"ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ…

 "ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ…

ಬಹು ಭಾಷಾ ನಟ ಕಮಲ ಹಾಸನ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಕನ್ನಡವು ತಮಿಳಿನ ಮರಿಭಾಷೆಯೆಂದು ರಾಜಾರೋಷವಾಗಿ ಹೇಳಿ ಕೆಲವರಿಂದ ಅಂದರೆ ತಮಿಳು ಪ್ರೇಮಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರಿದು ಕನ್ನಡಿಗರ ಆಕ್ರೋಶ ಕೆರಳಿಸಿತು. ಸಮಯ ದಿನ ಗೊತ್ತಿಲ್ಲ … ಬೆಂಗಳೂರಿನಲ್ಲಿ ಅವರ ಸಿನೆಮ “Thug Life/ಥಗ್‌ ಲೈಫ್‌/ತಗ್‌ ಲೈಪ್‌" ಬಿಡುಗಡೆಗಾಗಿ ಅದರ ಪ್ರಚಾರದ ಸಮಯದಲ್ಲಿ ಈ ಹೇಳಿಕೆ ನೀಡಿದ್ದರು. ಆ ಸಮಾರಂಭದಲ್ಲಿ ಕನ್ನಡದ ನಟ ಶ್ರೀಯತ ಶಿವರಾಜಕುಮಾರ‍್ರವರೂ ಇದ್ದರು. ಕಾರಣ ಆ ಚಲಚಿತ್ರದಲ್ಲಿ ಅವರೂ ಸಹ ನಟಿಸಿರುತ್ತಾರೆ. ಕನ್ನಡದಲ್ಲಿಯೇ ಹೇಳಬೇಕೆಂದರೆ ಕಮಲ ಹಾಸನ್‌ ರವರ ಭಾಷಣದ ಸಾರಾಂಶ "ಕನ್ನಡ ಭಾಷೆಯ ತಂದೆ ತಮಿಳು ಭಾಷೆ, ಕನ್ನಡದ ಅಪ್ಪ ತಮಿಳು" ಎಂಬುದೇ ಆಗಿತ್ತು. ಈ ಮಾತು ಕನ್ನಡಿಗರಿಗೆ ಎಲ್ಲಿಲ್ಲದ ಕೋಪ ತರಿಸಿದೆ. ಇದೀಗ ಕನ್ನಡಿಗರು ಕಮಲ ಹಾಸನ್‌ ಅವರಿಂದ ಈ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಅವರ ಚಲಚಿತ್ರ “Thug Life /ಥಗ್‌ ಲೈಫ್‌/ತಗ್‌ ಲೈಪ್‌" ಅನ್ನು ಕರ‍್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಇಲ್ಲ!.. ಕನ್ನಡ ಹಿತರಕ್ಷಣಾ ಸಮಿತಿಯಿಂದ ಆಧ್ಯಾದೇಶವಾಗಿದೆ. ಈ ಕ್ರಮಕ್ಕೆ ಕನ್ನಡಿಗರು ಒಕ್ಕೊರಲಿನ ದ್ವನಿಗೂಡಿಸಿದ್ದಾರೆ. ಶ್ರೀಯುತ ಹಾಸನ್‌ ರವರು ಈ ಹೇಳಿಕೆಯನ್ನು ನೀಡುವ ಮೊದಲು ಒಂದೊಮ್ಮೆ ಯೋಚಿಸಬೇಕಾಗಿತ್ತು; ಅವರು ತಮಿಳು ಭಾಷಾ ವಿಧ್ವಾಂಸರುಗಳ ಸಂ...ಶೋದನೆ ಅಭಿಪ್ರಾಯಗಳಿಗೆ ಜೋತುಬಿದ್ದು ಅವರ ಪರಿಶೀಲನಾ(ಸಂ...ಶೋದನೆ) ಹೇಳಿಕೆಗಳೇ ಅಂತಿಮ ಶೋದನೆಗಳೆಂದು ತಿಳಿದಿದ್ದಾರೆ; ಅಥವಾ ಅವರ ಆ ರೀತಿಯ ತಿಳುವಳಿಕೆ..! ಇಲ್ಲಿ ಕರ್ನಾಟಕದಲ್ಲಿ ಕನ್ನಡದ "ಹಲ್ಮಿಡಿ ಶಾಸನ" ಎಂಬುದೊಂದರ ಬಗ್ಗೆ ಅವರಿಗೆ ತಿಳುವಳಿಕೆ ಇರಲಿಕ್ಕಿಲ್ಲ. ಹೋಗಲಿ ಬಿಡಿ. ಇಲ್ಲಿ ನಾನು ತಮಿಳು ಮತ್ತು ಕನ್ನಡದ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡಲಿಚ್ಛಿಸುತ್ತೇನೆ. ಅವುಗಳನ್ನೂ ತಿಳಿದುಕೊಂಡು ಸಂತೋಷಪಡಿ. ಮತ್ತೊಮ್ಮೆ ನಿಮ್ಮಲ್ಲಿಯೇ ಚರ್ಚಿಸಿ!…

