ಚಲಚಿತ್ರ ಸಂಗೀತ ನಿರ‍್ದೇಶಕ, ಅ ರ ರೆಹಮಾನ್ ರ ಬಿಬಿಸಿ ವಿವಾದಾತ್ಮಕ ಸಂದರ್ಶನ:
ಅ ರ ರೆಹಮಾನ್, ಖ್ಯಾತ ಚಲಚ್ಚಿತ್ರ ಸಂಗೀತ ನಿರ್ದೇಶಕ, ಒಂದು ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನಾನಿಲ್ಲಿ ಒಂದು ಚಿಕ್ಕ ನನ್ನದೇ ಅಭಿಪ್ರಾಯವನ್ನು ಇಲ್ಲಿಡಲು ಇಚ್ಛಿಸುತ್ತೇನೆ:
ಚಲಚ್ಚಿತ್ರ /ಸಿನೆಮಾ ಮಾಧ್ಯಮ ಭಾರತದಲ್ಲಿ ಹುಟ್ಟಿದ್ದು ಹೀಗೆ! ಹಿಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮನರಂಜನೆ ಒದಗಿಸಲು ಇದ್ದದ್ದು ನಾಟಕ ಸಂಘಟನೆಗಳು ಪ್ರದರ್ಶಿಸುತ್ತದ್ದ ನಾಟಕಗಳು ಮಾತ್ರ. ಇಪ್ಪತ್ತನೇ ಶತಮಾನದ ಮೂರು/ನಾಲ್ಕನೇ ದಶಕದಲ್ಲಿ ಹೊಸದಾಗಿ ಹುಟ್ಟಿಕೊಂಡ ದೃಶ್ಯ ಮಾಧ್ಯಮ ಈ ಸೆಲ್ಯುಲೊಯಿಡ್/ಪ್ಲಾಸ್ಟಿಕ್ ಪಟ್ಟಿ ಚಿತ್ರಮಾಧ್ಯಮ. ಇದೀಗ ಅಂಕಿಯ/ಡಿಜಿಟಲ್ ಮಾಧ್ಯಮ. ಇರಲಿ ಬಿಡಿ. ಆಗಿನ ನಾಟಕಗಳಲ್ಲಿ ಹೆಚ್ಚಾಗಿ ಸಂಗೀತ ಮತ್ತು ಹಾಡುಗಳಿಗೆ ಪ್ರಾಮುಖ್ಯತೆ ಇದ್ದುದರಿಂದ ಅದನ್ನೇ ಯತಾವತ್ತಾಗಿ ಭಟ್ಟಿಯಿಳಿಸಿ ತದ್ರೂಪದಲ್ಲಿ ಸಂಗೀತ ಮತ್ತು ಹಾಡುಗಳನ್ನು ಹೊಸೆದು ಸಿನೆಮಾಗಳನ್ನು ತಯಾರಿಸಲು ಪ್ರಾರಂಭಿಸಿದರು. ನಾಟಕಗಳಲ್ಲಿ ಸಾಧ್ಯವಿಲ್ಲದ ವಾಸ್ತವ ದೃಶ್ಯಗಳನ್ನು ಈ ಚಿತ್ರ ಪಟ್ಟಿಗಳಲ್ಲಿ ಅಳವಡಿಸಿದರು. ಇದು ಸಾರ್ವಜನಿಕರಲ್ಲಿ ಕುತೂಹಲಭರಿತ ಮನರಂಜನೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿತು. ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸಲು ಪ್ರಾರಂಭಿಸಿದ್ದರಿಂದ ಈ ಸಿನೆಮಾ ನೋಡುಗರಿಗೆ ಹೆಚ್ಚು ಆಕರ್ಷಣೀಯವಾತು. ಅದು ಮತ್ತಷ್ಟು ಮುಂದುವರೆದು ಅರೆಬೆತ್ತಲೆಯಲ್ಲಿ ಸ್ತ್ರೀಯರನ್ನು ತೆರೆದಿಡುತ್ತಿದ್ದಂತೆ ಮತ್ತಷ್ಟು ಆಕರ್ಷಣೀಯವಾಯಿತು, ಅದಕ್ಕೆ ತಕ್ಕಹಾಗೆ ಹಾಡು ಸಂಗೀತ ಕುಣಿತ ಪ್ರೇಮಪ್ರೀತಿಯಾಟಗಳು ಹೊಡೆದಾಟದ ದೃಶ್ಯಗಳು ಜನರಿಗೆ… ವೀಕ್ಷಕರಿಗೆ ಹೆಚ್ಚು ಮನರಂಜನೆಯ ಮಜಲು ಏರಿ ಮೀರಿ ತಾರಕಕ್ಕೇರಿತು. ಹಾಗಾಗಿ ಈ ವೇಳೆಗಾಗಲೇ ನಾಟಕಗಳಿಗೆ ಪ್ರೇಕ್ಷಕರಿಲ್ಲದೆ ಸೊರಗಿ ನಶಿಸುತ್ತಾ ಕೊನೆಗೆ ನಾಟಕ ಸಂಘಗಳು ಸತ್ತೇಹೋದವು. ಕಾಲ ಕಳೆದಂತೆ ತರಹೇವಾರಿ ಸಿನೆಮಾಗಳು ಅದೇ ಹಾಡು, ಅದೇ ಕುಣಿತ, ಅದೇ ಪ್ರೀತಿ ಪ್ರೇಮ… ಹಾಡಿದ್ದೇ ಹಾಡುವ ಕಿಸುಬಾಯಿ ದಾಸಯ್ಯ ಅನ್ನುವಂತಾದವು. ಹೊಸತನವಿರಲಿಲ್ಲ. ಉದಾಹರಣೆಗೆ ಹಿಂದಿಯಿಂದ ಹಿಡಿದು ತಮಿಳು ತೆಲುಗು ಕನ್ನಡ ಎಲ್ಲಾ ಚಿತ್ರರಂಗಗಳಲ್ಲಿಯೂ ಕತೆ ದೃಶ್ಯ ಹಾಡು ಸಂಗೀತ ಎಲ್ಲವನ್ನೂ… ಅಲ್ಲಿಯದು ಇಲ್ಲಿ ಇಲ್ಲಿಯದು ಅಲ್ಲಿಗೆ ಕಿತ್ತು ತಂದು ತುರುಕಲಾಯಿತು ಅದು ಸಿನೆಮಾ ಆಯಿತು. ಈ ಕ್ರಮ ಸುಮಾರು ಕಳೆದ ಶತಮಾನದ ನಾಲ್ಕನೇ ದಶಕದಿಂದ ಪ್ರಾರಂಭಿಸಿ 21ನೇ ಶತಮಾನದ ನಂತರದವರೆಗೂ ಮುಂದುವರಿಯಿತು. ಆದಾಗ್ಯೂ ಅಲ್ಲಲ್ಲಿ ಕೆಲವು ಸಂಪ್ರದಾಯ ಮೀರಿ ತಯಾರಾದ ಚಿತ್ರಪಟ್ಟಿಗಳು ಗೆಲುವು ಸಾಧಿಸದೇ ನಷ್ಟಪಟ್ಟವು. ಈ ವೇಳೆಗಾಗಲೇ ನಟನಟಿಯರ ಸಂಭಾವನೆ ಏರಿಕೊಂಡಿತು, ನಿರ್ದೇಶಕರು, ಸಂಗೀತ ನಿರ್ದೇಶಕರೂ, ತಂತ್ರಜ್ಞರು ಮಂಚೂಣಿಗೆ ಬಂದಿದ್ದರು. ಅವರ ಸಂಭಾವನೆಯೂ ಏರಿಕೆ ಯಾಗಿದ್ದಿತು. ಒಟ್ಟಿನಲ್ಲಿ ಅದೊಂದು ಕಾಲವಾಗಿದ್ದಿತು. ಸಿನೆಮಾ ಪ್ರಪಂಚವೆಂದರೆ ಸಮಾಜದಲ್ಲಿ ಹೆಸರು ಹಣ ಅಂತಸ್ತುಗಳ ಅಳತೆಯ ಮಾನದಂಡವಾಯಿತು.
