ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು

 ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು

 ಭಾರತ ದೇಶದ ಅತಿಮೂರ್ಖ ಸ್ವಾರ್ಥ ದೇಶದ್ರೋಹಿ ನಾಯಕರು

ತಮಿಳರಲ್ಲದ ಯಾರೇ ಆಗಲಿ ಅವರು ಚೆನ್ನೈ ನಗರದ ಕೇಂದ್ರ ಸ್ಥಳ 'ಎಗ್ಮೋರ' ದ ಸುತ್ತಮುತ್ತಲಿನ ಪಾದಚಾರಿ ರಸ್ತೆಗಳಲ್ಲಿ ಸುತ್ತಾಡಿದರೆ, ಅಥವಾ ಮೋರ್‌ ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಅವರಿಗೊಂದು ಅನುಭವವಾಗುತ್ತದೆ. ಅಲ್ಲಿನ ಒಳಗಿನ ಮತ್ತು ಹೊರಗಿನ ಪಾದಚಾರಿ ದಾರಿಗಳಲ್ಲಿ ವಿಧ್ಯುನ್ಮಾನ ವಸ್ತುಗಳನ್ನು ಮಾರುವ ಹುಡುಗರು ಅವರ ಗಿರಾಕಿಗಳ ಬಳಿ ನಾಲ್ಕೈದು ಭಾಷೆಗಳಲ್ಲಿ ಮಾತನಾಡುತ್ತಾ ವ್ಯವಹರಿಸುತ್ತಿರುತ್ತಾರೆ… ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತೆ ಕೊನೆಗೆ ಇಂಗ್ಲಿಶಿನಲ್ಲಿ ಅವರ ಸಂಭಾಷಣೆಯಿರುತ್ತದೆ. ಈ ನಾಲ್ಕೈದು ಭಾಷೆಗಳಲ್ಲಿ ನಿರರ‍್ಗಳವಾಗಿ ಮಾತನಾಡುವ ಈ ಬೀದಿ ಬದಿಯ ವ್ಯಾಪಾರಿ ಹುಡುಗರು ಅವರ ನಾಡಿನ ಸಂಕುಚಿತ ಮನೋಭಾವದ ಮುಖ್ಯಮಂತ್ರಿ ಸ್ಟಾಲಿನ್‌ ವಿರುದ್ಧ ಭಾಷೆಯ ವಿಷಯವಾಗಿ ಎದರು ಮಾತನಾಡುವುದಿಲ್ಲವೇಕೆ? ಎಂಬುದೊಂದು ಪ್ರಶ್ನೆ? ಅವರು ಕಲಿತಿರುವ ಆ ಭಾಷೆಗಳು ಅವರ ಹೊಟ್ಟೆ ಹೊರೆಯುತ್ತವೆ. ಅವುಗಳವರ ದಿನದ ದುಡಿಮೆಯ ಮಾರ‍್ಗವಾಗಿವೆ?! ಇದನ್ನು ಚೆನ್ನಾಗಿ ಅರಿಯಬೇಕು ನಮ್ಮನ್ನು ಆಳುವ ಮಂದಿ… ಅಂದರೆ ಮುಖ್ಯಮಂತ್ರಿ ಮತ್ತವನ ಸಹಚರ ಮಂತ್ರಿಗಳು. ಈ ವಿಷಯವನ್ನು ಯಾಕೆ ಹೇಳುತ್ತಿದ್ದೀನೆಂದರೆ ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವ ಬಹುಭಾಷೆಗಳು ಸುತ್ತಮುತ್ತಲಿನ ಯಾವುದೇ ರಾಜ್ಯದಲ್ಲಿ ಬೇಗನೆ ತಮಗೊಂದು ಉದ್ಯೋಗ ದೊರಕಿಸಿಕೊಳ್ಳುವ ಸಾಮರ‍್ಥ್ಯ ಒದಗಿಸುತ್ತವೆ. ಅದನ್ನವರು ಬಳಸಿ ಉದ್ಯೋಗ ದೊರಕಿಸಿಕೊಳ್ಳಬಲ್ಲರೂ ಕೂಡ!? ಅಂದರೆ ಅವರು ಬಹು ಬೇಗನೆ… ಕಲಿತಿರುವ ಭಾಷೆಯ ನೆರವಿನಿಂದ ತಾವು ನೆಲಸುವ ನೆಲದ ಸಮಾಜದಲ್ಲಿ ಬೆರೆತು ಹೋಗುತ್ತಾರೆ, ಅವರ ಜೀವನ ರೂಪಿಸಿಕೊಳ್ಳುತ್ತಾರೆ.

