ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ


ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ

ಕನ್ನಡ ಲಿಪಿ ಮತ್ತು ಕೀಲಿಮಣೆ ವಿನ್ಯಾಸಗಳಿಗಾಗಿ ಶಿಷ್ಟತೆ ಮತ್ತು ಏಕರೂಪತೆಎಂಬ ಶೀರ್ಷಿಕೆಯಡಿಯಲ್ಲಿ 2014 ಏಪ್ರಿಲ್‌, 17ರ ಗುರುವಾರದಂದು ಪ್ರಕಟಿಸಿದ ಜಾಲಪುಟವನ್ನು ನುಡಿ 5.0” ತಂತ್ರಾಂಶದ ಸಹಾಯ ಪರಿವಿಡಿಯ ವರದಿಗೆ ಜೋಡಿಸಿಡಲಾಗಿದೆ. ಇದನ್ನು ಪರಿಶೀಲಿಸಿದ ನಂತರ ಈ ಒಂದು ಅನಿಸಿಕೆಯನ್ನು ಈ ಬರಹದ ಮೂಲಕ ಕಗಪ ಮುಂದಿಡಬೇಕೆಂದೆನಿಸಿತು.
2014ರ ಏಪ್ರಿಲ್‌ 8ರಂದು ವಿಂಡೋಸ್‌XP ಕಾರ್ಯಾಚರಣ ವ್ಯವಸ್ಥೆ(ಕಾವ್ಯ)ಗೆ ನೀಡುತ್ತಿದ್ದ ಬೆಂಬಲವನ್ನು ಮೈಕ್ರೊಸಾಫ್ಟ್‌ ಸಂಸ್ಥೆ ಹಿಂತೆಗೆದುಕೊಂಡು ಅದರ ಬಳಕೆದಾರರನ್ನು ನಡುನೀರಿನಲ್ಲಿ ಕೈಬಿಟ್ಟಿತು. ಪರಿಣಾಮವಾಗಿ ಈ ಲೇಖಕರು ಲಿನಕ್ಸ್‌ ನ ಓಪನ್‌ಸೂಸಕಾರ್ಯಾಚರಣ ವ್ಯವಸ್ಥೆ(ಕಾವ್ಯ)ಯನ್ನು ಅವರ ಗಣಕಕ್ಕೆ ಅಳವಡಿಸಿಕೊಂಡಿದ್ದಾಯಿತು. ಹಾಗಾಗಿ ನುಡಿ ಐಎಂಇ(ಇನ್ಪುಟ್‌ ಮೆತಡ್‌ ಇಂಜಿನ್‌) ತಂತ್ರಾಂಶ ಗಣಕದ ವಿಂಡೋಸ್‌xp ಕಾವ್ಯ ದೊಂದಿಗೆ ಸತ್ತು ಹೋಯಿತು. ಆದರೆ ಕನ್ನಡದ ಬರವಣಿಗೆಗೇನು ಮಾಡುವುದೆಂದು ತಲೆಕೆಡಿಸಿಕೊಳ್ಳಬೇಕಾಯಿತು.
ಭಾರತ ಸರ್ಕಾರ ಸ್ವಾಮ್ಯದ(ಸಿಡ್ಯಾಕ್‌ ಅಭಿವೃದ್ಧಿ ಪಡಿಸಿರುವ) ಲಿನಕ್ಸ್‌ ಕಾವ್ಯದ ಅರಿವಿದ್ದುದರಿಂದ ಬಾಸ್‌ 4. (ಭಾರತೀಯ ಆಪರೇಟಿಂಗ್‌ ಸಿಸ್ಟಂ ಅಂಡ್‌ ಸಲ್ಯೂಷನ್ಸ್‌)ನ್ನೂ ಸಹ ಗಣಕದಲ್ಲಳವಡಿಸಲಾಯಿತು. ಬಾಸ್‌4ರಲ್ಲಿ ಎಸ್‌ಸಿಐಎಂ(ಸ್ಮಾರ್ಟ್‌ ಕಾಮನ್‌ ಇನ್ಪುಟ್‌ ಮೆತಡ್‌) ಎಂಬ ಒಂದು ವೇಧಿಕೆ ತಂತ್ರಾಂಶವನ್ನು ಭಾರತೀಯ ಭಾಷೆಗಳ ಐಎಂಇ ಗಳಿಗಾಗಿ ಅಳವಡಿಸಲಾಗಿದ್ದಿತು – ಇದೊಂದು ಚೀನಿಯರು ಸೃಷ್ಟಿಸಿದ ತಂತ್ರಾಂಶ. ಇಲ್ಲಿ ಕನ್ನಡಕ್ಕಾಗಿ ಇಟ್ರಾನ್ಸ್, ಈನ್ಸ್‌ಕ್ರಿಪ್ಟ್‌, ಮತ್ತು ಕೆಜಿಪಿ ಎಂಬ ಮೂರು ಕೀಲಿಮಣೆಗಳಿದ್ದವು. ಇದರಲ್ಲಿ ಇಟ್ರಾನ್ಸ್‌ ಮತ್ತು ಈನ್ಸ್‌ಕ್ರಿಪ್ಟ್‌ ಕೀಲಿಮಣೆಗಳು m17n ತಂತ್ರಾಂಶದ .mim ಕಡತ ಕೀಲಿಮಣೆಗಳು – ಇಟ್ರಾನ್ಸ್‌ ಕನ್ನಡದ ಬರಹ ಕೀಲಿಮಣೆಗೆ ಸಮನಾದುದುಪ್ರತಿಯೊಂದು ವ್ಯಂಜನದ ಅಕಾರಕ್ಕಾಗಿ a ಕೀಲಿಸಬೇಕಾಗಿದ್ದುದರಿಂದ ಅದು ಲೇಖಕನಿಗೆ ಇಷ್ಟವಾಗುತ್ತಿರಲಿಲ್ಲ. ಈನ್ಸ್‌ಕ್ರಿಪ್ಟ್‌ ನ್ನು ಯಾರೋ ಕನ್ನಡದ ಗಂಧವಿಲ್ಲದವರು ಬರೆದಿದ್ದಾರೆಯೆಂದೆನಿಸಿತು ಯಾವಯಾವುದೋ ಕೀಲಿಗಳಿಗಳಿಗೆ ಯಾವಯಾವುದೋ ಕನ್ನಡದ ಅಕ್ಷರಗಳನ್ನು ಬರೆದಿದ್ದು ಸುಲಭವಾಗಿ ಕೀಲಿಸಲು ಸಾಧ್ಯವಾಗುತ್ತಿರಲಿಲ್ಲ. ಉಳಿದದ್ದು ಕೆಜಿಪಿ, ರೆಡ್‌ಹ್ಯಾಟ್‌ ಸಂಸ್ಥೆಯ ಜೆನ್ಸ್‌ ಪೀಟರ್‌ಸೆನ್‌ ಎನ್ನುವ ವ್ಯಕ್ತಿ ಸಿದ್ಧಪಡಿಸಿದ್ದಾನೆ. ಅದು ಕೋಷ್ಟಕ(ಟೇಬಲ್‌) ಆಧಾರಿತ .bin ಕಡತ, ಕನ್ನಡದ ನುಡಿ ಕೀಲಿಮಣೆಯಾಧಾರಿತ, ಲೇಖಕ ಸುಲಭವಾಗಿ ಕೀಲಿಸಲು ಇಷ್ಟಪಡುವುದೂ ಅದನ್ನೇ, ಅದರ ಪ್ರಯೋಗವನ್ನೂ ಮಾಡಲಾಯಿತುಒತ್ತಕ್ಷರಗಳನ್ನು ಮಾತ್ರ ತೆಗೆದುಕೊಳ್ಳುತ್ತಿತ್ತು ಗುಣಿತಾಕ್ಷರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದನ್ನು ಲೇಖಕ ಒಂದು .txt ಕಡತದ ಮೂಲಕ ಬಿಚ್ಚಿಡಲಾಗಿ ಗಮನಕ್ಕೆ ಬಂದದ್ದು ಅದಕ್ಕೆ ಗುಣಿತಾಕ್ಷರಗಳನ್ನೇ ಬರೆದಿಲ್ಲದಿರುವುದು! ಪರಿಣಾಮ ಲೇಖಕನಿಂದ ಕೋಷ್ಟಕ(ಟೇಬಲ್‌) ಆಧಾರಿತ ಹೊಸ ಕೀಲಿಮಣೆ ಸೃಷ್ಟಿಶೇ.99 ಭಾಗ ನುಡಿ ಕೀಲಿಮಣೆ ಆಧಾರಮತ್ತದಕ್ಕೆ ಒಂದಷ್ಟು ವಿಸ್ತಾರವನ್ನು ನೀಡಲಾಗಿದೆ ಎಫ಼್ ಕೀಲಿಯನ್ನು ಕೀಲಿಸದೆ ಒತ್ತಕ್ಷರಗಳನ್ನು ಬರೆಯುವ…ಜೊತೆಗೆ ಎಫ಼್ ಕೀಲಿಯ ಅವತಾರವನ್ನೂ ಉಳಿಸಿಕೊಳ್ಳಲಾಗಿದೆ!
ಸಿಡ್ಯಾಕ್‌ ಸಂಸ್ಥೆಯು ೨೦೧೪ ರಲ್ಲಿ ಬಾಸ್‌ ೫. ಅನ್ನು ಬಿಡುಗಡೆ ಮಾಡಿ ಎಸ್‌ಸಿಐಎಂ ಭಾರತೀಯ ಭಾಷೆಗಳಿಗಾಗಿ ಉಳಿಸಿಕೊಂಡಿದ್ದಿತು.
೨೦೧೫ ರಲ್ಲಿ ಬಿಡುಗಡೆಮಾಡಿರುವ ಬಾಸ್‌ ೬.ರಲ್ಲಿ ಐಬಸ್‌(ibus) ಎಂಬ ಬೇರೆ ವೇಧಿಕೆ ತಂತ್ರಾಂಶವನ್ನು ಅಳವಡಿಸಿದೆ. ಆದರೆ ಅದಿನ್ನೂ ಈ ವೇಧಿಕೆ ತಂತ್ರಾಂಶಕ್ಕೆ ಸಿದ್ಧಪಡಿಸಿದ ಭಾರತೀಯ ಭಾಷೆಗಳ ಕೋಷ್ಟಕ(ಟೇಬಲ್‌) ಆಧಾರಿತ ಕೀಲಿಮಣೆಗಳನ್ನು ವ್ಯವಸ್ಥಾತಟ್ಟೆ(ಸಿಸ್ಟಂಟ್ರೇ)ಗೆ ತೆಗೆದುಕೊಳ್ಳುತ್ತಿಲ್ಲ. ಅದನ್ನಿನ್ನೂ ಸಿಡ್ಯಾಕ್‌ ಪೂರ್ಣ ವಿನ್ಯಾಸ(configure)ಮಾಡಿಲ್ಲ. ಅದು ಕೇಳುವ ಹೆಚ್ಚುವರಿ ತಂತ್ರಾಂಶ ಇಳಿಸಲು ಸಿಡ್ಯಾಕ್‌ ಜಾಲತಾಣದಲ್ಲಿ ದೊರಕುವುದಿಲ್ಲ. ಆದಾಗ್ಯೂ ಐಬಸ್‌(ibus) ತೆಗೆದುಹಾಕಿ ಎಸ್‌ಸಿಐಎಂ(scim) ಅನ್ನು ಅಳವಡಿಸಿಕೊಳ್ಳಬಹುದು. ಇದೇ ರೀತಿ ಎಫ಼್‌ಸಿಟಿಕ್ಸ್‌(fcitx) ಎಂಬ ಇನ್ನೊಂದು ವೇಧಿಕೆ ತಂತ್ರಾಶವೂ ಲಭ್ಯವಿರುತ್ತದೆ. ಈ ಎಲ್ಲ ವೇಧಿಕೆ ತಂತ್ರಾಂಶಗಳು ಲಿನಕ್ಸ್‌ ಕಾವ್ಯಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಲಭ್ಯವಿರುವ ಭಾರತೀಯ ಭಾಷಾ ಏಕರೂಪ(ಯೂನಿಕೋಡ್‌) ಲಿಪಿಗಳಿಗೆ ಸಿದ್ಧಪಡಿಸಿದ m17n ಭಾಷಾ ime(input method engine) ಕೀಲಿಮಣೆಗಳು ದೊರಕುತ್ತವೆ.