ಮಾರುಕಟ್ಟೆಯಲ್ಲಿ ನಾವು ಹಾಲು ಖರೀದಿಸಲು ಹೋದಾಗ ನಮಗೆ ಒಂದು ಬ್ರಾಂಡ್‌ ಕಣ್ಣಿಗೆ ಬೀಳುತ್ತದೆ…"ಆರೋಕ್ಯ", ಇದನ್ನು ನಾವು "ಆರೋಗ್ಯ" ಎಂದು ನಮ್ಮ ಕನ್ನಡ ಭಾಷೆಯಲ್ಲಿ ಓದಿಕೊಳ್ಳತ್ತೇವೆ, ಯಾಕೆ? ಎರಡನೆಯದು Senthil Kumar, ಇದೊಂದು ಮುಖ್ಯವಾಗಿ ತಮಿಳು ಹೆಸರು, ಇದರಲ್ಲಿ ನಾನು ಮೊದಲಿನ ನಾಮ Senthil ಎಂಬುದನ್ನು ಆರಿಸಿಕೊಳ್ಳುತ್ತೇನೆ. ಇಲ್ಲಿ ತಿಳಿಸಿರುವ ಈ ಹೆಸರನ್ನು ನಮ್ಮ ಕನ್ನಡ ಪತ್ರಿಕೆಗಳು ಅಚ್ಚ ಕನ್ನಡದಲ್ಲಿ ಬರೆಯುವಾಗ್ಗೆ ಒಂದೊಂದು ಪತ್ರಿಕೆ ಒಂದೊಂದು ರೀತಿಯಲ್ಲಿ ಒಟ್ಟಾರೆ ಮೂರು ಭಿನ್ನ ಶಬ್ದಗಳಲ್ಲಿ ಬರೆಯುತ್ತವೆ… ಸೆಂದಿಲ್‌, ಸೆಂಧಿಲ್‌, ಸೆಂಥಿಲ್‌... ಎಂದು, ಇವುಗಳಲ್ಲಿ ತಮಿಳರ ಪ್ರಕಾರ ಯಾವುದು ಸರಿ ಹೇಳಿ? ಅವರ ಪ್ರಕಾರ ಈ ಮೂರು ಉಚ್ಚಾರಣೆಗಳೂ ತಪ್ಪು. ನಾನು ಕಂಡಂತೆ ತುಮಕೂರು ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ಬೆಂಗಳೂರು-ಹೊನ್ನಾವರ ಹೆದ್ದಾರಿಯ ಗಾಯತ್ರಿ ಚಿತ್ರಮಂದಿರದ ಪಕ್ಕದಲ್ಲಿ ಒಂದು ಇದೇ ಹೆಸರಿನ ರೇಶ್ಮೆ ಅಂಗಡಯಿದೆ, ಅಲ್ಲಿ ಮಾತ್ರ ಈ ಹೆಸರನ್ನು ಸರಿಯಾಗಿ ಉಚ್ಚರಿಸಿ ಬರೆದಿದ್ದಾರೆ. ಮೂರನೆಯದು, ಬಿಜೆಪಿ ಪಕ್ಷದ ತಮಿಳುನಾಡಿನ ನಾಯಕ ಅಣ್ಣಾಮಲೈ ಅವರನ್ನು ತೆಗೆದುಕೊಳ್ಳೋಣ...ಅವರು ನಮ್ಮ ಪ್ರಧಾನ ಮಂತ್ರಿಯವರ ಹೆಸರನ್ನು ಉಚ್ಚರಿಸುವಾಗ್ಗೆ  'ಮೋದಿ'ಯ ಬದಲಾಗಿ 'ಮೋಡಿ' ಎಂದುಚ್ಚರಿಸುತ್ತಾರೆ, ಯಾಕೆ?