ಕಳೆದೆರಡು ವಾರಗಳ ಹಿಂದೆ ನಾನೊಂದು ಚಿತ್ರವಿಮರ್ಶಕರ ಕುರಿತು ಮಾಡಿದ ಸಂವಾದವೊಂದನ್ನು ಕನ್ನಡದ ಯೂಟ್ಯೂಬ್ ವಾಹಿನಿಯೊಂದರಲ್ಲಿ ವೀಕ್ಷಿಸಿದೆ. ಅದು "ಧುರಂಧರ್" ಎಂಬ ಸಿನೆಮಾಗೆ ಸಂಬಂಧಿಸಿದ್ದಾಗಿತ್ತು. ಅಲ್ಲಿ ಬೆಳಕಿಗೆ ಬಂದ ಅಂಶಗಳು: ಬೊಲಿವುಡ್ ಎಂಬ ಮುಂಬಯಿ ಚಿತ್ರಜಗತ್ತು ಹೇಗೆ ತನ್ನದೇ ಆದ ವಿಮರ್ಶಕರನ್ನು ಬೆಳೆಸಿಕೊಂಡು ಬಂದಿತು, ಹೇಗೆ ಅಲ್ಲಿ ನಟನಟಿಯರನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಾರೆ, ಯಾರ‍್ಯಾರು ನಿರ್ಮಾಪಕರು ನಿರ್ದೇಶಕರಾಗಿರುತ್ತಾರೆ. ಕತೆ ಯಾರು ಬರೆಯುತ್ತಾರೆ, ಹೇಗೆ ಬರೆಯುತ್ತಾರೆ, ಎಲ್ಲಿ ಯಾವ ಹೋಟೆಲಿನಲ್ಲಿ ಕುಳಿತು ಬರೆಯುತ್ತಿದ್ದರು, ಎಷ್ಟು ಹೊಲಿವ್ವುಡ್ ಸಿನೆಮಾಗಳ ವಿಡಿಯೊಗಳನ್ನಿಟ್ಟುಕೊಂಡು ಎಷ್ಟೆಷ್ಟು ದೃಶ್ಯಗಳನ್ನು ಕದ್ದು ತೇಪೆ ಹಾಕಿ ಚಿತ್ರಕತೆ ಬರೆಯುತ್ತಾರೆ ಎಂಬುದನ್ನು ವಿಷದವಾಗಿ ವಿವರಣೆಯೊಂದಿಗೆ ಬಿಡಿಸಿಡಲಾಯಿತು ಆ ಸಂವಾದದಲ್ಲಿ. ಸಂದರ್ಶನಕ್ಕೊಳಪಟ್ಟ ವ್ಯಕ್ತಿ ಹೇಳಿದ ಮಾತು "ಈ ಬೊಲಿವ್ವುಡ್ ಎಂಬ ಚಿತ್ರ ಜಗತ್ತು ಈವರೆಗೆ ಜನರಿಗೆ ಕನಸುಗಳ ಒಂದು ಅವಾಸ್ತವತೆಯ ಕತೆಗಳನ್ನು ಹೆಣೆದು ಉಣಬಡಿಸಿದ ಪಾಪಿಗಳ ಕೂಪ ಎಂದು ಹೇಳಿದ ಅವರು ಮುಂದುವರಿದು ಹೇಳುತ್ತಾ ಕೊನೆಗೆ ಯಾರೋ ಒಬ್ಬ ಅಮೆರಿಕನ್ ಪತ್ರಕರ್ತ ಹೇಳಿದ ಮಾತನ್ನು ಸಹ... "ಮುಂಬೈನ ಬೊಲಿವ್ವುಡ್… ಚಲಿಸುವ ಚಿತ್ರಗಳ ತಯಾರಿಕೆಯ ಚಿತ್ರಜಗತ್ತೊಂದು ವೇಶ್ಯಾವಾಟಿಕೆಯ ಅಡ್ಡೆಯಾಗಿದೆ..." ಎಂಬಂಶವನ್ನೂ ಆ ಸಂವಾದದಲ್ಲಿ ಬೆಳಕಿಗೆ ತರಲಾಯಿತು. ಇರಲಿ ಬಿಡಿ, ಇಲ್ಲಿ ಈ "ಧುರಂಧರ್" ಚಿತ್ರವೇಕೆ ಇಷ್ಟೊಂದು ಪ್ರಸಿದ್ಧವಾಯಿತು ಎಂಬುದೇ ಪ್ರಶ್ನೆ? ಅಲ್ಲಿ ಬರುವ ದೃಶ್ಯಗಳು ವಾಸ್ತವಿಕಕ್ಕೆ ಹತ್ತಿರ-ವಾದವುಗಳೆಂಬುದಕ್ಕೆ ದಿನಾಂಕ ಸಹಿತ ಸ್ಥಳ ಸಹಿತ ವಾಸ್ತವವಾಗಿ ನಡೆದ ಘಟನೆಗಳನ್ನು ಸೇರಿಸಿ ಬರೆದು ಚಲಚಿತ್ರ ಮಾಡಿದ್ದಾರೆ ಎಂಬುದೊಂದಾದರೆ ನಟರ ನಟನೆಯ ಪರಾಕಾಷ್ಟತೆ ಎಷ್ಟಿದೆ? ಎಷ್ಟಿರಬೇಕಾಗಿತ್ತು! ಎಂಬಂಶಗಳೂ ಸೇರಿವೆ. ಸಂವಾದದ ಮುಖ್ಯವಾದ ಅಂಶ… ಒಂದು ವಾಸ್ತವಾಂಶಗಳ ಕೂಡಿಕೆಯಿಂದ ಸೃಷ್ಟಿಸಿದ ಕತೆ; ಇಲ್ಲಿ ನೃತ್ಯ, ಹಾಡು ಸಂಗೀತಗಳನ್ನು ನಗಣ್ಯ ಮಾಡಲಾಗಿದೆ. ಮತ್ತು ವೀಕ್ಷಕರಿಗೆ ಭ್ರಮೆಯನ್ನು ತರಿಸುವುದಿಲ್ಲ. ಆಸನಗಳ ತುದಿಯಂಚಿನಲ್ಲಿ ಕುಳಿತು ಮುಂದಾಗಬಹುದಾದ ಘಟನೆಗಳನ್ನು ಎದುರಿಸಲು ವೀಕ್ಷಿಸಲು ಅವರ ಮುಖದಲ್ಲಿ ಬೆವರಿಳಿಸಲು ಚಿತ್ರದಲ್ಲಿ ಕತೆಯನ್ನು ಹೇಳಲಾಗಿದೆ. ಅಂದರೆ ಸಿನೆಮಾದಲ್ಲಿ ಹಾಡು ಚೆನ್ನಾಗಿದೆ, ಸಂಗೀತ ಚೆನ್ನಾಗಿದೆ, ಕುಣಿತ ಚೆನ್ನಾಗಿದೆ ಎಂಬಶಗಳು ಹಿನ್ನೆಲೆಗ ಸರಿಸಿ ಬಿಗಿಯಾಗಿ ಕತೆಯ ನಿರೂಪಣೆಯಾಗಿದೆ. ಹಾಗಾಗಿ "ಧುರಂಧರ್" ಹೆಚ್ಚು ಜನ ವೀಕ್ಷಕರನ್ನು ಬರಮಾಡಿಕೊಳ್ಳುತ್ತಿದೆ. ಈ ಅಂಶಗಳನ್ನು ಗಮನಿಸಿದಾಗ ಇತ್ತೀಚಿನ ದಶಕದ ಪ್ರಾರಂಭದಿಂದ ಸಿನೆಮಾದ ಮೂಲಕ ಕತೆ ಹೇಳುವ ಕಲೆಯ ಪರಿಕಲ್ಪನೆ ಬದಲಾಗುತ್ತಿದೆಯೆಂಬುದನ್ನು ಮನಗಾಣಬಹುದು. ಅದು ಬರೀ ಸಂಗೀತ ಹಾಡು ಕುಣಿತಗಳಲ್ಲ…!
ಅ ರ ರೆಹಮಾನ್ ಇವುಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಹೇಳಿಕೆಯನ್ನು ಕೊಡುವಾಗ್ಗೆ ಸಂಯಮ ವಹಿಸಬೇಕಾಗಿತ್ತು. ತಾನು ಮುಸ್ಲಿಂ ಎಂಬ ಕಾರಣಕ್ಕೆ ತನಗೆ ಬೊಲಿವ್ವುಡ್ ಮತ್ತಿನ್ನಿತರೆ ತೆಲುಗು, ತಮಿಳು, ಮಲಯಾಳಂ ಚಿತ್ರಜಗತ್ತಿನಲ್ಲಿ ಅವಕಾಶಗಳು ಲಭ್ಯವಾಗುತ್ತಿಲ್ಲ ಎಂಬಂಶ ಹಾಸ್ಯಾಸ್ಪದ ಮತ್ತು ಅರ್ಥಹೀನ?! ಇದರ ಹಿನ್ನೆಲೆಯಲ್ಲಿ ಕಾಣದ ಕೈ ಮುಖ ಮನಸ್ಸುಗಳು ಹಿಂದು-ಮುಸ್ಲಿಂ ದ್ವೇಷ ಸಾಧನೆ ಕೆಲಸಮಾಡುತ್ತಿವೆ. ಬಹುಷಃ ಬಿಬಿಸಿ ಸಂದರ್ಶನವೇ ಅದರ ಉದ್ದೇಶವಾಗಿರಬಹುದು. ಬಿಬಿಸಿ ಗೆ ವಿಕಸಿತ ಭಾರತದ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯವಿಲ್ಲ.
ನಿಮ್ಮ ಅನಿಸಿಕೆಗಳನ್ನು ತಿಳಿಸಿ.
Comments
Post a Comment