ಇಲ್ಲಿ ಮುಕ್ಯವಾಗಿ ಚರ್ಚಿಸಬೇಕಾದ ವಿಷಯ ಶಿಷ್ಟತೆ ಮತ್ತು ಏಕರೂಪತೆ ಬಗ್ಗೆ ಕನ್ನಡದಲ್ಲಿ ಈ ಮೊದಲೇ ಇದ್ದ ಏಕರೂಪ/ಏಕನೀತಿ (ಯೂನಿಕೋಡ್‌) ಲಿಪಿಗಳಲ್ಲಿ ಪರಿಪೂರ್ಣ ಲಿಪಿಯೆಂದರೆ ಲೋಹಿತ್‌ ಕನ್ನಡ ಲಿಪಿ. ಇದರಲ್ಲಿ ಶಾಸ್ತ್ರೀಯ ಕನ್ನಡಕ್ಕೆ ಬೇಕಾದ ಎಲ್ಲ ಗ್ಲಿಫ಼್‌/ಚಿಹ್ನೆಗಳು ಇವೆ. ಉಳಿದವುಗಳಲ್ಲಿಅಂದರೆ ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ, ನವಿಲು ಇವುಗಳು ಪರಿಪೂರ್ಣವಾಗಿಲ್ಲ. ವಿಶೇಷ ಗುರುತು/ಚಿಹ್ನೆಗಳಲ್ಲಿ ಹಲವು ಚಿಹ್ನೆಗಳು ಬಿಟ್ಟುಹೋಗಿವೆ. ಇವುಗಳಲ್ಲಿ ಕೇದಗೆ ಮತ್ತು ಗುಬ್ಬಿ ಲಿಪಿಗಳು ಒಂದೇ ರೀತಿಯಲ್ಲಿದ್ದು ಬೇರೆಬೇರೆ ಹೆಸರಿನಲ್ಲಿ ಬೇರೆಬೇರೆ ರಚನಕಾರರ ಹೆಸರಿನಲ್ಲಿ ರಚಿತವಾಗಿವೆ. ಹಾಗೆಯೇ ನವಿಲು ಮತ್ತು ಮಲ್ಲಿಗೆ ಲಿಪಿಗಳು. ಸಂಪಿಗೆ ಲಿಪಿ ಮಾತ್ರ ಭಿನ್ನವಾಗಿದೆ. ಲೋಹಿತ್‌ ಕನ್ನಡ ಲಿಪಿಯನ್ನು ರೆಡ್‌ಹ್ಯಾಟ್‌ ಲಿನಕ್ಸ್‌ ಸಂಸ್ಥೆ ರಚಿಸಿದ್ದರೆ ಉಳಿದೈದು ಲಿಪಿಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಕರ್ನಾಟಕ ಸರ್ಕಾರದ ಪ್ರಾಯೋಜತ್ವದಲ್ಲಿ ರಚಿಸಿದೆ. ಇನ್ನುಳಿದಂತೆ ದೊರಕುತ್ತಿದ್ದ ಏಕರೂಪ/ಏಕನೀತಿ ಲಿಪಿಗಳೆಂದರೆ ಆರಿಯಲ್‌ ಯೂನಿಕೋಡ್‌ ಎಂಎಸ್‌ ಎಂಬ ಬಹುಭಾಷಾ ಲಿಪಿ ಮತ್ತು ತುಂಗಾ. ಈ ಎರಡು ಲಿಪಿಗಳೂ ಖಾಸಗಿ ಮಾಲೀಕತ್ವದ ಮೈಕ್ರೊಸಾಫ಼್ಟ್ ಸಂಸ್ಥೆಯ ಒಡೆತನಕ್ಕೆ ಸೇರಿವೆ. ವಿಂಡೋಸ್‌ ಕಾವ್ಯ ತಂತ್ರಾಂಶದಲ್ಲಿ ಮಾತ್ರವೇ ಬಳಸಬಹುದಾದಂತಹವು. ಲಿನಕ್ಸ್‌ ತಂತ್ರಾಂಶಗಳಲ್ಲಿ ಅಳವಡಿಸಿಕೊಂಡರೆ ಕಾನೂನು ಬಾಹಿರವಾಗಬಹುದು?! ಆದರೆ ಎರಡೂ ಅಪರಿಪೂರ್ಣ ಲಿಪಿಗಳುಶಾಸ್ತ್ರೀಯ ಕನ್ನಡ ಬಳಕೆಗೆ ಯೋಗ್ಯವಾಗಿಲ್ಲ. ಶಿಷ್ಟತೆ ಮತ್ತು ಏಕರೂಪತೆ ಎಂಬುದು ವಿಂಡೋಸ್‌ ಕಾವ್ಯ ತಂತ್ರಾಂಶಕ್ಕೆ ಈಗಾಗಲೇ ಸಿದ್ಧಪಡಿಸಿರುವ ನುಡಿ, ಬರಹ, ಶ್ರೀಲಿಪಿ, ಎಸ್‌ಆರ್‌ಜಿ, ಅನು, ಸುರಭಿ ಮತ್ತು ಪ್ರಕಾಶಕ್‌ ತಮ್ಮದೇ ಆದ ಲಿಪಿಗಳ ಆಧಾರಿತ ತಂತ್ರಾಂಶಗಳು. ಏಕಂದರೆ ಇವುಗಳ ಒಂದರ ಲಿಪಿ ಇನ್ನೊಂದರ ತಂತ್ರಾಂಶದಲ್ಲಿ ಕಾರ್ಯವಹಿಸುವುದಿಲ್ಲ. ಆದರೆ ಪದ ಎಂಬ ತಂತ್ರಾಂಶ ಮಾತ್ರ ತನ್ನದೇ ಆದ ಲಿಪಿಗಳನ್ನು ಬರೆದುಕೊಂಡಿಲ್ಲಅದು ಲಭ್ಯವಿರುವ ಏಕರೂಪ ಲಿಪಿಗಳನ್ನು ಮಾತ್ರವೇ ಬಳಸಿಕೊಳ್ಳುತ್ತದೆ, ಲೇಖಕನ ಗಣಕದಲ್ಲಿ ತುಂಗಾಲಿಪಿ ಪೂರ್ವನಿಯೋಜಿತ(ಡಿಫಾ಼ಲ್ಟ್‌) ಲಿಪಿಯಾಗಿ ಕೂರುತ್ತದೆ. ಈ ತಂತ್ರಾಂಶ ಶಿಷ್ಟತೆ ಮತ್ತು ಏಕರೂಪತೆ ಬದ್ಧತೆಯನ್ನು ಅನುಸರಿಸಿದೆಯೆಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ಈ ನೀತಿ ಬೇಕಿಲ್ಲ.
