ಗಣಕದ ಕಥೆ


ಗಣಕದ ಕಥೆ
ಈ ವರ್ಷದಾರಂಬದ(2017) ಜನವರಿ ತಿಂಗಳಿನಲ್ಲಿಯೇ ನನ್ನ ಮೇಜು-ಗಣಕ ಕೆಟ್ಟು ಹೋಯಿತು. ಅದರಲ್ಲಿದ್ದ ಗಣಕ-ಚಾಲಕ ತಂತ್ರಾಂಶದ ತಿರುಗಣೆ ಹಾಳಾಗಿ ಹೋಗಿತ್ತು. ಹೊಸದೊಂದು ತಿರುಗಣೆಯನ್ನು ತಂದುಹಾಕಲು ಕುಟುಂಬದ ಕಾರ್ಯಕ್ರಮದ ಸಲುವಾಗಿ ಕೂಡಲೆ ಸಾಧ್ಯವಾಗಲಿಲ್ಲ. ಹಾಗೂ ಸಮಯಮಾಡಿಕೊಂಡು ಒಂದು ಹೊಸ-ತಿರುಗಣೆಯನ್ನು ತಂದುಹಾಕಿದ ಒಂದೇ ತಿಂಗಳಿನಲ್ಲಿಯೇ ಹಳೆಯದರ ಜೊತೆಗೆ ಹೊಸದೂ ಸೇರಿಕೊಂಡಿತು ಮಾತೃಯಲಗೆಯೂ ಸೇರಿ. ಒಟ್ಟಾರೆ ಮೇಜು-ಗಣಕ ಮೂಲೆಗುಂಪಾಗಿ ನನ್ನ ಬರವಣಿಗೆ ನಿಂತು ಹೋಯಿತು. ನನ್ನ ಉಡಿ-ಗಣಕದಲ್ಲಿ ಬೆರಳಚ್ಚಿಸಲು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಕಾರಣ ನನ್ನ ಬರವಣಿಗೆ ಪೂರ್ಣವಾಗಿ ನಿಂತೇ ಹೋಯಿತು. ಇದೇ ಸಮಯದಲ್ಲಿ ನನ್ನ ಬಂಧುವೊಬ್ಬರು ಅವರು ಅನುವಾದಿಸಿದ್ದ "ಅರೆಶತಮಾನದ ಮೌನ" ಎಂಬ ಪುಸ್ತಕವನ್ನು ಅಂಚೆ/ಚಾರಕ ಮೂಲಕ ಕಳುಹಿಸಿಕೊಟ್ಟಿದ್ದರು. ಅದನ್ನು ಸಮಯವಾಗದೆ ಓದದೆ ಹಾಗೇ ಉಳಿಸಿಬಿಟ್ಟಿದ್ದೆ. ಇತ್ತೀಚೆಗೆ ಅದನ್ನು ಓದಿ ಮುಗಿಸಿ ಅದರ ಬಗ್ಗೆ ನನ್ನ ಅನಿಸಿಕೆಯನ್ನು ಅನುವಾದಕರಿಗೆ ಬರೆದು ಕಳುಹಿಸಲು ಪುನಃ ನನ್ನ ಬರವಣಿಗೆಯನ್ನು ಪ್ರಾರಂಬಿಸಿದ್ದೇನೆ. ಆ ನನ್ನ ಅನಿಸಿಕಾ ಬರವಣಿಗೆಯನ್ನು ಈಗಾಗಲೇ ನನ್ನ ಬ್ಲಾಗಿನಲ್ಲಿ ನೀವೆಲ್ಲಾ ಓದುಗರಿಗಾಗಿ ಪ್ರಕಟಿಸಿದ್ದೇನೆ.###

ದಿವಾಕರ ತಿಮ್ಮಣ್ಣ

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