ನಮ್ಮ ತಮಿಳು ನಾಡಿನ ಮುಖ್ಯಮಂತ್ರಿಯನ್ನು ತೆಗೆದುಕೊಳ್ಳಿ. ಈತನಂಥ ಸ್ವಾರ್ಥ ಮೂರ್ಖ ಶಿಖಾಮಣಿ ಮತ್ತೊಬ್ಬರಿಲ್ಲ… ಅಂಥಹ ಕೀಳು ಮನಸ್ಸಿನ ಸ್ವಾರ‍್ಥ ವ್ಯಕ್ತಿ. ತನ್ನ ನಾಡಿನ ಜನರ, ಕಲಿಯುವ ಮಕ್ಕಳ, ಯುವಕರ ಆಸೆ ಆಕಾಂಕ್ಷೆಗಳು, ಭಾಷೆ ಕಲಿಯುವ ವಿಷಯದಲ್ಲಾಗಲೀ ಹೆಚ್ಚಿನ ಶಿಕ್ಷಣಕ್ಕೆ ಹೋಗಲು ಇರುವ ಸ್ಪರ‍್ಧಾತ್ಮಕ ಪರೀಕ್ಷೆಗಳನ್ನು ಬರೆಯಲು... ಯಾವುದನ್ನು ಬರೆಯಬೇಕು ಯಾವುದನ್ನು ಬರೆಯಬಾರದು… ಎಲ್ಲವನ್ನೂ ಈ ಮುಖ್ಯಮಂತ್ರಿಯೇ ನಿರ‍್ಧರಿಸುತ್ತಾನೆ. ಕಲಿಯುವ ಮಕ್ಕಳ, ಯುವಕರ ಆಯ್ಕೆಗೆ ಬಿಡುವುದಿಲ್ಲ. ಆತ ಹೇಳಿದಂತೆಯೇ ಎಲ್ಲವೂ ನಡೆಯಬೇಕು. ಇದೊಂದು ರೀತಿಯಲ್ಲಿ ಆ ಮಕ್ಕಳ ಯುವಕರ ಸ್ವಾತಂತ್ರ್ಯವನ್ನೇ ಕಬಳಿಸುವ ರೀತಿ ನೀತಿ ಅಥವಾ ದಬ್ಬಾಳಿಕೆ ಎಂದರೂ ತಪ್ಪಾಗಲಾರದು. ಅಂದರೆ ಆತ, ಆತನ ನಾಡು, ತಮಿಳುನಾಡು ಸಂಯುಕ್ತ-ಭಾರತದ ಅವಿಭಾಜ್ಯ ಅಂಗವೇ ಅಲ್ಲ ಎಂದು ಬೆದರಿಸುತ್ತಾನೆ ಸಹಚರರೊಂದಿಗೆ ಸೇರಿಕೊಂಡು?! ಮುಂದುವರಿದು... ತಾನೇ ಬೇರೆ ತನ್ನ ನಿಲುವೇ ಬೇರೆ ಎಂದು ರುಪಾಯಿಯ ರಾಷ್ಟ್ರೀಯ ಚಿಹ್ನೆ ₹ ಬಳಕೆಯ ಉಪಯೋಗವನ್ನು ಧಿಕ್ಕರಿಸಿ ತಮಿಳಿನಲ್ಲಿ ಚಿಹ್ನೆ ಹಾಕಿಕೊಳ್ಳುತ್ತಾನೆ. ತನ್ನ ನಾಡಿನ ಜನತೆ ಸಂಯುಕ್ತ-ಭಾರತದ ರಾಷ್ಟ್ರೀಯರು ಮತ್ತವರ ಭಾರತೀಯತೆ ಮನೋಭಾವದ ಸ್ವಾತಂತ್ರ್ಯವನ್ನು ಕಸಿಯುತ್ತಾನೆ ಅವರನ್ನು ಅದರ ವಿರುದ್ಧ ತಿರುಗಿಬೀಳುವಂಥ ಮನಸ್ಥಿತಿಗೆ ತರಲು ಪ್ರಯತ್ನ ಮಾಡುತ್ತಾನೆ.