ಲಭ್ಯವಿರುವ ನೂತನ ಕನ್ನಡ ಏಕರೂಪ/ಏಕನೀತಿ(ಯೂನಿಕೋಡ್‌) ಲಿಪಿಗಳು:
ಮೇಲೆ ತಿಳಿಸಿದ ಏಕರೂಪ ಲಿಪಿಗಳ ಹೊರತಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಸಾಹಿತಿಗಳ ಹೆಸರಿನಲ್ಲಿ ಬರೆಸಿರುವ kar <ಸಾಹಿತಿ>.ttf (<ಸಾಹಿತಿಯ ಹೆಸರು>) ಹನ್ನೆರಡು ನೂತನವಾದ ವಿಭಿನ್ನ ಲಿಪಿಗಳು ಬಂದಿವೆ, ಇದರಲ್ಲಿ ಯುಆರ್‌ ಅನಂತಮೂರ್ತಿ ಲಿಪಿ ಸರಿಯಾಗಿ ಕಾರ್ಯನಿರ್ವವಹಿಸುವುದಿಲ್ಲ, ಉಳಿದ ಹನ್ನೊಂದು ಲಿಪಿಗಳು ಕಾರ್ಯವಹಿಸಿದರೂ ಕೆಲವು ಲಿಪಿಗಳು ಎರಡು ಅಥವಾ ಮೂರು ಒತ್ತಕ್ಷರಗಳನ್ನು ನೀಡಿದಾಗ ಲಂಬತಳದಲ್ಲಿ ತೆಗೆದುಕೊಳ್ಳುವುದರಿಂದ ಪುಟದ ಕೆಳಸಾಲು ಮತ್ತಷ್ಟು ಕೆಳಕ್ಕೆ ತಳ್ಳಲ್ಪಡುತ್ತದೆ ಸಾಲುಗಳ ಅಂತರ ಹೆಚ್ಚೆನಿಸುತ್ತದೆ. ಅಕ್ಷರಗಳ ಗ್ಲಿಫ಼್‌ಗಳನ್ನು ಅವುಗಳ ಸಂಕೇತ ಸ್ಥಾನಗಳಲ್ಲಿ ಕೂರಿಸಿ ಸಮಂಜಸ ಹೊಂದಾಣಿಕೆ ಸ್ಥಳಾವಕಾಶ ಮಾಡುವಲ್ಲಿ ಲಿಪಿ ನಿರ್ಮಾಪಕರು ವಿಫಲರಾಗಿದ್ದಾರೆ. ಶಾಸ್ತ್ರೀಯ ಕನ್ನಡದಲ್ಲಿ ಪು ಅಕ್ಷರಕ್ಕೆ ಕೆಳಗಿನಿಂದ ಕೊಂಬು ಪು ಹೀಗೆ ನೀಡುವುದಾಗಿದ್ದಿತುಶಾಲೆಯಲ್ಲಿ ಲೇಖಕರು ಕಲಿತದ್ದೂ ಹಾಗೆಯೇ. ಆದರೆ ಶಿಷ್ಟತೆ ಮತ್ತು ಏಕರೂಪತೆ ಪಾಠ ಹೇಳುತ್ತಿರುವ ಕಗಪ ತನ್ನ ನುಡಿ ತಂತ್ರಾಂಶದಲ್ಲಿ ಹಾಗೆಯೇ ಪು ಮುಂದುವರಿಸಿದೆ. ನುಡಿ ೫.೦ ತಂತ್ರಾಂಶದ ಜೊತೆಯಲ್ಲಿ ಹಳೆಯ ನುಡಿ ಲಿಪಿಗಳ ಜೊತೆಗೆ ಹತ್ತು ಜೋಡಿಗಳ ವಿಭಿನ್ನ ಏಕನೀತಿ/ಏಕರೂಪ(ಯೂನಿಕೋಡ್‌) ಲಿಪಿಗಳನ್ನು ಮತ್ತು ಒಂದು ಪ್ರತ್ಯೇಕ ಇಂಚರ.ttf ಲಿಪಿಯನ್ನೂ ನೀಡಿದೆ. ಈ ಎಲ್ಲ ಲಿಪಿಗಳಲ್ಲಿಯೂ ಅದೇ ಪು ಚಾಳಿಯನ್ನುಳಿಸಿದೆ. ಲೋಹಿತ್‌ ಕನ್ನಡ, ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ, ನವಿಲು, ಆರಿಯಲ್‌ ಯೂನಿಕೋಡ್‌ ಎಂಎಸ್‌, ಮತ್ತು ತುಂಗಾ ಲಿಪಿಗಳು ಸರಿಯಾದ ಶಾಸ್ತ್ರೀಯ ಪು ಆಕ್ಷರವನ್ನು ಕೊಡುತ್ತವೆ. ಕಗಪ ಎಲ್ಲರಿಗೂ ಪಾಠ ಹೇಳುವ ಮೊದಲು ತನ್ನನ್ನು ತಾನು ಸರಿಪಡಿಸಿಕೊಳ್ಳುವುದೊಳ್ಳೆಯದು. ಜೊತೆಗೆ ಈ ಜೋಡಿ ಹತ್ತು ಲಿಪಿಗಳ ಬದಲಿಗೆ ಇನ್ನೂ ಹತ್ತು ಭಿನ್ನತೆಯ ಲಿಪಿ ಬರೆಯಬಹುದಿತ್ತು. ಒಂದೇ ರೀತಿಯ ಎರಡು ಪ್ರತ್ಯೇಕ ಲಿಪಿಗಳೇಕೆ? ಏನು ವ್ಯತ್ಯಾಸ..? ಕನ್ನಡ ಮತ್ತು ಆಂಗ್ಲ ಅಂಕಿಗಳಿಗಾಗಿ ಈ ಪ್ರತ್ಯೇಕತೆ ಮಾತ್ರ. ಕನ್ನಡ ಅಂಕಿಗಳಿಗಾಗಿ ಲಿಪಿ ಸಂಕೇತ ಚೌಕುಟ್ಟುಗಳನ್ನು ನಿರ್ಧರಿಸಿದ್ದಾಗ್ಯೂ ಆಂಗ್ಲ ಅಂಕಿಗಳಿಗೆ ನೀಡಿರುವ ಸಂಕೇತ ಚೌಕಟ್ಟುಗಳಲ್ಲೂ ಕನ್ನಡ ಅಂಕಿಗಳ ಗ್ಲಿಫ಼್‌ಗಳನ್ನು ತುಂಬಲಾಗಿದೆ. ಈ ಕಾರಣಕ್ಕಾಗಿ ಒಂದೇ ರೀತಿಯ ಎರೆಡೆರೆಡು ಲಿಪಿಗಳು.
ತನ್ನ ಪ್ರತಿಷ್ಠೆಯ ತಂತ್ರಾಂಶನುಡಿ ಎಂಬ ಆಲದಮರಕ್ಕೆ ನೇತಾಡುತ್ತಿರುವ ಕಗಪ ತನ್ನ ಇಸ್ಕಿ ಲಿಪಿಗಳಿಗೆ ಅಂಟಿಕೊಂಡಿರುವುದು ಶತಸಿದ್ಧವಾಗಿದೆ. ಇಸ್ಕಿ ಲಿಪಿಗಳ ಏಕರೂಪ ಲಿಪಿಪರಿವರ್ತನೆಗಾಗಿ ಮತ್ತೊಂದು ಪರಿವರ್ತನಾ ತಂತ್ರಾಶವನ್ನು ಸೃಷ್ಟಿ ಮಾಡಿದೆ. ಪರಿವರ್ತನಾ ಏಕರೂಪ ಕಡತಗಳನ್ನು ಸೃಷ್ಟಿಸಲು ತಗಲುವ ಸಮಯ ಮತ್ತು ಕೆಲಸದ ಅಗಾಧತೆಯನ್ನು ಪರಿಗಣಿಸಿದರೆ ಕಗಪ ತನ್ನ ನುಡಿ ತಂತ್ರಾಂಶದ ನೇರನುಡಿ ಏಕರೂಪ(ಯೂನಿಕೋಡ್‌ ಆಪ್ಚನ್‌)ವನ್ನುಳಿಸಿಕೊಂಡು ಇಸ್ಕಿ ಲಿಪಿ ಆಧಾರಿತ ನೇರನುಡಿಯನ್ನು ಕೊಲ್ಲುವುದೊಳ್ಳೆಯದು. ಆಗ ಈ ಪರಿವರ್ತನೆಯೆಂಬ ಕೆಲಸದ ಸಮಯ ಉಳಿತಾಯವಾಗುತ್ತದೆ.
ಇಸ್ಕಿ ಲಿಪಿಗಳು ನುಡಿ ತಂತ್ರಾಂಶವನ್ನು ಹೊರತು ಬೇರಾವ ತಂತ್ರಾಂಶದಲ್ಲೂ ಕಾರ್ಯನಿರ್ವಹಿಸುವುದಿಲ್ಲ. ನೇರವಾಗಿ ಬಳಸಿದರೆ ಪದಸಂಸ್ಕರಣ(ಎಂಎಸ್‌ ವರ್ಡ್‌/ ಲಿಬರ್‌ಆಫೀ಼ಸ್‌ ಯಾ ಒಪನ್‌ ಅಫೀ಼ಸ್‌) ಪುಟಗಳಲ್ಲಿ, .ಟಿಎಕ್ಸ್‌ಟಿ(.txt) ಕಡತಗಳಲ್ಲಿ ಮತ್ತು ಜಾಲಪುಟಗಳಲ್ಲಿ ಕನ್ನಡದ ಅಪೂರ್ಣ ಅಕ್ಷರಗಳನ್ನು ಅಥವಾ ವಿಚಿತ್ರ ಲ್ಯಾಟಿನ್‌ ಅಕ್ಷರಗಳನ್ನು ಬರೆದು ವಿರೋಧಾಭಾಸಗಳಿಗೆ ಕಾರಣವಾಗುತ್ತಿದೆ. ಇದಾವ ಪುರುಷಾರ್ಥಕ್ಕೆ? ಅದೇರೀತಿ ಬರಹ, ಶ್ರೀಲಿಪಿ, ಎಸ್‌ಆರ್‌ಜಿ, ಅನು, ಸುರಭಿ ಮತ್ತು ಪ್ರಕಾಶಕ್‌ ತಂತ್ರಾಂಶದ ಲಿಪಿಗಳು ಆಯಾ ತಂತ್ರಾಂಶಗಳನ್ನು ಹೊರತು ಬೇರಾವ ತಂತ್ರಾಂಶದಲ್ಲೂ ಕಾರ್ಯವಹಿಸುವುದಿಲ್ಲ.
ಇದೀಗ ಈ ನುಡಿ ಐಎಂಇ(ಇನ್ಪುಟ್‌ ಮೆತಡ್‌ ಇಂಜಿನ್‌) ಅನ್ನು ಲಿನಕ್ಸ್‌ ಕಾರ್ಯಾಚರಣ ವ್ಯವಸ್ಥೆ ತಂತ್ರಾಂಶಗಗಳಿಗೂ ಸಿದ್ಧಪಡಿಸುವುದಾಗಿ ಅದರ ವರದಿಯಲ್ಲಿ ತಿಳಿಸಿದೆ. ಈ ಲೇಖಕ ಈಗಾಗಲೇ ನುಡಿ ೫.೦ ತಂತ್ರಾಂಶವನ್ನು ಓಪನ್‌ಸೂಸ ೪೨. ಲಿನಕ್ಸ್‌ ಕಾರ್ಯಾಚರಣ ವ್ಯವಸ್ಥೆ ಯಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿ-.೦ರ ಪದಸ್ಕರಣ ಪುಟದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಲಿಬರ್‌ಆಫೀ಼ಸ್‌ ಪದಸಂಸ್ಕರಣ ಪುಟದಲ್ಲಿ ನೇರನುಡಿ ಕೆಲಸಮಾಡುವುದಿಲ್ಲ. ಲಿನಕ್ಸನಲ್ಲಿ ನುಡಿಯ ಇಸ್ಕಿ ಲಿಪಿಗಳು ಕೆಲಸಕ್ಕೆ ಬಾರದ ಲಿಪಿಗಳು. ಒಂದು ಸಹಾಯವೆಂದರೆ ಇಸ್ಕಿ ನುಡಿಲಿಪಿಗಳಲ್ಲಿ ತಯಾರಿಸಿದ ಕಡತಗಳಿದ್ದರೆ ಓದಲು ಸಹಾಯಮಾಡುತ್ತವೆ. ಇಲ್ಲದಿದ್ದಲ್ಲಿ ಲ್ಯಾಟಿನ್‌ ಲಿಪಿಗಳು ಪ್ರತ್ಯಕ್ಷವಾಗುತ್ತವೆ ಅಥವಾ ಖಾಲಿ ಚೌಕಟ್ಟುಗಳು ಮೂಡುತ್ತವೆ.
