆಯ ರೂಪಕ್ಕೆ ತಂದು ತೆರೆದ ಪ್ರಪಂಚಕ್ಕೆ ತನ್ನ ದುಃಖ ಮತ್ತು ಯಾತನೆಯನ್ನು ಬಿಚ್ಚಿಟ್ಟಿದ್ದಾಳೆ... ಎಲ್ಲ ಅವಮಾನವನ್ನೂ ಸಹಿಸಿಕೊಂಡು! ಒಂದರೆಗಳಿಗೆ ಮತ್ತೆ ಯೋಚನೆಗೆ ಸಿಲುಕುವಂತೆ ಮಾಡಿದ್ದು ಜಪಾನೀಯರು ಆ ಮಹಿಳೆಯರು ಗರ್ಭಧರಿಸಿ ರಾಕ್ಷಸಿ ಜಪಾನಿ ಪಿಂಡಗಳು ಜನ್ಮತಾಳದಂತೆ ಅದೇ ಜಪಾನೀಯರು ಎಚ್ಚರಿಕೆ ವಹಿಸಿ ಗರ್ಭಪಾತ ಮಾಡಿಸಿದರು... ಅದೊಂದು ಪುಣ್ಯದ ಕೆಲಸ. ಇದೀಗ ಭಾರತೀಯ ಉಪಖಂಡಕ್ಕೆ ಬರೋಣ.

ದ ನ್ಯೂಸ್‌ ಅವರ್‌ ಅಟ್‌ 9

ದ ನ್ಯೂಸ್‌ ಅವರ್‌ ಅಟ್‌ 9 " ದ ನ್ಯೂಸ್‌ ಅವರ್‌ ಅಟ್‌ 9” ಎಂಬ " ಟೈಮ್ಸ್‌ ನೌ " ಇಂಗ್ಲೀಷ್‌ ಸುದ್ದಿ ವಾಹಿನಿ ಕಾರ್ಯಕ್ರಮವನ್ನು ದಿನಾಂಕ 3-01-2017 ರ ರಾತ್ರಿ ನೋಡಿದ ಮೇಲೆ ನನಗೆ ಅನಿಸಿದ್ದು ... ಕಾರ್ಯಕ್ರಮದ ಅತಿಜ್ಞಾನಿ - ಬಹುಜ್ಞಾನಿ ಲಂಗರುದಾರಿಣಿ ನವಿಕ ಕುಮಾರ್‌ ಎಂಬ ಮಹಿಳೆ ಮತ್ತು ಆಕೆಯ ಸಹೋದ್ಯೋಗಿ ಮತ್ತೊಬ್ಬ ಅತಿಜ್ಞಾನಿ - ಬಹುಜ್ಞಾನಿ ಆನಂದ ನರಸಿಂಹನ್‌ ಇವರ ಜೊತೆಗೆ ಹಲವರು ವಿಷಯದ ಅತಿಜ್ಞಾನಿಯಜ್ಞಾನಿ ಚರ್ಚಾಹ್ವಾನಿತ ಸದಸ್ಯರು ಭಾಗವಹಿಸಿದ ಎರಡು ಗಂಟೆಗಳ ವ್ಯರ್ಥಾಲಾಪಗಳು ಸಮಸ್ಯೆಯ ಗಂಭೀರತೆಗಿಂತ ತಮಾಷೆಯೆನಿಸುತ್ತಿತ್ತು . ಈ ವಿಷಯದ ಬಗ್ಗೆ ಬರೆಯುವುದೂ ಸಹ ಮತ್ತೊಂದು ವಿವಾದಕ್ಕೆ ಎಡೆಮಾಡುತ್ತದೆ ಎಂಬ ಭಯವೂ ಕಾಡುತ್ತದೆ . ಈವತ್ತಿನ ಜಗತ್ತಿನಲ್ಲಿ ಏನು ಹೇಳುವುದೂ ತಪ್ಪಾಗಿರುತ್ತದೆ . ತಡೆಯಲಾಗದೆ ಹೊಟ್ಟೆಯಿಂದ ಬರುವ ಡರ್‌ಪುಸ್‌ ಹೂಸೂ ಕೂಡ ಮರ್ಯಾದಸ್ಥ ನವಯುಗದ ಅತಿಜ್ಞಾನಿಗಳಿಗೆ ಅಸಂಬದ್ಧವಾಗಿರುತ್ತದೆ… ಆ ರೀತಿ ಹೂಸು ಬಿಡುವವರು ಅನಾಗರೀಕರಾಗಿರುತ್ತಾರೆ . ಯಾರಿಗೂ ಕೇಳಿಸದ ಹಾಗೆ ಒಳಗೊಳಗೇ ಪಿಸ್ಸನೆ ಬಿಡುವ ದುರ್ವಾಸನೆ ಹೂಸುಗಳಿಗೆ ಅದೇ ಮರ್ಯಾದೆ ಜನ ಮೂಗು ಮುಚ್ಚಿಕೊಂಡು ಕೈಯಲ್ಲಿ ಗಾಳಿ ಸೋವಿಕೊಳ್ಳುತ್ತಾರೆ . ಯಾಕಂದರೆ ಅಂಥ ಹೂಸನ್ನು ಅವರೇ ಬಿಟ್ಟಿರುತ್ತಾರೆ . ಮೊದಲಿಗೆ ನಡೆದದ್ದು ಹೊಸವರ್ಷದ ಆಗಮನದ ಹಿಂದಿನದಿನ ( ಡಿಸೆಂಬರ್‌ 31, 2016 ರ ರಾತ್ರಿ ) ಬೆಂಗಳೂರಿನ ಬ

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ ಆ ವತ್ತು ಸಂಕ್ರಾಂತಿ ಹಬ್ಬ . ಊರಿನಲ್ಲಿ ಹಬ್ಬದ ಸಡಗರ . ಆಚರಣೆ ಸಂಜೆ ಹೊತ್ನಾಗ್ಮಾತ್ರ . ನನಗಾಗ ಸುಮಾರು ಹನ್ನೊಂದ್ಹನ್ನೆರಡು ವರ್ಷಗಳಿದ್ದಿರಬಹ್ದು . ಮಾಧ್ಯಮಿಕ ಏಳನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಹುಡುಗ . ಹಬ್ಬದ ರಜೆ ಇತ್ತು . ಇಡೀದಿನ ಸಡಗರ ... ಊರು ಹುಡುಗ್ರು ಜೊತೆ ಕುಣಿದಾಡಿ ಸಂಜೆ ವೇಳ್ಯಾಗೊ ಹೊತ್ಗೆ ದಣಿದುಹೋಗಿದ್ದವ ನಾನು ! ಆಟವಾಡಿ ಮನೆಗೆ ಬಂದಾಗ ಸುಮಾರು ನಾಲ್ಕೂವರೆಯಿಂದ ಐದು ಗಂಟೆ ಸಮಯವಿರಬಹುದು . ಮನೆಯೊಳಗೆ ಹಬ್ಬದ ತಯಾರಿ ನಡೆಯುತ್ತಿತ್ತು . ಕಣ್ಣುಗಳಿಗೆ ನಿದ್ದೆಯಾವರಿಸುತ್ತಿತ್ತು ... ಮನೆಯ ಹೊರಗಿನ ಜಗುಲಿಯ ಮೇಲೆ ಮುದುರಿ ಮಲಗುತ್ತಾ ನಾನು ಅಮ್ಮನಿಗೆ ಹೇಳಿದ ತಾಕೀತಿನ ಮಾತು , “ ರಾತ್ರಿ ಎಚ್ಚರವಾದಮೇಲೆ ನನಗೆ ಹಬ್ಬದೂಟಕ್ಕೆ ಚಿತ್ರಾನ್ನವಿರಿಸಿರಬೇಕು .” ನಮ್ಮ ಮನೆಯ ಪಡಸಾಲೆಯಲ್ಲಿ ತಳವೂರುತ್ತಿದ್ದ ಅಗಸರ ನರಸವ್ವ ನಾನು ಅಮ್ಮನಿಗೆ ಹೇಳಿದ ಈ ತಾಕೀತಿನ ಮಾತನ್ನು ಕೇಳಿಸಿಕೊಂಡಿದ್ದಳು ! ನನ್ನನ್ನು ಯಾರೋ ಎಚ್ಚರಿಸುತ್ತಿದ್ದರು , “ ದಿವಾಕರ ... ಏಯ್‌ ದಿವಾಕರ ಏಳೋ…ಚಿತ್ರಾನ್ನ ತಿನ್ನಲ್ಲವೇನೋ ದಿವಾಕರ ..?” ಚಿತ್ರಾನ್ನದ ಮಾತು ಕಿವಿಗೆ ಬೀಳುತ್ತಲೇ ನಾನು ದಡಕ್ಕನೆ ಎದ್ದು ಕುಳಿತಿದ್ದೆ . ನನ್ನನ್ನು ಏಳಿಸುತ್ತಿದ್ದುದು ಅಗಸರ ನರಸವ್ವ . ಬುಜವಿಡಿದು ಅಲ್ಲಾಡಿಸುತ್ತಿದ್ದಳು ನಿದ್ದೆಯ ಮಂಪರಿನಿಂದ ಹೊರಬರಲು . ಕಣ್ಣುಜ್ಜಿಕೊ

ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು

ಸಿದ್ದಿ… ಸಿದ್ದಮ್ಮ… ಸಿದ್ದವ್ವ ! ಕೆ ಲವು ನೆನಪುಗಳು ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷ ಹನ್ನೊಂದು ದಿನಗಳಿಗೆ ... ಕರ್ನಾಟಕದ ಮೂಲೆಯೊಂದರ ಹಳ್ಳಿಯಲ್ಲಿ… ಅದರ ಹೆಸರು ಹೊಸಹಳ್ಳಿ ... ಜಂಗಮರ ಹೊಸಹಳ್ಳಿ ಎಂದೂ ಕರೆಯುತ್ತಾರೆ . ನನಗೀಗ ಅತ್ತಿರತ್ತಿರ ಅರವತ್ನಾಲ್ಕು ವರ್ಷಗಳು . ಅಗಾಗ್ಗೆ ಹಲವು ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತಿರುತ್ತವೆ . ಅವುಗಳೊಮ್ಮೊಮ್ಮೆ ಕನಸುಗಳಾಗಿ ಕಾಡುತ್ತಿರುತ್ತವೆ . ಅವುಗಳನ್ನು ದುಸ್ವಪ್ನಗಳು ಎನ್ನಲೂ ಆಗುವುದಿಲ್ಲ . ಹಲವಾರು ಬಾರಿ ಬಿದ್ದ ಕನಸುಗಳಲ್ಲಿ ಹೆಚ್ಚು ನಮ್ಮೂರಿನಲ್ಲಿ ಬದುಕುತ್ತಿದ್ದ ಹೊಲೆಯರ ಸಿದ್ದವ್ವನ ಬಗ್ಗೆಯಾಗಿದ್ದವು . ನನ್ನಮ್ಮನ ಅಪ್ಪ - ಅಮ್ಮನಿಗೆ ಆಗಿನ ಕಾಲಕ್ಕೆ ಮೂರೇ ಮಕ್ಕಳು , ಒಂದು ಗಂಡು ಎರಡು ಹೆಣ್ಣು . ಅದರಲ್ಲಿ ನನ್ನಮ್ಮನೇ ಹಿರಿಮಗಳು . ಹತ್ಹನ್ನೊಂದು ವರ್ಷದವಳಿದ್ದಾಗ ತನ್ನಮ್ಮನನ್ನು ಕಳೆದುಕೊಂಡಿದ್ದವಳು . ಬೆನ್ನಿಗೆ ಬಿದ್ದಿದ್ದ ತಮ್ಮ - ತಂಗಿಯನ್ನು ಸಾಕುವ ಹೊಣೆ ಆಕೆಯದಾಗಿತ್ತು . ಅಷ್ಟರ ವೇಳೆಗೆ ನನ್ನಜ್ಜನ ... ಅಮ್ಮನ ಅಪ್ಪ ... ಅಣ್ಣತಮ್ಮಂದಿರೆಲ್ಲಾ ಬೇರೆಯಾಗಿದ್ದು ಬೇರೆಬೇರೆ ಮನೆ ಮಾಡಿ ಸಂಸಾರ ಹೂಡಿದ್ದುದರಿಂದ ಈ ಮೂರು ಮಕ್ಕಳು ತಾಯಿಯಿಲ್ಲದ ತಬ್ಬಲಿಯಾಗಿದ್ದರು ... ಹಲವಾರು ಜನರ ಬುದ್ದಿ ಮಾತಿನಿಂದಾಗಿ ನನ್ನ ಹೆಣ್ಣಜ್ಜ ಎರಡನೆ ಮದುವೆಯಾಗುವ ಸಾಹಸಕ್ಕೆ ಹೋಗಿರಲಿಲ್ಲ . ಮನೆಯ ಅಡಿಗೆ ,

ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?

18-10-1015 ರ ಮೈಸೂರಿನ " ಕನ್ನಡಿಗರ ಪ್ರಜಾನುಡಿ " ದಿನಪತ್ರಿಕೆಯ ' ಪ್ರಜಾ ಸಾಪ್ತಾಹಿಕ ' ಪುರವಣಿಯಲ್ಲಿ ಪ್ರಕಟವಾಗಿದ್ದ ಈ ಬರವಣಿಗೆಯನ್ನು ನನ್ನ ಬ್ಲಾಗೋದುಗರಿಗಾಗಿ ಸಣ್ಣ ಸೇರಿಕೆ ತಿದ್ದುಪಡಿಯೊಡನೆ ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. ಕನ್ನಡ ದೂರದರ್ಶಿ ವಾಹಿನಿಗಳ ಮಹಾ ( ಮೆಗಾ ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು !? ನನ್ನ ಪತ್ನಿ " ಕಲರ್ಸ್‌ ಕನ್ನಡ " ( ಹಳೆಯ " ಈಟಿವಿ ಕನ್ನಡ '') ಎಂಬ ಕನ್ನಡ ದೂರದರ್ಶಿ ವಾಹಿನಿಯಲ್ಲಿ ಬರುವ ಕೆಲವು ಧಾರಾವಾಹಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದುದರಿಂದ ಸಮಯ ಕಳೆಯಲೆಂದು ಜೊತೆಯಲ್ಲಿ ಕೂತು ನೋಡುವುದು ನನಗೂ ಸಹ ಅಭ್ಯಾಸವಾಗಿಬಿಟ್ಟಿತ್ತು . .! ಮುಖ್ಯವಾಗಿ ನೋಡುತ್ತಿದ್ದುದು ಕನ್ನಡದ ಮಹಾ ಬುದ್ಧಿವಂತ ನಿರ್ದೇಶಕನೆಂದು ನಾನು ನಂಬಿದ್ದ ಟಿ . ಎನ್‌ . ಸೀತಾರಾಮ್‌ ನಿರ್ದೇಶನದ ಧಾರಾವಾಹಿಗಳನ್ನು . ... " ಮಾಯಾಮೃಗ , ಜ್ವಾಲಾಮುಖಿ , ಮನ್ವಂತರ ...'' ಮೊದಮೊದಲಿನವು ನೋಡಲು ಬೇಸರವಾಗುತ್ತಿರಲಿಲ್ಲ . ಅವುಗಳು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಗತಿಯಲ್ಲಿ ಚಲಿಸಿ ಮುಕ್ತಾಯವಾದಂಥ ಧಾರಾವಾಹಿಗಳು . ಆದರೆ ಆತ ಆನಂತರ ನಿರ್ದೇಶಿಸಿದ " ಮುಕ್ತ ; ಮುಕ್ತ ಮುಕ್ತ ಮತ್ತು ಮಹಾಪರ್ವ '' ಗಳೆಂಬ ಜಾಳು ಜಾಳಾಗಿ ನೇಯ್ದ ಹಳೆಯ ಬಟ್ಟೆಗಳಂತಹ ದಾರಾವಾಹಿಗಳು . "