ಇನ್ನೊಬ್ಬ ಮೂರ್ಖ ಶಿಖಾಮಣಿ ಸಂಸತ್ತಿನ ಸದಸ್ಯ, ವಿರೋದ ಪಕ್ಷದ ನಾಯಕ ಕೂಡ, ತಾನೊಬ್ಬ ಕಾನೂನಾತೀತ ಸದಸ್ಯ ಎಂಬಂತೆ ವರ‍್ತಿಸುತ್ತಾನೆ. ಆತನು ಯಾರದೋ ಮೇಲಿನ ದ್ವೇಷಕ್ಕಾಗಿ ಏನೆಲ್ಲಾ ಹೇಳಿಕೆ ನೀಡುತ್ತಾನೆ: “ಭಾರತ ಒಂದು ರಾಷ್ಟ್ರವೇ ಅಲ್ಲ!?” ಎಂಬುದು, ಮತ್ತದರ ಅಧಿಪತ್ಯದ ವಿರುದ್ಧವೇ ಹೋರಾಡುತ್ತೇನೆ ಎನ್ನುತ್ತಾನೆ(ಇಲ್ಲಿ "ಅಧಿಪತ್ಯ"ವೆಂದರೆ ರಾಷ್ಟ್ರದ ಕಾವಲು ಕಾಯುವ ಸೇನೆ ಮತ್ತದರ ಮುಖ್ಯ ದಂಡನಾಯಕ… ರಾಷ್ಟ್ರಪತಿ). ಇದೆಂಥ ವಿಪರ್ಯಾಸ ಸಂಸತ್ತಿನ ಸದಸ್ಯನಾಗಿ ಒಬ್ಬ ಭಯೋತ್ಪಾದಕ ಕೊಡುವಂಥ ಈ ರೀತಿಯ ಹೇಳಿಕೆ... ತಾನು ಸದಸ್ಯನಾಗಿ ಪ್ರಮಾಣ ವಚನ ಮಾಡುವಾಗ ನೀಡಿದ ಹೇಳಿಕೆಯೇನು: "ಭಾರತದ ರಾಷ್ಟ್ರೀಯ ಅಖಂಡತೆಗೆ ಧಕ್ಕೆ ಬಾರದ ರೀತಿಯಲ್ಲಿ ನಡೆಯುತ್ತೇನೆ…” ಎಂಬ ಮಾತನ್ನು ಮರೆತು ಅದಕ್ಕೆ ಅರ‍್ಥವೇ ಇಲ್ಲ ಎಂಬಂತೆ ವಾದಿಸುತ್ತಾನೆ. ಈ ಒಂದು ಅಂಶವೊಂದೇ ಸಾಕು ಆತನಿಗೆ ದೇಶದ್ರೋಹದ ಹಣೆಪಟ್ಟಿ ಹಚ್ಚಿ ಸದಸ್ಯತ್ವ ರದ್ದು ಪಡಿಸಿ ಕಾರಾಗೃಹಕ್ಕೆ ದೂಡಬಹುದು. ಸರಕಾರವೇಕೆ ಈ ಬಗ್ಗೆ ಗಮನಹರಿಸಿಲ್ಲ… ಆಶ್ಚರ್ಯವೇ ಆಗಿದೆ. ಮತ್ತೊಂದು… ವಕ್ಫ಼್‌ ಕಾಯಿದೆ ತಿದ್ದುಪಡಿ ವಿರುದ್ಧ ಬೀದಿಗಿಳಿದು ಗಲಾಟೆ ಮಾಡಲು ಮುಸ್ಲಿಂ ಸಮುದಾಯದ ಮುಲ್ಲಾಗಳ ಜೊತೆಗೂಡಿ ಚರ್ಚಿಸುತ್ತಾನೆ, ಕಾರ‍್ಯಪ್ರವೃತ್ತನಾಗುತ್ತಾನೆ. ದಿನಾಂಕ:17-03-2025 ಈ ವಕ್ಫ಼್‌ ಕಾಯಿದೆ ತಿದ್ದುಪಡಿ ವಿರೋಧಿಸಿ ದೆಹಲಿಯ ಜಂತರ್ಮಂತರ್‌ ಬಳಿ ನೆರೆದ ವಿರೋಧದ ಜನ ಬೆರಳೆಣಿಕೆಯಷ್ಟು ಮಾತ್ರ. ಅದು ಮಾಧ್ಯಮದಲ್ಲಿ ಅಂತಹ ಸುದ್ಧಿಯಾಗಲಿಲ್ಲ. ಇದನ್ನು ನೆನಪಿಡಬೇಕಾದ್ದೆ! ಅಲ್ಲಿ ಈ ರಾಹುಲ ಗಾಂಧಿಯ ವಾಸನೆಯೂ ಇರಲಿಲ್ಲ. ಆತನ ಹಿಂಭಾಲಕ ಖರ್ಗೆ ಮಹಾಶಯರು ಅಂದು ಬೆಂಗಳೂರಿನಲ್ಲಿದ್ದರು.

