ಹೀಗೊಂದು ಭಾರತೀಯ ಒಪರೇಯ್ಟಿಂಗ್ ಸಿಸ್ಟಮ್ಸ಼್ ಂಡ್ ಸಲ್ಯೂಷನ್ಸ಼್/BOSS
ಹೀಗೊಂದು ಭಾರತೀಯ ಒಪರೇಯ್ಟಿಂಗ್ ಸಿಸ್ಟಮ್ಸ಼್ ಂಡ್ ಸಲ್ಯೂಷನ್ಸ಼್/BOSS
ಪ್ರಸ್ತಾಪ:
ಹೀಗೊಂದು ಭಾರತ-ಸರ್ಕಾರದ ಗಣಕ ಯಂತ್ರ ತಂತ್ರಾಂಶವಿದೆ, ಹೆಸರು "ಭಾರತೀಯ ಒಪರೇಯ್ಟಿಂಗ್ ಸಿಸ್ಟಮ್ಜ಼್ ಂಡ್ ಸಲ್ಯೂಷನ್ಸ಼್, ಸಂಕ್ಷಿಪ್ತವಾಗಿ ಬೊಸ್(BOSS)", ಇದನ್ನದರ -4ನೇ ಅವತರಣಿಕೆಯ ಕಾಲದಿಂದಲೂ ಅಂದರೆ 2013ನೇ ಇಸವಿಯಿಂದಲೂ ಈ ಬರಹಗಾರ ಉಪಯೋಗಿಸುತ್ತಿದ್ದಾನೆ. ಕಾರಣ ಅದೇ ವರ್ಷ ವಿಂಡೊವ್ಸ಼್ 98 ಅವತರಣಿಕೆಯ ತಂತ್ರಾಂಶ ಮತ್ತದರ ಪದ-ಸಂಸ್ಕರಣ(MSWord)"ಎಮೆಸ್ ವಾಡ್" ನವೀಕರಿಸಿದ ವಿಂಡೊವ್ಸ಼್ ಸಂಸ್ಥೆ ಹಳೆಯ ಪದ-ಸಂಸ್ಕರಣಕ್ಕಿದ್ದ ಬೆಂಬಲವನ್ನು ಹಿಂಪಡೆದಿತ್ತು. ಮಾರಾಟಗಾರನೊಬ್ಬ ಸಿದ್ಧಪಡಿಸಿ ಬರಹಗಾರನಿಗೆ ಮಾರಾಟಮಾಡಿದ್ದ ವಿಂಡೊವ್ಸ಼್ ಮೇಜು-ಗಣಕಯಂತ್ರ ಯೆಪ್ರತಪ್ರಾ ಆಡುತ್ತಾ ಗಟ್ಟಿಯಾಗಿ ಸಿಕ್ಕಿಹಾಕಿಕೊಳ್ಳುತ್ತಾ ಸರಿಯಾಗಿ ಕಾರ‍್ಯನಿರ‍್ವಹಿಸದೆ ನಿಂತುಬಿಡುತ್ತಿತ್ತು… ಕೊನೆಗದು ಸತ್ತೇಹೋಯಿತು! ಮುಂದೇನು… ಪ್ರಸ್ನೆ???
ಗಣಕದಲ್ಲಿ ಹಾಕಿದ್ದ ಕನ್ನಡದ "ನುಡಿ" ತಂತ್ರಾಂಶ ಉಪಯೋಗಿಸಿ ಆಗೊಂದು ಈಗೊಂದು ಬರವಣಿಗೆ ಮಾಡುತ್ತಿದ್ದ ಈ ಬರಹಗಾರನಿಗೆ ನಂತರ ಸಿಕ್ಕಿದ್ದು ಈ "ಬೊಸ್-4"…ಅದೂ ಮಗಳ ಮೂಲಕ…ಆಕೆ ಬೆಂಗಳೂರಿನ ಭಾರತ ಸರ್ಕಾರದ C-DAC ಸಂಸ್ಥೆಯಲ್ಲಿ "ಎಂಬೆಡೆಡ್" ತಂತ್ರಾಶದ ಆರು ತಿಂಗಳ ಡಿಪ್ಲೊಮ ಮಾಡುತ್ತಿದ್ದಳು. "ಬೊಸ್-4"ರಲ್ಲಿ ಭಾರತೀಯ ವಿವಿಧ ಭಾಷೆಗಳ ಬರವಣಿಗೆಗಾಗಿ ಒಂದು ಚೀನಾ ಸೃಷ್ಟಿತ scim ಹೆಸರಿನ (Smart Common Input Method) ತಂತ್ರಾಂಶದಲ್ಲಿ ಆ ಕೀಲಿ ಮಣೆಗಳದ್ದವು. ಇವುಗಳಲ್ಲಿ ಮೂರು ಕನ್ನಡದ ಕೀಲಿ ಮಣೆಗಳಿದ್ದವು… ಈನ್ಸ್ಕ್ರಿಪ್ಟ್, ಕಗಪ ಮತ್ತು ಇಟ್ರಾನ್ಸ಼್. ಈನ್ಸ್ಕ್ರಿಪ್ಟ್ ಕೀಲಿ ಮಣೆ "ನುಡಿ" ಕೀಲಿಮಣೆ ಉಪಯೋಗಿಸಿದವರಿಗೆ ಅದು ಹೊಸದೆನಿಸಿ ಬೆರಳಚ್ಚಿಸಲು ಬಹಳ ಕಷ್ಟವಾಗುತ್ತಿತ್ತು, ಇಟ್ರಾನ್ಸ಼್ ಕನ್ನಡದ ಬರಹ ತಂತ್ರಾಂಶದ ರೀತಿ ಅರ್ಧಾಕ್ಷರಗಳನ್ನು ಪೂರ್ಣಗೊಳಿಸಲು ಒಂದು ಹೆಚ್ಚು ಕೀಲಿ ಬಳಸಬೇಕಾಗುತ್ತಿತ್ತು. ಆಯ್ಕೆ, ಕಗಪ… ನುಡಿ ಕೀಲಿಮಣೆಯ ತದ್ರೂಪಿ… ಕೀಲಿಸಲು ಸುಲಭ ಅಭ್ಯಾಸವಾಗಿತ್ತು. ಈ ಕೀಲಿಮಣೆಯನ್ನು ಉಪಯೋಗಿಸಲು ಪ್ರಾರಂಭಿಸಿದೆ. ಆದರೆ ಅಲ್ಲಿ ಕಾಗುಣಿತಗಳೇ ಹೊಮ್ಮುತ್ತಿರಲಿಲ್ಲ… ಒತ್ತಕ್ಷರಗಳನ್ನು ಕೀಲಿಸಬಹುದಿತ್ತು! ಆಶ್ಚರ‍್ಯ. ಆ ಕೀಲಿಮಣೆಯನ್ನು ಒಂದು ಟಿಎಕ್ಸ್ಟಿ ಕಡತದಲ್ಲಿ ತೆಗೆಯಲು ಅದರಲ್ಲಿ ಕಾಗುಣಿತಗಳನ್ನೇ ಬರೆದಿರಲಿಲ್ಲ. ಆಗ ಬರಹಗಾರನಿಂದ ಹುಟ್ಟಿಕೊಂಡವು ಈ scim ತಂತ್ರಾಂಶಕ್ಕಾಗಿ ಎರಡು ಹೊಸ ಕೀಲಿಮಣೆಗಳು; ಒಂದು "ಕನ್ನಡ-ನುಡಿನಲ್ನುಡಿ-ಕನ್ನಡ೧೨೩", ಎರಡು “ಕನ್ನಡ-ನುಡಿನಲ್ನುಡಿ-ಇಂಗ್ಲಿಷ್123”... ಜಾಲತಾಣದಿಂದ ಹುಡುಕಿ ಕೆಳಗಿಳಿಸಿಕೊಂಡಿದ್ದ ಒಂದು ಮಾದರಿ ಕೀಲಿಮಣೆಯನ್ನು ಸೃಷ್ಟಿಯಾದವು. ಇವುಗಳಿಗೆ ಬೇಕಾಗಿದ್ದವು ಯುನಿಕೋವ್ಡ್ ಲಿಪಿಗಳು… ಆಗ ದೊರಕುತ್ತಿದ್ದ ಕನ್ನಡದ ಯುನಿಕೋವ್ಡ್ ಲಿಪಿಗಳೆಂದರೆ "ಲೋಹಿತ್-ಕನ್ನಡ, ಕೇದಗೆ, ಸಂಪಿಗೆ, ಗುಬ್ಬಿ, ಮತ್ತು ನವಿಲು" ಲಿಪಿಗಳು ಮಾತ್ರ.
