ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತದಲ್ಲಿ ಇನ್ನೂ ಜೀವಂತ?! British Colonial Slavery still exists in Independent India?!


ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತದಲ್ಲಿ ಇನ್ನೂ ಜೀವಂತ?!

British Colonial Slavery stillexists in Independent India?!British Colonial Slavery still exists in Independent India?!

ಈ ಬರಹ ಕ್ರಿಕೆಟ್‌ ಪ್ರಿಯರಿಗೆ ಅಪ್ರಿಯವಾದೀತು. ನಾನೇನು ಮಾಡಲಿ ಅವರವರ ತೆವಲುಗಳು ಆಭಿಪ್ರಾಯಗಳು ಅವರವರಿಗೆ. ನನ್ನ ತೆವಲು ಮತ್ತು ಅಭಿಪ್ರಾಯ ನನಗೆ. ಇತರರೆಲ್ಲರ ಅಭಿಪ್ರಾಯಗಳೆಲ್ಲಾ... ಪ್ರಪಂಚದ ಅಭಿಪ್ರಾಯಗಳಾಗುವುದಿಲ್ಲ. ಬಿಜೆಪಿಯವರ ಅಭಿಪ್ರಾಯ ಗಾಗ್ರೆಸ್ಸಿಗರಿಗೆ ಇಷ್ಟವಾಗುದಿಲ್ಲ...ಕಾಂಗ್ರೆಸ್ಸಿಗರ ಅಭಿಪ್ರಾಯಗಳು ಬಿಜೆಪಿಯವರಿಗೆ ಇಷ್ಟವಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಸಾಮಾನ್ಯರ ಮೇಲೆ ಹೇರಲಿಷ್ಟಪಡುತ್ತಾರೆ. ಹಾಗೇ ಇದೂ ಕೂಡ...ಅಷ್ಟೇಯ.?!

ಒಂದು ಕಟುಸತ್ಯ ಹೇಳಿದರೆ ಯಾರಿಗಾದರೂ ಕೋಪ ಬರುವುದು ಸಹಜ.. ಮತ್ತು ಅಂಥ ಸತ್ಯ ಹೇಳಲು ಈ ದೇಶದಲ್ಲಿ ಎಲ್ಲರಿಗೂ ಹಕ್ಕಿದೆ...ಜೊತೆಗೆ ಸ್ವಾತಂತ್ರ್ಯವೂ ಇದೆ. ಎಷ್ಟು ಸ್ವಾತಂತ್ರ್ಯ..? ಭಾರತದ ಸೈನಿಕರು ಪಾಕಿಸ್ತಾನ ಅಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿನ ಭಯೋತ್ಪಾದನಾ ಗುಂಪುಗಳಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನಿ ಸೈನಿಕರು ಮತ್ತವರ ತಾಣಗಳನ್ನು ಸದೆಬಡಿದು ಬಂದರೆ….ಈ ರಾಗಾ ಎಂಬ ರಾಹುಲ್‌ ಗಾಂಧಿಯು ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿ ಯವರನ್ನು "ಖೂನ್‌ ಕಿ ದಲಾಲ್‌'(ಖೂನಿ ಮಾಡುವವರ ದಳ್ಳಾಳಿ) ಎಂದು ಅವಹೇಳನಕಾರಿಯಾಗಿ ಕರೆಯಬಹುದಾದಷ್ಟು ಸ್ವಾತಂತ್ರ್ಯವಿದೆ . ಆ ಹೇಳಿಕೆಯ ಬೆಂಬಲಕ್ಕೆ ನಿಲ್ಲುವ ವ್ಯಕ್ತಿಗಳೂ ಇದ್ದಾರೆ, "ರಾಗಾ ಹೇಳಿದ್ದು ಸರಿಯೇ..!’ ಎಂದು ಧಬಾಯಿಸಿ ವಾದಿಸುವಂಥ-ಯೋಗ್ಯ ಮಂದಿಯೂ ಇದ್ದಾರೆ ಈ ದೇಶದಲ್ಲಿ.!? ಆದರೆ ನರೇಂದ್ರ ಮೋದಿಯವರು ಮಾಡಿದ್ದು ದೇಶದ ರಕ್ಷಣೆಗಾಗಿ ಎಂಬುದನ್ನು ಮರೆಯಬಾರದು .