ಈತ ಮೊದಲು ಅರಿಯಬೇಕು ನಮ್ಮ "ಅಖಂಡ ಭಾರತ" ಸನಾತನಿಗಳ ದೇಶವಾಗಿತ್ತೆಂದು. ಇಲ್ಲಿ ಬೇರೆ ಧರ್ಮೀಯರಿಗೆ ಜಾಗವಿರಲಿಲ್ಲ. ಸನಾತನಿಗಳ ಈ ದೇಶದ ಮೇಲೆ ಮಾಡಿದ ಅತಿಕ್ರಮಣಕಾರಿಗಳ ತುಳಿತಕ್ಕೆ ಸಿಲುಕಿ ಪೈಶಾಚಿಕ ಸಂತಾನಗಳು ಹುಟ್ಟಿಕೊಂಡವು. ಈ ಪೈಶಾಚಿಕ ಸಂತಾನಗಳು ಮಾಡಿದ ಅತ್ಯಾಚಾರ ಅನಾಚಾರ ವಿಧ್ವಂಶಗಳು ಅಷ್ಟಿಸ್ಟಲ್ಲ. ಅದೇ ರೀತಿ ಆನಂತರದಲ್ಲಿ ಅತಿಕ್ರಮಣ ಮಾಡಿದ ಬ್ರಿಟಿಷರು ಆ ಒಂದು ಸಮುದಾಯಕ್ಕೆ ಸಹಾಯವಾಗಲು ಹುಟ್ಟಿಹಾಕಿದ ಕಾಯಿದೆ "ವಕ್ಪ಼್‌ ಕಾಯಿದೆ". ಇದರ ಮೂಲಕ ಅವರಿಗೆ ಕೆಲವು ಸವಲತ್ತುಗಳನ್ನು ಮಾಡಿಕೊಡಲಾಗಿದೆ. ಅದನ್ನು ಬಳಸಿಕೊಂಡು ಅವರು ದುರುಪಯೋಗ ನಡೆಸುತ್ತಿದ್ದಾರೆ. ಇದೀಗ ಸನಾತನಿಗಳ ದೇಶ ಪಿಶಾಚಿಗಳ ವಶವಾಗುತ್ತಲಿದೆ. ಇವರಿಗೆಲ್ಲ ಮತ ಚಲಾಯಿಸಿ ಅಧಿಕಾರಕ್ಕೆ ತಂದ ಜನತೆ ಮೂರ್ಖರಾಗಿದ್ದಲ್ಲದೆ ತಮ್ಮ ಸ್ವಂತತೆಯನ್ನೇ ಕಳೆದುಕೊಳ್ಳು-ತ್ತಿದ್ದಾರೆ.

