ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು
ಸಿದ್ದಿ… ಸಿದ್ದಮ್ಮ… ಸಿದ್ದವ್ವ ! ಕೆ ಲವು ನೆನಪುಗಳು ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷ ಹನ್ನೊಂದು ದಿನಗಳಿಗೆ ... ಕರ್ನಾಟಕದ ಮೂಲೆಯೊಂದರ ಹಳ್ಳಿಯಲ್ಲಿ… ಅದರ ಹೆಸರು ಹೊಸಹಳ್ಳಿ ... ಜಂಗಮರ ಹೊಸಹಳ್ಳಿ ಎಂದೂ ಕರೆಯುತ್ತಾರೆ . ನನಗೀಗ ಅತ್ತಿರತ್ತಿರ ಅರವತ್ನಾಲ್ಕು ವರ್ಷಗಳು . ಅಗಾಗ್ಗೆ ಹಲವು ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತಿರುತ್ತವೆ . ಅವುಗಳೊಮ್ಮೊಮ್ಮೆ ಕನಸುಗಳಾಗಿ ಕಾಡುತ್ತಿರುತ್ತವೆ . ಅವುಗಳನ್ನು ದುಸ್ವಪ್ನಗಳು ಎನ್ನಲೂ ಆಗುವುದಿಲ್ಲ . ಹಲವಾರು ಬಾರಿ ಬಿದ್ದ ಕನಸುಗಳಲ್ಲಿ ಹೆಚ್ಚು ನಮ್ಮೂರಿನಲ್ಲಿ ಬದುಕುತ್ತಿದ್ದ ಹೊಲೆಯರ ಸಿದ್ದವ್ವನ ಬಗ್ಗೆಯಾಗಿದ್ದವು . ನನ್ನಮ್ಮನ ಅಪ್ಪ - ಅಮ್ಮನಿಗೆ ಆಗಿನ ಕಾಲಕ್ಕೆ ಮೂರೇ ಮಕ್ಕಳು , ಒಂದು ಗಂಡು ಎರಡು ಹೆಣ್ಣು . ಅದರಲ್ಲಿ ನನ್ನಮ್ಮನೇ ಹಿರಿಮಗಳು . ಹತ್ಹನ್ನೊಂದು ವರ್ಷದವಳಿದ್ದಾಗ ತನ್ನಮ್ಮನನ್ನು ಕಳೆದುಕೊಂಡಿದ್ದವಳು . ಬೆನ್ನಿಗೆ ಬಿದ್ದಿದ್ದ ತಮ್ಮ - ತಂಗಿಯನ್ನು ಸಾಕುವ ಹೊಣೆ ಆಕೆಯದಾಗಿತ್ತು . ಅಷ್ಟರ ವೇಳೆಗೆ ನನ್ನಜ್ಜನ ... ಅಮ್ಮನ ಅಪ್ಪ ... ಅಣ್ಣತಮ್ಮಂದಿರೆಲ್ಲಾ ಬೇರೆಯಾಗಿದ್ದು ಬೇರೆಬೇರೆ ಮನೆ ಮಾಡಿ ಸಂಸಾರ ಹೂಡಿದ್ದುದರಿಂದ ಈ ಮೂರು ಮಕ್ಕಳು ತಾಯಿಯಿಲ್ಲದ ತಬ್ಬಲಿಯಾಗಿದ್ದರು ... ಹಲವಾರು ಜನರ ಬುದ್ದಿ ಮಾತಿನಿಂದಾಗಿ ನನ್ನ ಹೆಣ್ಣಜ್ಜ ಎರಡನೆ ಮದುವೆಯಾಗುವ ಸಾಹಸಕ್ಕೆ ಹೋಗಿರಲಿಲ್ಲ . ಮನೆಯ ಅಡಿಗೆ ,