ಹೀಗಿರುವಾಗ ದೊಡ್ಡಮನುಷ್ಯರೆಂಬ ಬ್ರಿಟಿಷರು ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದರು … ಎನ್ನುವುದೂ ಅಷ್ಟೇ ಕಟು ಸತ್ಯವಾದ ವಿಷಯ. ಹಾಗಿದ್ದರೂ ಈ ಗುಲಾಮಿ ಭಾರತೀಯ ದೊಡ್ಡಮನುಷ್ಯರು... ಕ್ರಿಕೆಟ್‌ ಕಲಿತರೆ ತಾವೂ ಕೂಡ ಬ್ರಿಟಿಷರಂತೆಯೆ ದೊಡ್ಡಮನುಷ್ಯರಾಗುತ್ತೇವೆಂದು ತಿಳಿದುಕೊಂಡದ್ದು , ಮತ್ತದನ್ನು ಅನುಕರಿಸಿ ಕಲಿತದ್ದು ಹೇಗೆ ಎಂಬುದಕ್ಕೆ ಈ ಕೆಳಗಿನ ಇಂಗ್ಲೀಷ್‌ ಕಂಡಿಕೆಗಳನ್ನು ಓದಿ ಅರ್ಥಮಾಡಿಕೊಳ್ಳುವುದು. . ಮೊದಮೊದಲು ನಮ್ಮ ದೇಶದ ರಾಜರುಗಳೇ ಈ ಇದರ ಅಡಿಯಾಳುಗಳಾಗಿದ್ದರು …ಆ ನಂತರ, ಅವರನಂತರದ ಕೆಳಗಿನ ದೊಡ್ಡಮನುಷ್ಯರು ನಾವೇನು ಕಡಿಮೆಯೆಂದು ತೋರಿಸಲು ಆ ಆಟಕ್ಕಿಳಿದಿದ್ದರು. ನಂತರ...ತೀರ ಕೆಳಗಿನ ಹಂತದವರೆಗೂ ಅದು ಜಿನುಗುತ್ತಾ ಇಳಿದಿತ್ತು ...ಸಮಾಜದೊಳಕ್ಕೆ.

Abhishek Ranjan, works at Hindi Sahitya Sabha, on April 13, 2016 on Quora https://www.quora.com/Why-are-people-so-crazy-for-cricket-in-India

Why are people so crazy for cricket in India?


The game of cricket is part of British legacy which India has revered as the game of Kings. It is also referred to as the Gentle-men's game. First the royal families adopted this game. Then it became popular with the elite and wannabe elite so that they could hobnob with the royalty and the British. After that it percolated down and became popular with the masses.

But cricket is not played everywhere in the world. This sport is limited to 10-12 countries. The fact is that this sport is popular in some of the countries (not all) which were ruled by England(former colonies of England). Even the people of England (Which gave birth to cricket) are not crazy about this sport.
A large portion of the Indian people is addicted to this sport. When there is a Cricket Match between India and any other country, or even between Australia and West Indies (or any other two countries), Cricket Fanatics in India like to avoid routine work and like to sit before TV sets to watch the match live. These people get a hysteric pleasure when ‘their’ team gets advantage, and if 'their' player makes a mistake (i.e. outs, dropping of a catch or giving runs to the opposite team), these fanatics use abusive words for their own cricketers.