ಕನ್ನಡ ನಾಡಿನ ನಮ್ಮ ಮುಖ್ಯಮಂತ್ರಿಯನ್ನು ತೆಗೆದುಕೋಳ್ಳಿ… ಸಿದ್ದರಾಮಯ್ಯ: 2025-26 ನೇ ಸಾಲಿನ ಬಜೆಟ್‌ ಅನುದಾನಗಳನ್ನು ಸಮರ್ಪಕವಾಗಿ ಅಂಚಿದ್ದಾನೆಯೇ? ಒಂದು ಸಮುದಾಯಕ್ಕೆ ಓಲೈಕೆ ಮಾಡುವ ಬಜೆಟ್‌ ಮಂಡಿಸಿದ್ದಾನೆ. ಆದರೆ ಈ ಬಜೆಟ್‌ನಲ್ಲಿ ಮಂಡಿಸಿದ ಅನುದಾಗಳಿಗೆ ಎಲ್ಲಿಂದ ಹಣ ತರುತ್ತಾನೆ ಎಂಬುದೇ ಒಂದು ಯಕ್ಷ ಪ್ರಸ್ನೆಯಾಗಿದೆ? ಈತನೊಬ್ಬ ಸ್ವಾರ್ಥ ವೋಟಿನ ಮೂರ್ಖ ಶಿಖಾಮಣಿ. ಇತ್ತೀಚಿನ ಅಂಶವನ್ನೇ ತೆಗೆದುಕೊಳ್ಳಿ ಯಾರಾದರೂ ಅದನ್ನು ಧಿಕ್ಕರಿಸಿ ನ್ಯಾಯಾಲಯದಲ್ಲಿ ಭಾರತದ ಸಂವಿಧಾನದ ಆಶೋತ್ತರಗಳ ಮೇರೆಗೆ ವ್ಯಾಜ್ಯ ಹೂಡುವ ಅವಕಾಶವಿದೆ. ಸರ್ಕಾರದ ಖಜಾನೆಯ ಹಣವನ್ನು ತನ್ನ ಪಕ್ಷದ ಕಾರ್ಯಕರ್ತರಿಗೆ ಜಿಲ್ಲೆ, ತಾಲ್ಲೂಕು, ಪಂಚಾಯಿತಿ ಮಟ್ಟಗಳಲ್ಲಿ ರಚಿಸುವ ಇವರ ಗ್ಯೆರಂಟಿ ವಿತರಣೆ ಪರಿಶೀಲನಾ ಸಮಿತಿ ಸದಸ್ಯರಿಗೆ ನೌಕರರಿಗೆ ನೀಡುವ ಸಂಬಳದ ರೀತಿ ಹಂಚಲು ಕಾರ್ಯಕ್ರಮ ರೂಪಿಸಿದ್ದಾರೆ. ಇದಕ್ಕೆಲ್ಲ ಹಣಕಾಸಿನ ಮಂತ್ರಿಯೂ ಆಗಿರುವ ನಮ್ಮ ಮುಖ್ಯಮಂತ್ರಿ ಎಲ್ಲಿಂದ ಹಣ ಒದಗಿಸುತ್ತಾನೆ. ಈಗಾಗಲೇ ಯಾವಾಗಲೂ ತುಂಬಿರಲಾರದ ಬೊಕ್ಕಸಕ್ಕೆ ತುಂಬಲು ಹೇಗೆ ಎಲ್ಲಿ ಕನ್ನಹಾಕಿ ತರುತ್ತಾನೆ… ಹಣವನ್ನು? ಇದನ್ನೇ ಇರಬೇಕು "ಸಿದ್ದರಾಮಾರ್ಥಶಾಸ್ತ್ರ" ಎಂದು ಕರೆಯುವುದು.

ಈ ಅಸಮರ್ಪಕ ಸಮಸ್ಯೆಯ ವ್ಯತ್ಯಾಸಗಳಿಗೆ ಇರುವ ಒಂದೇ ಮಾರ್ಗ: "ಒಂದು ರಾಷ್ಟ್ರ ಒಂದು ಕಾನೂನು" ಇರಬೇಕು, ವಿಭಿನ್ನತೆಯ ಈಗಿನ ಭಾರತದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಮಾನರು, ಸರ್ವರೂ ಸಮಾನರೆಂಬುದನ್ನು ಎತ್ತಿ ಹಿಡಿಯಬೇಕಾಗಿದೆ.

ಟಿ. ದಿವಾಕರ

(ದಿವಾಕರ ತಿಮ್ಮಣ್ಣ)

ವಿಳಾಸ: ನಂ. 914-ಏಯ್ಚ್‌ಆಯ್‌ಜೀ, 5ನೇ ಮುಖ್ಯ ರಸ್ತೆ,

ಅರವಿಂದನಗರ, ಮೈಸೂರು-570023(570034) ಫೋ಼ನ್‌





Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