ನುಡಿ ಮತ್ತು ಬರಹ ತಂತ್ರಾಂಶಗಳಿಗಾಗಿ ಇಂಗ್ಲಿಷ್ ಮತ್ತು ಇಟಾಲಿಕ್ ಲಿಪಿಗಳ ಚೌಕಟ್ಟುಗಳಲ್ಲಿ ಬರೆದ ಬೈನರಿ ಲಿಪಿಗಳು(fonts) ಆಯಾ ತಂತ್ರಾಂಶಗಳಲ್ಲಿ ಅವುಗಳದೇ ಆದ ಪದಸಂಸ್ಕರಣಗಳಲ್ಲಿ ಮಾತ್ರ ಹೊಮ್ಮುತ್ತಿದ್ದವು. ನಂತರ ಲಿಬಫೀ಼ಸ್,ಎಮೆಸಫೀ಼ಸ್ ಪದಸಂಸ್ಕರಣಗಳಿಗೆ ವರ್ಗಾಯಿಸಬೇಕಾಗುತ್ತಿತ್ತು, ಇಲ್ಲವೆ ಆಯ್ಕೆ ಬದಲಿಸಿ ಅವುಗಳಲ್ಲಿ ನೇರವಾಗಿ ಬೆರಳಚ್ಚಿಸಬೇಕಾಗುತ್ತಿತ್ತು! ಈ ಲಿಪಿಗಳು ಜಾಲತಾಣಗಳಲ್ಲಿ ಹೊರಹೊಮ್ಮುತ್ತಿರಲಿಲ್ಲ. ಆಗ ಯುನಿಕೊಡ್ ಲಿಪಿಗಳು ಹೆಚ್ಚಿರಲಿಲ್ಲ. ನಂತರ ಗೂಗಲ್ ಜಾಲತಾಣಕ್ಕಾಗಿ ನ್ಯೆನೊ ಲಿಪಿಗಳು ಆ ಸಂಸ್ಥೆಯಿಂದಲೇ ಹೊರಬಂದವು. ಕೆಲ ಖಾಸಗಿ ಪ್ರಕಟನಾ ಸಂಸ್ಥೆಗಳು ಅವರದೇ ಆದ ತಂತ್ರಾಂಶಗಳನ್ನು ಮತ್ತು ಯುನಿಕೊಡ್ ಲಿಪಿಗಳನ್ನು ಬರೆದುಕೊಂಡವು. ಉದಾಹರಣೆಗೆ… ಪ್ರಜಾವಾಣಿ.
ಇದೀಗ ವಿಷಯ:
ಗಣಕ ನಿರ‍್ವಹಣಾ ವ್ಯವಸ್ಥಾ ತಂತ್ರಾಂಶ(ಗ.ನಿ.ವ್ಯ.ತ) ಬೊಸ್-10 ಪ್ರಾಗ್ಯ/ಸಿನ್ನಮೊನ್(x86-64) C-DAC ಸಂಸ್ಥೆಯ ಹತ್ತನೆಯ ಅವತರಣಿಕೆ. ಆದಾಗ್ಯೂ ಭಾರತ ಸರ್ಕಾರದ ಕಛೇರಿಗಳು ರಾಜ್ಯ ಸರ‍್ಕಾರದ ಕಛೇರಿಗಳು ಈ ಗಣಕ ನಿರ್ವಹಣ ತಂತ್ರಾಂಶವನ್ನು ಬಳಸುತ್ತಿರುವುದು ಈ ಬರಹಗಾರನ ಗಮನಕ್ಕೆ ಬಂದಿರುವುದಿಲ್ಲ. C-DAC ಸಂಸ್ಥೆ ಒಮ್ಮೆ ಒಂದು ಜಾಹೀರಾತಿನ ಮೂಲಕ ನಮ್ಮದೇ ಸರ್ಕಾರದ ಗಣಕ-ನಿರ್ವಹಣಾ ತಂತ್ರಾಂಶವನ್ನು ಎಲ್ಲಾ ಸರ್ಕಾರೀ ಕಛೆರಿಗಳ ಗಣಕಗಳಲ್ಲಿ ಅಳವಡಿಸಿ ಉಪಯೋಗಿಸಿ ಸರ್ಕಾರದ ಹಣವನ್ನುಳಿಸಲು ಕ್ರಮವಹಿಸುವಂತೆ ಅಲವತ್ತು ಪ್ರಚುರಪಡಿಸಿದ್ದನ್ನೂ ಗಮನಿಸಲಾಗಿದೆ. ಇಷ್ಟೆಲ್ಲಾ ಕ್ರಮವಿಟ್ಟರೂ ಈ ಕ್ರಮಕ್ಕೇನು ಬೆಲೆ ಬಂದಂತೆ ಕಾಣಿಸುವುದಿಲ್ಲ. ಈ ಹೊತ್ತಿಗಾಗಲೇ ಬೊಸ್-11 ಅವತರಣಿಕೆ ಬರಬೇಕಾಗಿತ್ತು? ಯಾರಾದರೂ ಇದನ್ನು ಗಮನಿಸಬಹುದು. ಏಕೆಂದರೆ ಬೇರೆ ಲಿನಕ್ಸ್… ಉಬುಂಟು, ಫೆ಼ಡೊರ, ಒಪನ್ಸುಸ (openSUSE) ಜೊ಼ರಿನ್… ಇತ್ಯಾದಿಗಳು ವರ್ಷಕ್ಕೊಂದರಂತೆ ಅವತರಣಿಕೆಗಳನ್ನು ಬಿಡುಗಡೆ ಮಾಡುತ್ತಿವೆ. ಭಾರತ-ಸರ್ಕಾರದ C-DAC ಸಂಸ್ಥೆಗೇಕೆ ಸಾಧ್ಯವಿಲ್ಲ? C-DAC ಏಕೆ ಲಿನಕ್ಸ್ ಪುಕ್ಕಟೆ ತಂತ್ರಾಂಶ ಉಪಯೋಗದ ಬಗ್ಗೆ ತರಭೇತಿಗಳನ್ನು ನಡೆಸುವುದಿಲ್ಲ. ಏಕೆ ಏರ್ಪಡಿಸಬಾರದು? ಅದಕ್ಕೇನಾದರೂ ಕಾರಣವಿದೆಯಾ?! ಸರ್ಕಾರ ಹೆಚ್ಚವರಿ ಅನುದಾನವನ್ನು ಕೊಡುತ್ತಿಲ್ಲವೆ? ಅಥವಾ ವಿಂಡೊವ್ಸ಼್ ಸಂಸ್ಥೆ ಭಾರತ-ಸರ್ಕಾರದ ಮೇಲೆ ಒತ್ತಡವನ್ನೇನಾದರೂ ಹೇರಿದೆಯಾ?ವಿಂಡೊವ್ಸ಼್ ಸಂಸ್ಥೆ ಭಾರತದಲ್ಲಿ ಅದರ ಮಾರಾಟದ ಬೆಳವಣಿಗೆಗಾಗಿ ಮುಖ್ಯ ನಗರಗಳಲ್ಲಿ ತರಬೇತಿ ವ್ಯವಸ್ಥೆಯನ್ನು ಅನುಗೊಳಿಸಿ ಅದರ ವ್ಯಾಪಾರ ವೃದ್ಧಿಸಿಕೊಂಡಿದೆ. ಕಳೆದ್ಮೂರು ವರ್ಷಗಳಲ್ಲಿ ಯಾ ಹಿಂದೆ ವಿಂಡೊವ್ಸ಼್ ಮಾಲೀಕ ಬಿಲ್ಗೇಟ್ಸ್ ಭಾರತಕ್ಕೆ ಬಂದು ಪ್ರಧಾನ ಮಂತ್ರಿಗಳನ್ನ ಭೇಟಿಮಾಡಿ ಸಹಭಾಗಿತ್ವದ ಮಾತಿನ ಉದಾಹರಣೆಯೂ ಇದೆ.