ಈಗಾಗಲೇ scim, fcitx ಗಳು ಹಳತಾಗಿದ್ದರೆ, ibus ವೇಧಿಕೆತಂತ್ರಾಂಶವನ್ನು ಬಹು ಶಕ್ತಿಯುತ(ಡೈನಮಿಕ್‌) ಐಎಂಇ ರೂಪಕ ಎಂದು ಲಿನಕ್ಸ್‌ ಬಳಕೆದಾರರು ಪರಿಗಣಿಸಿರುವುದರಿಂದ ಅದು ಜಾಗತಿಕವಾಗಿ ಮೇಲ್ಸ್ತರದಲ್ಲಿದೆ ಎಂದರ್ಥ… ಅದಕ್ಕೆ ಕನ್ನಡದ ಐಎಂಇ ಕೀಲಿಮಣೆಗಳನ್ನು ಸಿದ್ಧಪಡಿಸಬಹುದು. ಬೇಕಾಗಿರುವುದು ಆಸ್ಕಿ ಆಧಾರಿತ ಏಕರೂಪ(ಯೂನಿಕೋಡ್‌) ಲಿಪಿಗಳು ಮಾತ್ರ. ಚೀನಾ, ಕೊರಿಯ, ಜಪಾನ್‌, ವಿಯಟ್ನಾಂ, ಥೈಲ್ಯಾಂಡ್‌ ಮತ್ತಿತರ ಏಷಿಯಾ ದೇಶಗಳೆಲ್ಲ ಈ ತಂತ್ರಾಂಶವನ್ನು ಈಗಾಗಲೇ ಬಳಸುತ್ತಿವೆ ಮತ್ತು ಬದ್ಧವಾಗಿವೆ. ಹಾಗೂ ತಂತ್ರಾಂಶಗಳು ಜಾಗತಿಕವಾಗಿ ಮಂಚೂಣಿಯಲ್ಲಿವೆ. ವಿಶೇಷವೆಂದರೆ ಈ ತಂತ್ರಾಂಶಗಳು ವಿಂಡೋಸ್‌ ಕಾವ್ಯದಲ್ಲಿ ಕಾರ್ಯವಹಿಸುವುದಿಲ್ಲ ಮತ್ತು ಅಳವಡಿಸಲಾಗುವುದಿಲ್ಲ. ಹೀಗಿರುವಾಗ್ಗೆ ಶಿಷ್ಟತೆ ಮತ್ತು ಏಕರೂಪತೆ ಬಗ್ಗೆ ನೇಮಕವಾದ ಸಮಿತಿಯು ನೀಡಿರುವ ೧ – ೪ ರವರೆಗಿನ ಶಿಪಾರಸ್ಸುಗಳು ಹಾಸ್ಯಾಸ್ಪದ. ಏಕೆಂದರೆ ಸಮಿತಿ ಕೇವಲ ವ್ಯಾಪರೀ ಮನೋಭಾವದ ಮೈಕ್ರೋಸಾಫ಼್ಟ್‌ ಸಂಸ್ಥೆಯ ವಿಂಡೋಸ್‌ ಆಧಾರಿತ ಐಎಂಇ ಗಳಿಗೆ ಮಾತ್ರ ಅನ್ವಯಿಸಿ ಈ ಮಾತು ಹೇಳಿದಂತಿದೆ. ಜೊತೆಗೆ ಸರ್ಕಾರಗಳೇಕೆ ಇನ್ನೂ ತನ್ನ ಗಣಕಗಳಿಗೆ ವಿಂಡೋಸ್‌ ಕಾವ್ಯ ತಂತ್ರಾಶವನ್ನೇ ಅವಲಂಬಿಸದೆಯೆಂಬುದೂ ಅರ್ಥವಾಗುವುದಿಲ್ಲಸಿಡ್ಯಾಕ್‌ ಸಂಸ್ಥೆ ಬಾಸ್‌ ಲಿನಕ್ಸ್‌ ಕಾವ್ಯ(ಕಾರ್ಯಾಚರಣ ವ್ಯವಸ್ಥೆ) ಅಳವಡಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳಿಗೂ ಗೋಗರೆದು ಮನವಿ ಮಾಡುತ್ತಿದ್ದಾಗ್ಯೂ ಕೂಡ ಯಾವ ಸರ್ಕಾರಗಳೂ ವಿಂಡೋಸ್‌ ಬಿಟ್ಟು ಈಚೆ ಬರುವುದಿಲ್ಲ ಏಕೆ?!
ಶಿಪಾರಸ್ಸುಗಳ ಇಬ್ಬಗೆ ನೀತಿ ಮತ್ತು ಪ್ರಕಟಣಾ ಪ್ರಪಂಚಕ್ಕೆ ಆಗುವ ಪರಿಣಾಮ
ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಈಗಾಗಲೇ ಇರುವ ಮಿತಿಯನ್ನು ಹೊಸ ಸಂಕೇತಗಳಿಗೆ(ಶಿಷ್ಟ ಮತ್ತು ಏಕರೂಪ) ಅನ್ವಯಿಸುವ ಅಕ್ಷರ ರೂಪಗಳಿಗೆ ಬದಲಿಸಲು ಅನುಕೂಲವಾಗುವಂತೆ ಬದಲಾವಣೆ ಸಾಧ್ಯತೆ ಅನುಕೂಲತೆಗಳನ್ನು (ಕನ್ವರ್ಷನ್ ಯುಟಿಲಿಟಿ) ನೀಡಬೇಕುಎಂಬ ಶಿಪಾರಸ್ಸನ್ನು ಗಮನಿಸಿದರೆ ಲ್ಯಾಟಿನ್‌ ಸಂಖೇತಕ್ಕೊಳಪಡಿಸಿದ ಇಸ್ಕಿಯ ನುಡಿ ಲಿಪಿಗಳನ್ನು ಮೊದಲು ನಿರ್ನಾಮಮಾಡುವುದರಿಂದ ಸಮಸ್ಯೆ ಬಗೆ ಹರಿಯುತ್ತದೆ ಎನ್ನಬಹುದು. ಈ ನೀತಿಯನ್ನು ಅನುಷ್ಟಾನಗೊಳಿಸಿದಲ್ಲಿ ನುಡಿಯೂ ಸೇರಿ ಹಲವು ಖಾಸಗಿ ಕಂಪನಿಗಳು ಕನ್ನಡ ಪ್ರಕಟಣಾ ಪ್ರಪಂಚಕ್ಕೆ ಬರೆದುಕೊಟ್ಟಿರುವ ಲಿಪಿಯಾಧಾರಿತ ಐಎಂಇ ತಂತ್ರಾಶಗಳು ಸಹಜವಾಗಿ ನಶಿಸುತ್ತವೆ. ಉದಾ: ಶ್ರೀಲಿಪಿ, ಬರಹ, ನುಡಿ, ಎಸ್‌ಆರ್‌ಜಿ, ಅನು, ಸುರಭಿ, ಪ್ರಕಾಶಕ್‌ ಮತ್ತು ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಇತ್ಯಾದಿತಂತ್ರಾಂಶಗಳು ಮತ್ತವುಗಳಿಗೆ ಸಂಬಂಧಿಸಿದ ಲಿಪಿಗಳು. ಕನ್ನಡದ ಪ್ರಕಟಣಾ ಪ್ರಪಂಚಕ್ಕೆ ಮತ್ತು ಮುದ್ರಣಾಲಯಗಳಿಗೆ ಸ್ವಲ್ಪಮಟ್ಟಿನ ಧಕ್ಕೆಯಾಗಬಹುದು. ಒಂದು ಸಮಾಧಾನವೆಂದರೆ ಕುವೆಂಪು ತಂತ್ರಾಂಶ ಬದಲಾವಣೆ ಸಾಧ್ಯತೆ(ಕನ್ವರ್ಷನ್ ಯುಟಿಲಿಟಿ) ಅನುಕೂಲತೆಗಳನ್ನೂ ಒದಗಿಸಿದೆ. ಆದರೆ ಬಾಸ್‌ ಲಿನಕ್ಸ್‌ ಕಾವ್ಯವನ್ನು ಗಣಕಗಳಿಗೆ ಅಳವಡಿಸಿದರೆ ಈ ಹೊಸ ಕನ್ನಡದ ಇಸ್ಕಿ ಲಿಪಿ ಆಧಾರಿತ ಐಎಂಇಗಳಿಗೆ ಅವಶ್ಯವಾಗಿ ಹಣ ಸುರಿಯುವುದನ್ನು ತಪ್ಪಿಸಬಹುದಾಗಿತ್ತು. ಕೇವಲ ಸಾಕಷ್ಟು ಏಕರೂಪ(ಯೂನಿಕೋಡ್‌) ಲಿಪಿಗಳನ್ನು ಅಭಿವೃದ್ಧಿ ಪಡಿಸಿದ್ದರೆ ಸಾಕಿತ್ತು. ಇನ್ನೊಂದು ಅನುಮಾನಾಸ್ಪದ ವಿಷಯವೆಂದರೆ ಕರ್ನಾಟಕ ಸರ್ಕಾರವಾಗಲೀ ಅಥವಾ ಕನ್ನಡ ವಿಶ್ವವಿದ್ಯಾಲಯವಾಗಲೀ ಏಕೆ ಈ ಬಹುರಾಷ್ಟ್ರೀಯ ಸಂಸ್ಥೆಯ ವಿಂಡೋಸ್‌ ಕಾವ್ಯ ವನ್ನೇ ಅವಲಂಭಿಸಿವೆಯೆನ್ನುವುದು?!
ವರದಿ ವಿವರಣೆಯ ೬ನ್ನು ಗಮನಿಸಿ…”, , , ಬ ಅಕ್ಷರಗಳಿಂದ ಢ, , , ಭ ಅಕ್ಷರಗಳನ್ನು ಪಡೆಯಲು ಹೊಕ್ಕಳ ಸೀಳು ಚಿಹ್ನೆಯನ್ನು ಸಂಕೇತ 115 ರಲ್ಲಿ ನೀಡಿರುವಂತೆ, ಡಿ, ದಿ, ಪಿ, ಬಿ ಅಕ್ಷರಗಳಿಂದ ಢಿ, ಧಿ, ಫಿ, ಭಿ ಅಕ್ಷರಗಳನ್ನು ಪಡೆಯಲು ಸಂಕೇತ 252 ರಲ್ಲಿ ಮತ್ತೊಂದು ಹೊಕ್ಕಳ ಸೀಳು ಚಿಹ್ನೆಯನ್ನು ನೀಡಲಾಗಿದೆ” ಈ ವಿವರಣೆ ಇಸ್ಕಿ ಸಂಕೇತ ಕುರಿತು ನೀಡಿರುವುದಾಗಿದೆ. ಕಾರಣ ನುಡಿ ಐಎಂಇ ತಂತ್ರಾಂಶವನ್ನು ನೇರವಾಗಿ ನುಡಿ ಇಸ್ಕಿ ಲಿಪಿಗಳಿಗೆ ಕೊಂಡಿ ಹಾಕಿ ಬರೆಯಲಾಗಿದೆ. ಈ ಸಂಕೇತಗಳು ಕೂಡ ಲ್ಯಾಟಿನ್‌ ಲಿಪಿ ಸಂಕೇತಗಳಿಗೆ ನೀಡಿದ ಚೌಕಟ್ಟುಗಳ ಧುರ್ಬಳಕೆಯಾಗಿದೆ. ಆದುದರಿಂದ ಶಿಷ್ಟತೆಏಕರೂಪತೆ ಸರ್ಕಾರದಿಂದಲೇ ಪ್ರಾರಂಬವಾಗಬೇಕು.
ಆ ಕಾರಣಕ್ಕಾಗಿಯೇ ಕಗಪದ ಹತ್ತು ಜೋಡಿ ಮತ್ತು ಇಂಚರ.ttf ಏಕರೂಪ ಲಿಪಿಗಳುಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹನ್ನೆರಡು ಏಕರೂಪ ಲಿಪಿಗಳು ಹೊರಬಂದಿರಬಹುದು. ಇನ್ನು ಇಸ್ಕಿಯನ್ನು ಪರಿಸಮಾಪ್ತಿ ಮಾಡುವುದೊಂದು ಬಾಕಿಯಿದೆ.
ಈ ಬರಹವನ್ನು ಕನ್ನಡದ ಏಕರೂಪ ಲಿಪಿ NudiUni01e.ttf ಅನ್ನು ಬಳಸಿ ಲಿಬರ್‌ಆಫೀ಼ಸ್‌ ಪದಸಂಸ್ಕರಣ ಪುಟದ ಮೇಲೆ ಬರೆದು ಎಂಎಸ್‌ ವರ್ಡ್‌.doc ಕಡತ ರೂಪದಲ್ಲಿ ಉಳಿಸಲಾಗಿದೆ. ಉಪಯೋಗಿಸಿದ ಐಎಂಇ ನಲ್ನುಡಿಕನ್ನಡ.(ಲೇಖಕರೇ ಎಸ್‌ಸಿಐಎಂ ತಂತ್ರಾಂಶಕ್ಕಾಗಿ ಸಿದ್ಧಪಡಿಸಿದ್ದು). ಬಳಸಿದ ಐಎಂಇ ಕನ್ನಡ ಅಂಕಿಗಳಿಗಾಗಿದ್ದುದು. ಲಿಪಿಯಲ್ಲಿ ಇಂಗ್ಲೀಷ್‌ ಮತ್ತು ಕನ್ನಡ ಅಂಕಿಗಳ ಎರಡೂ ಸಂಕೇತ ಚೌಕಟ್ಟುಗಳಲ್ಲಿ ಇಂಗ್ಲೀಷ್ ಅಂಕಿಗಳನ್ನೇ ತುಂಬಿರುವುದರಿಂದ ಬರಹದಲ್ಲಿ ಇಂಗ್ಲೀಷ್‌ ಅಂಕಿಗಳೇ ಮೂಡಿದೆ. ಲೋಹಿತ್‌ ಕನ್ನಡ, ಕೇದಗೆ, ಗುಬ್ಬಿ, ಸಂಪಿಗೆ, ಮಲ್ಲಿಗೆ ಮತ್ತು ನವಿಲು ಲಿಪಿಗಳಲ್ಲಿ ಈ ಸಮಸ್ಯೆಯಿಲ್ಲ. ಅಲ್ಲಿ ಆಯಾ ಸಂಕೇತ ಸ್ಥಾನಗಳಲ್ಲಿ ಆಯಾ ಅಂಕಿಗಳೇ ತುಂಬಿವೆ. ಅಂದರೆ ಕಗಪ ಅದರ ಇಸ್ಕಿ ಲಿಪಿಗಳ ಇಬ್ಬಗೆ ಭ್ರಮೆಯಿಂದ ಹೊರಬಂದಿಲ್ಲ ಎನ್ನುವುದನ್ನಿದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಏಕರೂಪ ಲಿಪಿಗಳನ್ನು ಕಗಪ ನುಡಿ ತಂತ್ರಾಂಶಕ್ಕಾಗಿಯೇ ಬರೆಸಿದಂತಿದೆ. ಜಾಗತಿಕ ಉಪಯೋಗಕ್ಕಾಗಿ ಅಲ್ಲವೆಂಬುದು ಇದರಿಂದ ಇನ್ನಷ್ಟು ಸುಸ್ಪಷ್ಟ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತುತಪಡಿಸಿರುವ kar <ಸಾಹಿತಿ>.ttf ಲಿಪಿಗಳಲ್ಲಿ ಈ ಇಬ್ಬಗೆ ವ್ಯಕ್ತವಾಗಿಲ್ಲಜಾಗತಿಕ ಉಪಯೋಗಕ್ಕೆ ಸೂಕ್ತವಾಗಿವೆ.
ಲಿಪ್ಯಂತೀಕರಣದ ಆಭಾಸಗಳು
ಲಿಪ್ಯಂತೀಕರಣದಲ್ಲಿ ಇಂಗ್ಲೀಷ್‌ ಪದಗಳನ್ನು ಕನ್ನಡದಲ್ಲಿ ಯಥಾವತ್ತಾಗಿ ಶಬ್ದ ಹೊರಡಿಸಿ ಬರೆಯಲು ಹಲವು ತೊಡಕುಗಳಿವೆ. ಇದಕ್ಕಾಗಿಯೇ ಸೃಷ್ಟಿಸಿದ ಕೀಲಿಮಣೆ ಇಟ್ರಾನ್ಸ್‌(itrans), ಕನ್ನಡದ ಬರಹ (ಫೊ಼ನಿಟಿಕ್‌)ಕೀಲಿಮಣೆ ಇದೇ ಆಧಾರಿತ. ಇರುವ ತೊಡಕೆಂದರೆ ಮುಖ್ಯವಾಗಿ ಇಂಗ್ಲೀಷ್‌ನ ಎರಡು ಅಕ್ಷರಗಳು/ಶಬ್ದಗಳುf/ph ಮತ್ತು z. ಇವುಗಳಿಗೆ ಸಮಾಂತರ ಶಬ್ದಾ ಕ್ಷರಗಳು ಕನ್ನಡದಲ್ಲಿಲ್ಲ. ಮಹಾಪ್ರಾಣ ವನ್ನು f/phಗೆ ಬದಲಾಗಿ, ಮತ್ತು /// ಗಳನ್ನು z ಶಬ್ದದ ಬದಲಾಗಿ ಕನ್ನಡದಲ್ಲಿ ಬರೆಯಲಾಗುತ್ತಿದೆ. ಅನುಕ್ರಮವಾಗಿ ಈ ಕನ್ನಡದ ಶಬ್ದಗಳು ಇಂಗ್ಲೀಷ್‌ನ f/ph ಮತ್ತು z ಶಬ್ದಗಳಿಗೆ ಸಮನಾಗುವುದಿಲ್ಲ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್‌ಕನ್ನಡ ನಿಘಂಟನ್ನು ಪರಿಶೀಲಿಸುವ ಲೇಖಕನಿಗೆ ತಪ್ಪುಚ್ಚಾರಣೆ ಬರೆಯುತ್ತಿದ್ದೇನೆಂಬ ಅಸಮಧಾನ ಕಾಡುತ್ತದೆ. ಕೇದಗೆ, ಗುಬ್ಬಿ, ಮಲ್ಲಿಗೆ ಸಂಪಿಗೆ ಮತ್ತು ನವಿಲು ಲಿಪಿಗಳಲ್ಲಿ ವಿಶೇಷ ಚಿಹ್ನೆಗಳ ಎಲ್ಲಾ ಗ್ಲಿ ಫ಼್‌ಗಳನ್ನು ಸೇರಿಸುವುದು ಅನಿವಾರ್ಯವಾಗಿದೆ. ಅದರಲ್ಲಿ ಮುಖ್ಯವಾಗಿ ಇದೊಂದು ' ' ನುಕ್ತ ಚಿಹ್ನೆ. ಈ ತಿದ್ದುಪಡಿಗೆ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ರವರು ಜವಾಬ್ದಾರಿ. ಈ ಊನಗಳು ಹೊಸದಾಗಿ ಬಂದಿರುವ 22 ಏಕರೂಪ ಲಿಪಿಗಳಲ್ಲಿಲ್ಲ. ###
ಟಿ.ದಿವಾಕರ

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