ಅರೆಶತಮಾನದ ಒಳಬೇಗುದಿಯ ಮೌನ

ಅರೆಶತಮಾನದ ಒಳಬೇಗುದಿಯ ಮೌನ

ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನೀ ಸೈನಿಕರ ದೌರ್ಜನ್ಯಕ್ಕೊಳಗಾದ "ಸುಖದಾಯಿ ಹೆಂಗಸರು" ಎಂಬ ಹಣೆಪಟ್ಟಿಯನ್ನಂಟಿಸಿಕೊಂಡು ಲೈಂಗಿಕ ಗುಲಾಮಗಿರಿಗೆ ಬಿದ್ದಿದ್ದ ಯಾನ್‌ ರಫ್‌ ಓ-ಹರ್ನ್‌ ಎಂಬ ಡಚ್‌ ಈಸ್ಟ್‌ ಇಂಡಿಯನ್‌ ಜಾವಾ ಮೂಲದ ಹೆಣ್ಣುಮಗಳು ಅನುಭವಿಸಿದ ಯಾತನೆಯ ಜೀವಂತ ಕಥನ “ಅರೆಶತಮಾನದ ಮೌನ"... ಪುಸ್ತಕವನ್ನು ಇತ್ತೀಚೆಗೆ ಸಮಯದ ಬಿಡುವು ಮಾಡಿಕೊಂಡು ಓದಿದ್ದಾಯಿತು. ಓದಿದ ಮೇಲೆ ಒಂದೊಮ್ಮೆ ಸ್ವಲ್ಪಹೊತ್ತು ಯೋಚನೆಗೆ ಬಿದ್ದು ನಂತರ ನನ್ನ ಪತ್ನಿ ವಸಂತಳೊಡನೆ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿ ಸೈನಿಕರು ನಡೆಸಿದ ಅಮಾನವೀಯ ಘಟನೆಗಳ ಬಗ್ಗೆ ಚರ್ಚಿಸಲಾಯಿತು. ಸೆರೆಸಿಕ್ಕ ಹೆಣ್ಣುಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಮನಸ್ಸಿನ ಮೇಲೆ ಬಹಳೇ ಘಾಸಿಗೊಳಿಸಿತು. ನನಗೆ ಒಂದರೆಗಳಿಗೆ ಯೋಚನೆಗೆ ಬಂದದ್ದು ಓ-ಹರ್ನ್‌ 20ನೇ ಶತಮಾನದ ಅಕ್ಷರ ಕಲಿತ ಮಹಿಳೆಯಾಗಿದ್ದುದರಿಂದ ಅದನ್ನು 50 ವರ್ಷಗಳನಂತರ ಬರವಣಿಗೆಯ ರೂಪಕ್ಕೆ ತಂದು ತೆರೆದ ಪ್ರಪಂಚಕ್ಕೆ ತನ್ನ ದುಃಖ ಮತ್ತು ಯಾತನೆಯನ್ನು ಬಿಚ್ಚಿಟ್ಟಿದ್ದಾಳೆ... ಎಲ್ಲ ಅವಮಾನವನ್ನೂ ಸಹಿಸಿಕೊಂಡು! ಒಂದರೆಗಳಿಗೆ ಮತ್ತೆ ಯೋಚನೆಗೆ ಸಿಲುಕುವಂತೆ ಮಾಡಿದ್ದು ಜಪಾನೀಯರು ಆ ಮಹಿಳೆಯರು ಗರ್ಭಧರಿಸಿ ರಾಕ್ಷಸಿ ಜಪಾನಿ ಪಿಂಡಗಳು ಜನ್ಮತಾಳದಂತೆ ಅದೇ ಜಪಾನೀಯರು ಎಚ್ಚರಿಕೆ ವಹಿಸಿ ಗರ್ಭಪಾತ ಮಾಡಿಸಿದರು... ಅದೊಂದು ಪುಣ್ಯದ ಕೆಲಸ.


