ಪ್ರವಾಸ ಕಥನ: ಜೀಪಿನಲ್ಲಿ ಲಡಖ್ ಪ್ರವಾಸ
ಪ್ರವಾಸ ಕಥನ ಜೀಪಿನಲ್ಲಿ ಲಡಖ್ ಪ್ರವಾಸ ಬರಹ: ದಿವಾಕರ ತಿಮ್ಮಣ್ಣ ಚಿತ್ರಗಳು: ಡಾ|| ಸಿಂಚನ ದಿವಾಕರ , ಚಿನ್ಮಯಿ ದಿವಾಕರ ವರ್ಷ: 2011(ಜೂನ್ 03ರಿಂದ 12ರವರೆಗೆ) ಪ್ರಸ್ತಾಪ: ಯಶಪಾಲ ಮಾರ್ಚ್ ತಿಂಗಳಿನಿಂದಲೇ ನೊಯಿಡಾದಿಂದ ದೂರವಾಣಿ ಮೂಲಕ ನಮ್ಮ ಕುಟುಂಬದ ಸದಸ್ಯರೊಂದಿಗೆ ವಿಷಯ ಪ್ರಸ್ತಾಪಿಸಿ ಸತಾಯಿಸುತ್ತಿದ್ದ… ಜೂನ್ ತಿಂಗಳಿನಲ್ಲಿ ಮನಾಲಿಯ ಹತ್ತಿರದ ರೊಹ್ತಾಂಗ್ ಪಾಸ್ ತೆರೆಯುತ್ತದೆಂದು ತಿಳಿಸಿ ಲಡಖ್ನ ಲೆಹ್ಗೆ ದೆಹಲಿಯಿಂದ ಜೀಪಿನಲ್ಲಿ ಕುಲ್ಲು-ಮನಾಲಿ ಮಾರ್ಗವಾಗಿ ಪ್ರವಾಸ ಹೋಗೋಣವೆನ್ನುತ್ತಿದ್ದ. ಆ ವೇಳೆಗೆ 10 ದಿನಗಳ ರಜೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರು-ದೆಹಲಿ-ಬೆಂಗಳೂರು ಮಧ್ಯೆ ಮರುಪ್ರಯಾಣದ ಅನುವು ಮಾಡಿ ವಿಮಾನದ ಟಿಕೆಟ್ ಖರೀದಿಸಲು ಯೋಜಿಸಿ ಸಿದ್ಧವಾವಾಗಿರಲು ಸೂಚನೆ ನೀಡಿದ್ದ. ನಾವು ಏಪ್ರಿಲ್ ತಿಂಗಳಿನಲ್ಲಿ ವಿಮಾನಗಳ ಸೀಟು ಲಭ್ಯತೆ ನೋಡಿ ಜೂನ್ 03 ರಿಂದ 12ರವರೆಗೆ ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನಿಂದ ಐದು ಜನ ಹೊರಡುವುದೆಂದು ಟಿಕೆಟುಗಳನ್ನು ಕಾಯ್ದಿರಿಸಿದೆವು… ನಾನು ನನ್ನ ಪತ್ನಿ ವಸಂತ, ಮಕ್ಕಳಾದ ಡಾ|| ಸಿಂಚನ ಡಿ., ಚಿನ್ಮಯಿ ಡಿ., ಮತ್ತು ನನ್ನ ಷಡ್ಡಕನ ಮಗಳಾದ ಪುಷ್ಪಲತ