ಈ ಕೆಳಗಿನ ಇನ್ನೊಂದು ಕಂಡಿಕೆಯನ್ನು ಓದಿ...ಭಾರತದಲ್ಲಿ ಕ್ರಿಕೆಟನ್ನು ಯಾಕೆ ಆಡುತ್ತಾರೆಂದರೆ..? ಅದು ಅವರಲ್ಲಿರುವ ಮನೋಭಾವ... ಕ್ರಿಕೆಟಿನಲ್ಲಿ ಆಟಗಾರರು ಒಬ್ಬರನ್ನೊಬ್ಬರು ಕೈ-ಮೈ ತಗಲಿಸುವುದಿಲ್ಲ... ಎಂಬುದೊಂದು ಕಾರಣ…. ಭಾರತೀಯರು ಸಾವಿರಾರು ವರ್ಷಗಳಿಂದ ಆಚರಿಸುತ್ತಿರುವ... (ವರ್ಣಭೇದ ನೀತಿ...ಅಂದರೆ ಮೇಲ್ಜಾತಿ ಕೆಳಜಾತಿ ಪದ್ಧತಿ ಅನುಸರಿಸುತ್ತಿರುವ ಕಾರಣ) ಕಾರಣ ಈ ಮನುಷ್ಯರು ಒಬ್ಬರಿಗೊಬ್ಬರು ಕೈ-ಮೈ ತಗುಲಿಸುವುದನ್ನು ಇಷ್ಟಪಡದೆ ಇರುವುದು ...ಮುಖ್ಯವಾಗಿ ಬ್ರಾಹ್ಮಣರು… ಕ್ರಿಕೆಟಿನಲ್ಲಿ ಹೆಚ್ಚುಮಂದಿ ಬ್ರಾಹ್ಮಣರೇ ಇರುವುದನ್ನೂ ಸಹ ಯಾರಾದರೂ ಗಮನಿಸಿರಬಹುದು . ಅಂದರೆ… ಪುರೋಹಿತ ಶಾಹಿ ದೊಡ್ಡಮನುಷ್ಯರು … ದೊಡ್ಡಮನುಷ್ಯರೆಂದರೆ ಬ್ರಾಹ್ಮಣರೂ ಆಗಿದ್ದಾರೆ…. ಮುಂದೆ ಓದಿ.

https://www.economist.com
…. The third reason is related to the subconscious mind. Indians were following untouchability for thousands of years. It was banned by law in modern India. But the practice still lives in subconscious minds of most of the Indians. Cricket is the game where the players do not need to touch each others. This is not possible in football, hockey, wrestling, kabaddi etc. That is why there is a love for cricket and hate for ‘touching games’ among average Indians. That is why we see most of the Indian cricketers are from Brahmin or so called 'higher' communities. This fact tells us why we do not see cricket players from the so called lower castes in cricket teams.

Contrary to what many believe, India’s success at cricket does not explain it; if it did, hockey would be far more popular. Between 1928 and 1956, India's hockey team won six consecutive Olympic gold medals, a domination Indian cricketers have never threatened to rival. Despite having more cricketers than the rest of the world put together, India has only fairly recently become consistently competitive at cricket.