ಇದೀಗ ಭಾರತೀಯ ಉಪಖಂಡಕ್ಕೆ ಬರೋಣ. ಆರೇಳನೇ ಶತಮಾನದಿಂದ 18-19ನೇ ಶತಮಾನದರ್ಧಾಂತ್ಯದವರೆಗೆ ಅಖಂಡ ಭಾರತದ ಮೇಲೆ ಪರಕೀಯರು ಅವ್ಯಾಹತವಾಗಿ ನಡೆಸಿದ(ಅರಬರು, ತುರ್ಕಿಗಳು, ತುಘಲಕರು, ಖಿಲ್ಜಿಗಳು, ಬಹಮನೀಯರು, ಮೊಘಲರು, ಯೂರೋಪರು) ಆಕ್ರಮಣಗಳು, ಅತ್ಯಾಚಾರಗಳು, ಲೈಂಗಿಕ ಅತ್ಯಾಚಾರದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ವಿಷಜಂತುಗಳು ಜನಿಸಿ ನಂತರ ಈ ದೇಶವನ್ನು ಛಿದ್ರಗೊಳಿಸಿದ ಚರಿತ್ರೆ ಬರೆಯಲು ಇಲ್ಲಿನ ಹೆಣ್ಣುಮಕ್ಕಳಿಗೆ ಅಕ್ಷರಜ್ಞಾನವೇ ಇರಲಿಲ್ಲ. ಅಂದರೆ ಅಖಂಡ ಭಾರತದ ಅತ್ಯಾಚಾರದ ಅನಾಚಾರದ ಚರಿತ್ರೆ ಆ ಹೆಣ್ಣುಮಕ್ಕಳ ಜೊತೆಗೇ ಸತ್ತುಹೋಯಿತು. ಛಿದ್ರವಾಗಿ ಹೋದ ದೇಶದ ಪಳೆಯುಳಿಕೆಯಲ್ಲಿನ್ನೂ ದೌರ್ಜನ್ಯಗಳು ಅತ್ಯಾಚಾರಗಳು ಬೂದಿ ಮುಚ್ಚಿದ ಕೆಂಡದ ರೀತ್ಯ ಒಳಗೊಳಗೇ ಜಾತಿ ಧರ್ಮ ಭಾಷೆಗಳ ಹೆಸರಲ್ಲಿ ವೈಷಮ್ಯ ತಾಂಡವವಾಡುತ್ತಿವೆ. ತದನಂತರದಲ್ಲಿದು ""ಜಾತ್ಯಾತೀತತೆ'’ ಎಂಬ ಪದವೊಂದು ಉದಯಿಸಲು ಕಾರಣವೂ ಆಯಿತು. ಅದರ ನೆರಳಿನಲ್ಲಿಯೇ ಉದಯಿಸಿದ ರಾಜಕೀಯ ಪಭೃತಿಗಳು ಪಕ್ಷಗಳು ಅದೇ "ಜಾತ್ಯಾತೀತತೆ' ಪುಟಿಯಲಗೆ ಉಪಯೋಗಿಸಿಕೊಂಡು ಈ ದೇಶದ ಮೌಢ್ಯಜನತೆಯನ್ನಾಳುತ್ತಾ 60-65 ವರ್ಷಗಳೇ ಕಳೆದವು. ಅತ್ಯಾಚಾರಗಳು, ಅನಾಚಾರಗಳು, ದೌರ್ಜನ್ಯಗಳು ನಡೆಯುತ್ತಲೇ ಇವೆ. ಹುಟ್ಟಿದ ಪದಪುಂಜಗಳು... ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಭಾಷೀಯ ಅಲ್ಪಸಂಖ್ಯಾತರು...ಇತ್ಯಾದಿ ದೇಶವನ್ನು ಮತ್ತಷ್ಟು ವಿಭಜನೆಯ ಕಡೆಗೆ ನೂಕುತ್ತಿವೆ. "ಒಂದು ದೇಶ ಒಂದು ಜನ' ಎಂಬ ಪರಿಕಲ್ಪನೆಯೇ ಸತ್ತುಹೋಗುತ್ತಿದೆ. ಕೇವಲ ಭಾಷೆ ಜಾತಿ ಧರ್ಮಗಳು ಮಂಚೂಣಿಯಲ್ಲಿವೆ. ಅವುಗಳೇ ಅಧಿಕಾರಕ್ಕೇರಲು ಪುಟಿಯಲಗೆಯಾಗಿ ಮತ್ತು ಬದುಕಿನ ದುಡಿಮೆಯ ಮಾರ್ಗಗಳೂ ಆಗಿವೆ. ಇತ್ತೀಚಿನ, ದೇಶದಲ್ಲಿನ ಆಗುಹೋಗುಗಳನ್ನು ಗಮನಿಸಿ ಪರಿಶೀಲಿಸಿದರೆ... ಆಸೆಬುರುಕತನದ ಯುದ್ಧಗಳು, ಆಕ್ರಮಣ, ಅನಾಚಾರ, ಲೈಂಗಿಕ-ಅತ್ಯಾಚಾರ, ಗುಲಾಮತನ ಚರಿತ್ರೆಯಿಂದುದಯಿಸಿದ ದುಷ್ಪರಿಮಾಣಗಳೆೇ..? ಎಂಬುದರಲ್ಲಿ ಅನುಮಾನವೇ ಇಲ್ಲ.

ಏನೇ ಇರಲಿ ಜಪಾನಿ ಸೈನಿಕರ ಲೈಂಗಿಕ ಗುಲಾಮಿತನಕ್ಕೊಳಗಾದ ಒಬ್ಬ ಡಚ್‌ ಮಹಿಳೆಯ ಮಾರ್ಮಿಕ ಕಥಾಚರಿತವನ್ನು ಮನಸ್ಸಿನಾಳಕ್ಕಿಳಿಯುವಂತೆ ಕನ್ನಡಕ್ಕೆ ಅನುವಾದಿಸಿ ನಮ್ಮ ಮುಂದಿಟ್ಟು ಇಷ್ಟೆಲ್ಲಾ ಯೋಚಿಸುವಂತೆ ಮಾಡಿದುದಕ್ಕೆ ಶ್ರೀಯುತ ಅರುಣರವರಿಗೆ ಧನ್ಯವಾದಗಳು. ###

ದಿವಾಕರ ತಿಮ್ಮಣ್ಣ 

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