ಇದು ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ. ತಮಿಳಿನಲ್ಲಿ ಕೆಲವು ಶಬ್ದಗಳಿರುವುದಲ್ಲ,ಮತ್ತವುಗಳಿಗೆ ಲಿಪಿಗಳಿಲ್ಲದಿರುವುದು. ತಮಿಳರು ಪ್ರಾಥಮಿಕ ಹಂತದಲ್ಲಿ ಅವರ ಭಾಷೆಯನ್ನು ಕಲಿಯುವಾಗ ಕೇವಲ ಅವರ ಭಾಷೆಯ ಶಬ್ದಗಳಷ್ಟನ್ನೇ ಕಲಿತಿರುತ್ತಾರೆ. ಸಾಮಾನ್ಯವಾಗಿ ಅವರ ದೈನಂದಿನ ಅಡು ಭಾಷೆಯಲ್ಲಿ ಆ ಶಬ್ದಗಳೇ ಹೊರಬರುತ್ತವೆ. ತಮಿಳಿನಲ್ಲಿರುವ ವ್ಯಂಜನ ಶಬ್ದಾಕ್ಷರಗಳ ಪಟ್ಟಿ ನೋಡಿ: ವರ್ಗೀಯ→ ಕ ಙ; ಚ ಞ; ಟ ಣ; ತ ನ; ಣ್ಣ; ಪ ಮ;  ಅವರ್ಗೀಯ→ ಯ, ರಱ, ಲ, ಳೞ, ವ, ಶ, ಷ, ಸ, ಹ, ಇವುಗಳು ಮಾತ್ರ. 'ದ, ಡ' ವ್ಯಂಜನದ ಉಚ್ಚಾರಣೆಯು ತಮಿಳಿನಲ್ಲಿ ಇಲ್ಲದೆ ಇರುವುದನ್ನು ಕಾಣಬಹುದು. ಇಲ್ಲಿ "ಮೋಡಿ" ಎಂದು ಉಚ್ಚರಿಸಲು ಇಂಗ್ಲಿಶ್‌ ನ ‘D’ ಶಬ್ದದಿಂದ  ದ್ವನಿಗೂಡಿಸಿಕೊಂಡಿರುತ್ತಾರೆಂದು ಹೇಳಬಹುದೆ? 'ಮೋದಿ' ಪದದ 'ದಿ' ಇಂಗ್ಲಿಶಿನ ‘D/ಡಿ' ಯಿಂದ ಸ್ಥಳಾಂತರಗೊಂಡು ಉಚ್ಚಾರಣೆಗೆ ಬಂದಿರಬಹುದೆ? ಇಲ್ಲದಿದ್ದರೆ ಸಂಸ್ಕೃತ ಭಾಷಿಕರ ಅಥವಾ ಬೇರೆಯವರ ಉಚ್ಚಾರಣೆಯನ್ನನುಸರಿಸಿ ಮಾತನಾಡುವ ಮೂಲಕ ಅನುಕರುಣಾತ್ಮಕವಾಗಿ ಬಂದಿರಬಹುದೆ? ತಮಿಳು ಲಿಪಿಯಲ್ಲಿ ಇಲ್ಲದ 'ಡ' ಶಬ್ದವನ್ನು ಹೇಗೆ ಉಚ್ಚರಿಸಲು ಕಲಿತರೆಂಬುದು ಆಶ್ಚರ‍್ಯವೇ ಸರಿ. ಇದು ನೋಡಿ, Senthil ಪದದ ಸರಿಯಾದ ಉಚ್ಚಾರಣೆ "ಸೆಂತಿಲ್‌". ತಮಿಳಿನಲ್ಲಿ ಮಹಾಪ್ರಾಣ ಶಬ್ದಗಳೇ ಇರುವುದಿಲ್ಲ! 