ಮಿಗಿಲಾಗಿ ಭಾರತದಲ್ಲಿ ಕ್ರಿಕೆಟಿಗಿಂತ ಹಾಕಿ ತುಂಬಾ ಆಸಕ್ತಿಯ ಆಟವಾಗಬೇಗಿತ್ತು. ಯಾಕಂದರೆ ಅದನ್ನು ರಾಷ್ಟ್ರೀಯ ಆಟವೆಂದು ಭಾರತ-ಸರ್ಕಾರ ಘೋಷಿಸಿದೆ. 1928ರಿಂದ 1956 ರವರೆಗೆ ನಡೆದ ಒಲಂಪಿಕ್‌ ಪಂಧ್ಯಗಳಲ್ಲಿ ಎಡೆಬಿಡದೆ ಆರುಬಾರಿ ಭಾರತದ ಹಾಕಿ ಗುಂಪು ಚಿನ್ನದ ಪದಕವನ್ನು ಗಳಿಸಿದೆ. ಆದರೂ ಭಾರತ-ಸರ್ಕಾರ ಹಾಕಿ ಆಟಗಾರರಿಗೆ ಮನ್ನಣೆಯನ್ನೇನು ನೀಡದೆ ರಾಷ್ಟ್ರೀಯ ಆಟದ ಮನ್ನಣೆ ಪಡೆಯದ ಕ್ರಿಕೆಟ್‌ ಆಟವನ್ನಾಡುವ ಮಂದಿಗೆ ಮನ್ನಣೆ ನೀಡುತ್ತದೆ.. ಕೆಲವೊಮ್ಮೆ ಭಾರತ-ಸರ್ಕಾರ... ಭಾರತದಲ್ಲಿ ನೀಡುವ ಅತಿ-ಮೇಲ್‌ಸ್ಥರದ ಪ್ರಶಸ್ತಿಯನ್ನೂ ನೀಡಿಬಿಡುತ್ತದೆ…ರಾಷ್ಟ್ರೀಯ ಆಟ ಆಡುವ/ಆಡಿದ ಹಾಕಿ ಆಟಗಾರರನ್ನು ಧಿಕ್ಕರಿಸಿ?! ಈ ವಿಷಯದಲ್ಲಿ ನಾವು ಜ್ಞಾಪಿಸಿಕೊಳ್ಳಬೇಕಾದುದು ಮೇಜರ್‌ ಧ್ಯಾನ್‌ಚಂದ್‌ ಅವರನ್ನು . ಈ ರೀತಿಯ ಮನ್ನಣೆ, ಹಾಕಿ ಪ್ರಿಯರಿಗೆ ಒಂದು ಆಘಾತಕಾರಕ.

…. Nor was cricket's conquest of India a colonial ruse. India's 19th-century British rulers never intended to proselytize their favorite game. But this proved to be the original, and perhaps most important, reason for its astonishing spread. Anxious for the prestige that the British attached to the game, some of the richest and most ambitious Indians – including Parsi and Hindu business communities in Bombay and princely rulers elsewhere – began playing it off their own bat (as it were). Thus, cricket became a game of the Indian elite, loaded with political significance which it has never lost. The fact that Jawaharlal Nehru, India's first prime minister, also opened the batting for the Indian Parliament side was a symbol of a wider retention of British culture and institutions. No other sport has ever received such top-level patronage in India.
My personal opinion:
Why? Because... they were all former Colonial British India’s subjects. And they, the congress people responsible for the adaptation of the British Parliamentary system in India as forming a Government. It is very manipulative in selecting Prime Minister and President of India.
ಈ ಮೇಲಿನ ಕಂಡಿಕೆಯ ಸಾರಾಂಶದಿಂದ ತಿಳಿಯುತ್ತೆ... ಭಾರತೀಯರು ಹೇಗೆ ಬ್ರಿಟಿಷರ ಅಡಿಯಾಳುಗಳಾದರೆಂದು?! ಅಂದರೆ ಗುಲಾಮಿತನ ಮೇಲ್ಹಂತದಿಂದಲೇ ವ್ಯವಸ್ಥಿತವಾಗಿ ಇಳಿದುಬಂದಿದೆ . ಇನ್ನೂ ಮುಂದೆ ಓದಿ…
https://www.economist.com/search
But Indian cricket was not only elite. From its earliest days in Bombay, it was also popular. Vast crowds turned out to watch the first Parsi and Hindu teams take on their colonial rulers, and each other. This reflected the time and place; surging growth in Bombay's textile factories had spawned a new class of organized labor, with a modicum of spare time and money. It perhaps also reflected the hierarchic nature of traditional Indian society.