ಏನೇ ಇರಲಿ ಬೊಸ್ ನಲ್ಲಿ ಕೆಲವು ನ್ಯೂನತೆಗಳಿವೆ. ಇದು ಅದರ ಪ್ರಾರಂಭದ ಅವತರಣಿಕೆಗಳಿಂದಲೂ ಇವೆ. ಮೊದಲು ಭಾರತೀಯ ಭಾಷೆಗಳಿಗಾಗಿ ಬೊಸ್-4ರವರೆಗೆ scim ಬಳಸುತ್ತಿತ್ತು. ಆನಂತರದ ಅವತರಣಿಕೆಗಳಿಗೆ ibus ತಂತ್ರಾಂಶವನ್ನು ಮುಂದುವರಿಸಿದೆ. ಐಬಸ್ ಬೆರಳಚ್ಚಿಸಲು ಜಾಗತಿಕ ಸರ್ವಸಮರ್ಥವೆಂದದು ಹೇಳಿಕೊಂಡಿದೆ. ಅದು ಕೆಲವು ಕೀಲಿಮಣೆಗಳ ಬೆರಳಚ್ಚುವಿಸಿಕೆಯು ನೇರವಾಗಿ ಪದಸಂಸ್ಕರಣೆಯ ಮೇಲೆ ಮುದ್ರಿಸುವುದಿಲ್ಲ. ಇದನ್ನು ಸರಿಪಡಿಸಲು ಬರಹಗಾರ ಶತಪ್ರಯತ್ನ ಮಾಡಿದ್ದಾರೆ. ಆದರದು ಸಿದ್ಧಿಸಲಿಲ್ಲ. scimನಲ್ಲಿ ಸುಲಭಸಾಧ್ಯವಾಗಿದೆ. ಇದೀಗ ಬರಹಗಾರ ಐಬಸ್ ತೆಗೆದುಹಾಕಿ scim ಅಳವಡಿಸಿಕೊಂಡಿದ್ದಾರೆ. ಮತ್ತೊಂದು ಅಂಶವೆಂದರೆ ಬೊಸ್ ನಲ್ಲಿ WiFi firmware ಇಲ್ಲದಿರುವುದು. ಇದನ್ನು ತೊಡಗಿಸಲು ಇಂಟನೆಟ್ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ತಂತು ಮೂಲಕ ಪಡೆದ ಇಂಟನೆಟ್ ಜೋಡಣೆ ಮಾಡಿ ನಂತರsudo apt-get install firmware-iwlwifi ನಿರ‍್ದೇಶನ ನೀಡಿ ಅಳವಡಿಸಬೇಕೆಂದು C-DAC ಸಂಸ್ಥೆಯ ಅಧಿಕೃತ ವಕ್ತಾರರು ಮಿಂಚಂಚೆ ಮೂಲಕ ಬರಹಗಾರನ ಪ್ರಸ್ನೆಗೆ ಉತ್ತರಿಸಿದ್ದರು, ಬೊಸ್-9 ಅಳವಡಿಕೆ ಕಾಲದಲ್ಲಿ ತಿಳಿಸಿದ್ಧರು. ಈ ತೊಂದರೆ ಅದರ ಪ್ರಾರಂಭದ ಅವತರಣಿಕೆಗಳಿಂದಲೂ ಇದೆ. ಇಂದು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಇಂಟನೆಟ್ ಲಭ್ಯವಿದೆ. ಸ್ಮಾಟ್ ಟಿವಿಗಳ ಈ ಕಾಲದಲ್ಲಿ ಇಂಟನೆಟ್ ಬಳಕೆ ಹೆಚ್ಚಾಗಿದೆ. ಮೇಜು-ಗಣಕಗಳಿಗೆ WiFi ಮೂಲಕ ಇಂಟನೆಟ್ ಪಡೆಯುವುದು ಸುಲಭಸಾಧ್ಯವಿದೆ. ಈ ತೊಂದರೆ ತಪ್ಪಿಸಲು ಬರಹಗಾರ ಕಂಡುಕೊಂಡ ಒಂದು ಅಂಶ ಏನಂದರೆ ಡೆಬಿಯನ್ ಅವತರಣಿಕೆ ಮಿಂಟ್ ಲಿನಕ್ಸ್ ಗ.ನಿ.ವ್ಯ.ಯಿಂದ ಕೊಪಿ ಮಾಡಿ ಶೇಖರಿಸಿದ firmware ಫೊ಼ಲ್ಡರನ್ನು ಸುಡೊ(sudo)ಮೂಲಕ ಬೇರಿಗೆ(root) ಒಳಗೆಡವಿ ಗಣಕವನ್ನು ಪುನರಾರಂಬಿಸಲು ಬೊಸ್-10ರಲ್ಲಿ WiFi ಕ್ರಿಯಾಶೀಲವಾಗಿತ್ತು ಇದನ್ನನುಸರಿಸಿ ಇಂಟನೆಟ್ ಸಂಪರ‍್ಕ ಪಡೆಯುವುದು ಸುಲಭಸಾಧ್ಯವಾಯಿತು.
Comments
Post a Comment