'ಗ' ಶಬ್ದವೇ ಇಲ್ಲದಿರುವುದರಿಂದ ವರ್ಗೀಯ+ಅವರ್ಗೀಯ ವ್ಯಂಜನಗಳ 'ಕ್+ಯ=ಕ್ಯ' "ಆರೋಕ್ಯ" ಬ್ರಾಂಡ್‌ ಆಗಿದೆ, ಇನ್ನೊಂದು ಬ್ರಾಂಡ್‌ Uthaym/ಉತಯಂ(th/ತ/ತಮಿಳು)/ಕನ್ನಡ→ಉದಯಂ/ಪಂಚೆಗಳು/ವಸ್ತ್ರಗಳು. ತಮಿಳುನಾಡುವಿನಲ್ಲಿ ಸಂಸ್ಕೃತವನ್ನು ಮತ್ತಲ್ಲಿನ ಬ್ರಾಹ್ಮಣರನ್ನೇಕೆ ದ್ವೇಷಿಸುತ್ತಾರೆಂಬುದಕ್ಕೆ ಇದೊಂದು ಉದಾಹರಣೆ. ತಮಿಳು ಭಾಷೆಯೂ ಕೂಡ ಸಂಸ್ಕೃತದ ಶಬ್ದಗಳನ್ನು ಎರವಲು ಪಡೆದಿದೆ. "ಕಮಲ" ಪದವೂ ಅಲ್ಲಿಂದಲೇ ಬಂದಿದೆ. ಇಲ್ಲಿ ಯಾವ, ಮುಖ್ಯವಾಗಿ ದ್ರಾವಿಡ ಭಾಷೆಗಳಲ್ಲಿ ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿಕೊಂಡಿತೋ? ಗೊತ್ತಿಲ್ಲ. ಅದನ್ನು ಅಯಾ ಭಾಷಾಪಂಡಿತರು / ಶಾಸ್ತ್ರಜ್ಞರೇ ಹೇಳಬೇಕು. ಬಹುವಾಗಿ ಭಾರತೀಯ ಭಾಷೆಗಳು, ಸಿಂಹಳ, ಟಿಬೆಟಿಯನ್‌, ನೇಪಾಳೀ ಭಾಷೆಗಳೂ ಸೇರಿ ಬ್ರಾಹ್ಮಿ ಭಾಷೆ/ಲಿಪಿಯನ್ನಾಧರಿಸಿ ಉದ್ಭವಿಸಿರುವುದು… ಮೂಲ ಹುಡುಕಾಟಕ್ಕೆ ತೊಡಗಿಸಿಕೊಂಡಾಗ ಕಂಡುಬರುತ್ತದೆ. ಕನ್ನಡ/ತೆಲುಗು ಲಿಪಿಗಳು ಹೋಲಿಕೆಯಲ್ಲಿದ್ದರೆ ತಮಿಳು/ಮಲಯಾಳಂ ಲಿಪಿಗಳೂ ಹೋಲಿಕೆಯಲ್ಲಿವೆ. ವ್ಯಂಜನಗಳು ಎಷ್ಟಾದರೂ ಇರಲಿ ಆದರೆ ಸ್ವರಗಳು… ಎಲ್ಲಾ ಭಾಷೆಯಲ್ಲಿ ವ್ಯಂಜನ ಶಬ್ದಗಳು ಪೂರ್ಣವಾಗುವುದಕ್ಕೆ ಇರುವುದು ಒಂದೇ ರೀತಿಯ ಸ್ವರ ಶಬ್ದಗಳು.

ಹಾಗಾಗಿ… ಭಾಷೆ/ಲಿಪಿ/ಶಬ್ದ ಇಬ್ಬರು ವ್ಯಕ್ತಿಗಳ ಅಥವಾ ಸಮುದಾಯಗಳ ಮಧ್ಯೆ ನಡೆಯಲಿರುವ ಸಂವಹನದ ನಿಮಿತ್ತಗಳು ಮಾತ್ರ. ಭಿನ್ನ ಭಿನ್ನ ಭಾಷಾ ಲಿಪಿಗಳು ಭಿನ್ನವಾಗಿಯೇ ಉದಯಿಸಿರುತ್ತವೆ. ಅದರಪ್ಪ ನಾನು ಇದರಪ್ಪ ಅವನು ಎಂಬುದನ್ನು ಮರೆತು ಮುಂದುವರಿಯೋಣ. ನನ್ನಿಂದಲೇ ಎಲ್ಲಾ ಎಂಬುದು ದುರಭಿಮಾನ ಮಾತ್ರ.

ಬರಹ:

ದಿವಾಕರ ತಿಮ್ಮಣ್ಣ


Comments

Popular posts from this blog

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