The Economist, a print media, explains…‘Why Indians love cricket’

. No longer elite, Indian cricket is now emphatically populist. What was once an English summer game has become in India a celebrity-infused, highly politicized, billion-dollar industry. In this confection, cricket’s storied gentlemanly ideals, of good manners and fair play, are at best only dimly apparent.
ನಮ್ಮ ರಾಷ್ಟ್ರೀಯ ಆಟ...ಹಾಕಿ, ದೇಶೀಯ ಆಟಗಳಾದ ಕಬಡ್ಡಿ, ಖೋಖೋ, ಹೇಳ ಹೆಸರಿಲ್ಲದಂತೆ ಅವಸಾನದ ಅಂಚಿಗೆ ತಲುಪಿದವು. ಇವನ್ನು ಗಮನಿಸಿರಿ...ಭಾರತೀಯ ಇಂಗ್ಲೀಷ್‌ ಮತ್ತು ಭಾಷಾ ಮಾಧ್ಯಮಗಳನ್ನು… ಮುದ್ರಣ ಅಥವಾ ವಿಧ್ಯುನ್ಮಾನ ಮಾಧ್ಯಮ...ಯಾವುದಾದರಿರಲಿ ಕ್ರಿಕೆಟಿಗೆ ಕೊಟ್ಟಷ್ಟು ಮಾನ್ಯತೆಯನ್ನು ಕಬಡ್ಡಿಗಾಗಲೀ ಖೋಖೋ ಗಾಗಲೀ ನೀಡುವುದಿಲ್ಲ. ಕ್ರಿಕೆಟಿಗೆ ನೀಡಿದಷ್ಟು ಪುಟಗಳ ಜಾಗವನ್ನೂ ಮತ್ತು ವೇಳೆಯನ್ನು ಇವುಗಳಿಗೆ ನೀಡುವುದಿಲ್ಲ. ಕ್ರಿಕೆಟ್‌ ಈಗ...ರಾಷ್ಟ್ರೀಯ ಆಟ ಮತ್ತು ದೇಶೀಯ ಆಟಗಳನ್ನು ತುಳಿದುಹಾಕಿ ವ್ಯಾಪಕವಾಗಿ ಹಬ್ಬಿ ಮೆರೆಯುತ್ತಿದೆ . ಅದೊಂದು...ಆಟಕ್ಕಿಂತ ವ್ಯಾಪಾರವಾಗಿದೆ. ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆಗಳು ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಕ್ರಿಕೆಟನ್ನು ಬಳಸಿಕೊಳ್ಳುತ್ತಿದ್ದಾರೆ . ಜಪಾನೀಯರು ಕ್ರಿಕೆಟನ್ನು ಆಡುವುದಿಲ್ಲ. ಆದರೆ ಆ ದೇಶದ ವ್ಯಾಪಾರಿ ಸಂಸ್ಥೆಗಳು ಕ್ರಿಕೆಟಿಗರನ್ನು ಭಾರತದಲ್ಲಿ ಅವರ ಉತ್ಪನ್ನಗಳನ್ನು ಮಾರುವುದಕ್ಕೆ ಮಾರಾಟ ಪ್ರತಿನಿಧಿಗಳಂತೆ ಮಾದರಿಗಳನ್ನಾಗಿ ಬಳಸಿಕೊಳ್ಳುತ್ತಿವೆ . ವಿದ್ಯುನ್ಮಾನ ವಾಹಿಗಳು ಹಣಮಾಡಿಕೊಳ್ಳುತ್ತಿವೆ . ಮೋಸಮಾಡುವ ಧಂದೆಕೋರರಿಗೆ ಆದಾಯದ ಮೂಲವಾಗಿದೆ. ಮೋಸಗಾರರು ಆಟಗಾರರ ಜೊತೆಗೆ ಅದರ ವ್ಯವಸ್ಥಾಪನೆಯ ಆಡಳಿತಗಾರರಾಗಿಯೂ ಸೇರಿಕೊಂಡಿದ್ದಾರೆ. ಇನ್ನೇನು ಹೇಳಬೇಕು... ಮೂರೂ ಬಿಟ್ಟ ಜನಕ್ಕೆ. ಇನ್ನಷ್ಟು ಅಭಿಪ್ರಾಯಗಳನ್ನು ಮುಂದೆ ಓದಿ….
Amartya Talukdar on Open Page, The Hindu, Sunday, August 6, 2017:
“Since the time of the Young Bengal movement (started during the Bengal Renaissance by Henry Vivian Derozio), westernized Hindus have a proclivity to consume beef to prove that they are modern and sufficiently westernized. The trend continues….”
My addendum... “playing cricket”...consumerism.

