Posts

ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ

                                                  ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ                                                        ಊರಿಂದಲ/ಊರಹಿಂದಲ ಮಲ್ಲೇಗೌಡ ಕುಟುಂಬ ಶ್ರೀ ಎಂ . ಚಂದ್ರಶೇಖರಯ್ಯ , ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಹೊಸಹಳ್ಳಿಯ ಊರಿಂದಲ ( ಊರಹಿಂದಲ ) ಮಲ್ಲೇಗೌಡರ ಹಿರಿಯ ಮಗ , ಅವರ ತಾತನ ಹೆಸರೂ ಮಲ್ಲೇಗೌಡ ... ಎಂದೇ . ' ಊರಹಿಂದಲ ' ಎಂಬುದಕ್ಕೆ ಕಾರಣ ..! ಊರಿನ ದೊಡ್ಡಮನೆಯ ಮುಂಬಾಗಿಲು ಪೂರ್ವಕ್ಕೆ ಇದ್ದು ಆಮನೆಯ ಹಿಂಭಾಗಕ್ಕೆ ಇದ್ದುದರಿಂದಲೋ ಅಥವಾ ಊರಿನಲ್ಲಿನ ದೇವಸ್ಥಾನಗಳು ಆ ಮನೆಯ ಪೂರ್ವಕ್ಕೆ ಇದ್ದುದರಿಂದಲೋ ಏನೋ ಇರಬೇಕು , ಇಲ್ಲವೆ ಅವರ ಮನೆ ಪಶ್ಚಿಮದಲ್ಲಿ ಒಂಟಿಯಾಗಿದ್ದುದರಿಂದಲೋ ಏನೋ ಇರಬೇಕು ..? ಒಟ್ಟಿನಲ್ಲಿ ' ಊರಿಂದಲ / ಊರಹಿಂದಲ ' ಎಂಬ ವಿಶೇಷಣ ಅವರ ಕುಟುಂಬಕ್ಕೆ ಅಂಟಿಕೊಂಡಿತ್ತು . ಮನೆಯಲ್ಲಿ ಬೆಳ್ಳಿಬಂಗಾರ ದವಸ - ಧಾನ್ಯ ತುಂಬಿ ತುಳುಕಾಡುತ್ತಿದ್ದುದೆಂದೇ ಹೇಳಬೇಕು . ಆ ಮಟ್ಟಿಗೆ ಅವರು ನಮ್ಮೂರಿನಲ್ಲಿ ಶ್ರೀಮಂತರೇ ಆಗಿದ್ದರು , ಮನೆಯ ಮುಂದೊಂದು ಬ್ರಿಟಿಷರ ಕಾಲದ ಕಪ್ಪುಕಾರೊಂದು ನಿಂತಿರುತ್ತಿತ್ತು ... ಬಾಕಿ ಮಂದಿ ನೀರಾವರಿ ಜಮೀನುಗಳಲ್ಲಿ ಕಪಿಲೆ ಹೊಡೆದು ಬಾವಿಗಳಿಂದ ನೀರೆತ್ತುತ್ತಿದ್ದರೆ ಇವರ ನೀರಾವರಿ ಬಾವಿಗೆ ಅಳವಡಿಸಿದ್ದ ಜರ್ಮನಿಯಲ್ಲಿ ತಯಾರಾಗಿದ್ದ

ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು

ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು ನ ಮ್ಮೂರು , ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ… ಆಂದ್ರಪ್ರದೇಶದ ಮಡಕಶಿರ ತಾಲ್ಲೂಕಿನ ಗಡಿಯಲ್ಲಿ ಐದಾರು ಕಿಲೋಮೀಟರುಗಳ ಅಂತರದಲ್ಲಿದೆ . ಇಲ್ಲಿ ಇದೇ ಜೂನ್‌ 14, 2017 ರಂದು ಗುರುವಂದನಾ ಕಾರ್ಯಕ್ರಮವೊಂದು ನಡೆದಿದೆ . ನಮ್ಮೂರಿನ ಪ್ರೌಢಶಾಲೆ , " ಶ್ರೀಮಾರುತಿ ಗ್ರಾಮಾಂತರ ಪ್ರೌಢಶಾಲೆ ' ಯಲ್ಲಿ ಹತ್ತನೇ ತರಗತಿಯವರೆಗೆ ಕಲಿತ ಅಂದಿನ ಹುಡುಗರು ಇಂದಿನ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು . ನಾನೂ ಸಹ ಅದೇ ಶಾಲೆಯಲ್ಲಿ 10 ನೇ ತರಗತಿ ಮುಗಿಸಿದ್ದುದರಿಂದ ನನಗೂ ಸಹ ಕರೆಯೋಲೆಯಿತ್ತು . ಹಲವಾರು ಕೆಲಸಗಳ ತೊಡಕಿನಲ್ಲಿ ಸಿಲುಕಿದ್ದುದರಿಂದ ನಾನು ಬರಲಾಗುವುದಿಲ್ಲವೆಂದು ಪೋ಼ನಿನ ಮೂಲಕ ಮತ್ತೊಮ್ಮೆ ಜ್ಞಾಪಿಸಿದ ತುಮಕೂರಿನ ಕುಮಾರನಿಗೆ ತಿಳಿಯ ಹೇಳಿದೆ . ಒಟ್ಟಿನಲ್ಲಿ ಆ ಕಾರ್ಯಕ್ರಮಕ್ಕೆ ನಾನು ಹೋಗಲಿಲ್ಲ . ನಮ್ಮ ಹನುಮಂತರಾಯಣ್ಣ ( ಮೂರ್ತಿ ) ನ ಮಗ ಕಿರಣ ವಾಟ್ಸಪ್‌ನಲ್ಲಿ ಕಾರ್ಯಕ್ರಮದ ಪೋ಼ಟೋಗಳನ್ನು ಹಾಕಿದ್ದನು . ತುಮಕೂರಿನ ಶಿವಕುಮಾರ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಸಚಿತ್ರ ವರದಿಯನ್ನು ಚಿತ್ರ ತೆಗೆದು ಅವನ ವಾಟ್ಸಪ್‌ನಲ್ಲಿ ಪ್ರಕಟಿಸಿಬಿಟ್ಟಿದ್ದ . ಇದನ್ನು ಗಮನಿಸಿದ ಮೇಲೆ ನಾನು ಹೋಗದೆ ಇದ್ದುದಕ್ಕೆ ಸ್ವಲ್ಪಮಟ್ಟಿನ ಬೇಜಾರಾಯಿತು…ಕಾರ್ಯಕ್ರಮದಲ್ಲಿ ನನ್ನ ಪ್ರೀತಿಯ ಮಾವ ಮುಖ್ಯೋಪಾಧ್ಯಾಯರಾಗಿದ್ದ ಹೆಚ್‌ . ಎಂ . ಹನು