Buddhdeb Dasgupta, Bengali filmmaker on The Hindu Magazine, Sunday, August 6, 2017:
“I think it is the system that holds out the bait for common citizens, inviting them to succumb to its lure. We find proof of this everywhere – in advertising, in politics. I think I have never seen a worse time than this. You can call it my political stance in a way.”

Here, my addendum, added the words...“even in sports”.

ಮೇಲೆ ವಿವರಿಸಿ ತಿಳಿಸಿರುವ ಅಂಶಗಳನ್ನು... ಪಾಶ್ಚಿಮಾತ್ಯ ಸಂಸ್ಕೃತಿ, ಕ್ರೀಡೆ ಗಳನ್ನು...ಮನದಟ್ಟುಮಾಡಿಕೊಂಡು ಅತ್ಮಸಾಕ್ಷಿಯಾಗಿ ಭಾರತೀಯರು ಗುರುತಿಸಿಕೊಂಡು ಯೋಚಿಸಿದರೆ…ಸತ್ಯದ ಅರಿವಾಗುತ್ತದೆ.
ಕ್ರಿಕೆಟ್‌ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಅಡಲ್ಪಡುತ್ತಿದೆ. ಅದರ ಹುಟ್ಟೂರು ರಾಷ್ಟ್ರ... ಬ್ರಿಟನ್‌, ಬಡಾವಣೆಗಳಾದ ಆಷ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌. ಯೂರೋಪಿಗೆ ಹಿಂದಿರುಗಿದರೆ ಐರ್ಲೆಂಡ್‌ ಮತ್ತು ಹಾಲೆಂಡ್‌… ಮತ್ತೆ ಬ್ರಿಟನ್ನಿನ ಹಲವು ಹಳೆಯ ವಸಾಹತುಗಳಾದ ದಕ್ಷಿಣ ಆಪ್ರಿ಼ಕ, ಜಿ಼ಂಬಾಬ್ವೆ(ಹಳೆಯ ದಕ್ಷಿಣ ರೊ಼ಡೀಸಿ಼ಯ), ವೆಸ್ಟ್‌ ಇಂಡೀಸ್‌ (ದ್ವೀಪಗಳು), ಮತ್ತು ಭಾರತೀಯ ಉಪಖಂಡದಲ್ಲಿನ ಭಾರತ, ಪಾಕಿಸ್ಥಾನ, ಶ್ರೀಲಂಕ ಮತ್ತು ಬಂಗ್ಲಾದೇಶ; ಏಷ್ಯಾದಲ್ಲಿ ಹೊಸದಾಗಿ ಸೇರಿಕೊಂಡ ದೇಶ… ಆಫ್ಘಾ಼ನಿಸ್ಥಾನ ವಸಾಹತು ಶಾಹಿಗಳಾದ ಬ್ರಿಟಿಷ್‌ ದೊಡ್ಡಮನುಷ್ಯರು ಆಡುತ್ತಿದ್ದ ಆಟವನ್ನು ಆಡುವುದಕ್ಕೆ ಕಲಿತದ್ದು … ವಸಾಹತುಗಳ ಗುಲಾಮಿ ದೊಡ್ಡಮನುಷ್ಯರು. ಇದೀಗ ಕಿನ್ಯಾ ಮತ್ತು ಕೆನಡಾ ರಾಷ್ಟ್ರಗಳೂ ಸೇರಿಕೊಂಡಿವೆ. ಅದನ್ನು ಕಲಿತ ಮೇಲೆ ತಮ್ಮತನವನ್ನೇ ಮರೆತು ಈ ಗುಲಾಮಿಗಳು ಆಡುತ್ತಿದ್ದಾರೆ. ಭಾರತೀಯ ಉಪಖಂಡ ಮತ್ತು ಪಶ್ಚಿಮ-ಏಷ್ಯದಾದಲ್ಲಿ ಕ್ರಿಕೆಟನ್ನು ಆಡದಿದ್ದರೆ ಗುಲಾಮಿತನ ಬೆಳೆಸಿದ ರಾಷ್ಟ್ರ ಬ್ರಿಟನ್ನಿನಲ್ಲಿರುವ ಐಸಿಸಿ ಎಂಬ ಸಂಸ್ಥೆ ಹೇಳಲು ಹೆಸರಿಲ್ಲದಂತೆ ಸತ್ತುಹೋಗುತ್ತದೆ. ಅದಕ್ಕೇ ಹೇಳುವುದು ಹಳೆಯ ಬ್ರಿಟಿಷ್‌ ವಸಾಹತುಗಳ ದೊಡ್ಡ ಜನ ತಮ್ಮ ಗುಲಾಮಿ ಚಾಳಿಯನ್ನು ಮುಂದುವರಿಸಿ ತಾವಿನ್ನೂ ಬ್ರಿಟಿಷ್‌ ದೊಡ್ಡಮನುಷ್ಯರ ಗುಲಾಮರೆಂದು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ..

ಬರೀ ಭಾರತೀಯ ಜನರಷ್ಟೇ ಗುಲಾಮರಾಗಿಲ್ಲ…ಭಾರತದ ಪತ್ರಿಕೆಗಳೂ ಕೂಡ?! ಅದರಲ್ಲೂ ಇಂಗ್ಲೀಷ್‌ ಪತ್ರಿಕೆಗಳು… ಕ್ರಿಕೆಟ್ ಪ್ರಪಂಚ ಕೊಳೆತು ನಾರುವ ಹೂಸು ಬಿಡುತ್ತಿದ್ದರೂ ಪುಟಗಟ್ಟಲೆ ಬರೆದು ಹಾಡಿ ಹೊಗಳುತ್ತವೆ . ಇವರಿಗೆ ನಾಚಿಕೆಯೆಂಬುದೇ ಇಲ್ಲ. ಕ್ರಿಕೆಟಿನಲ್ಲಿ ಭಾರತೀಯ ಉಪಖಂಡದ ಯಾವ ರಾಷ್ಟ್ರ ಗೆದ್ದರೂ ಅದು ಬ್ರಿಟನ್ನಿಗೆ ಹೆಮ್ಮೆ… ಅವರ ಗುಲಾಮರನ್ನು ಅವರ ಆಟದ ಗುಲಾಮರನ್ನಾಗಿ ಮಾಡಿಬಿಟ್ಟಿರುವುದು.!? ಮತ್ತು ಹೆಚ್ಚಿದ ಆದಾಯ. ಹೇಗೆಂದರೆ ದೊಡ್ಡಮನುಷ್ಯರಿಗೆ ಸಿಗುವ ...ಸಿಕ್ಕಿದ ಬಳುವಳಿಯಿಂದಾಗಿ.
ಏನೋ… ನಾಚಿಕೆಯಿಲ್ಲದೆ ಈ ವ್ಯಾಪಾರೀ ಗುಲಾಮಿತನದ ಆಟ ಆಡುವ ಮಂದಿಯಿಂದ ಭಾರತ ಸರ್ಕಾರಕ್ಕೆ ಒಂದಿಷ್ಟು ಆದಾಯ ತೆರಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ಒಂದಷ್ಟು ಮನರಂಜನಾ ತೆರಿಗೆ ಬರಬಹುದು ಅಷ್ಟೆ..!

WikiDiff tells,

Slave is a synonym of addict.

As nouns the difference between slave and addict

is that slave is a person who is the property of another person and whose labor and also whose life often is subject to the owner's volition while addict is a person who is addicted, especially to a harmful drug.

As verbs the difference between slave and addict

is that slave is to work hard while addict is to cause someone to become addicted, especially to a harmful drug. ###
ಟಿ.ದಿವಾಕರ

Comments

Popular posts from this blog

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