Posts

Showing posts from 2025

ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು

  ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು   ಭಾರತ ದೇಶದ ಅತಿಮೂರ್ಖ ಸ್ವಾರ್ಥ ದೇಶದ್ರೋಹಿ ನಾಯಕರು ತಮಿಳರಲ್ಲದ ಯಾರೇ ಆಗಲಿ ಅವರು ಚೆನ್ನೈ ನಗರದ ಕೇಂದ್ರ ಸ್ಥಳ ' ಎಗ್ಮೋರ ' ದ ಸುತ್ತಮುತ್ತಲಿನ ಪಾದಚಾರಿ ರಸ್ತೆಗಳಲ್ಲಿ ಸುತ್ತಾಡಿದರೆ , ಅಥವಾ ಮೋರ್‌ ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಅವರಿಗೊಂದು ಅನುಭವವಾಗುತ್ತದೆ . ಅಲ್ಲಿನ ಒಳಗಿನ ಮತ್ತು ಹೊರಗಿನ ಪಾದಚಾರಿ ದಾರಿಗಳಲ್ಲಿ ವಿಧ್ಯುನ್ಮಾನ ವಸ್ತುಗಳನ್ನು ಮಾರುವ ಹುಡುಗರು ಅವರ ಗಿರಾಕಿಗಳ ಬಳಿ ನಾಲ್ಕೈದು ಭಾಷೆಗಳಲ್ಲಿ ಮಾತನಾಡುತ್ತಾ ವ್ಯವಹರಿಸುತ್ತಿರುತ್ತಾರೆ… ತಮಿಳು , ಹಿಂದಿ , ತೆಲುಗು , ಮಲಯಾಳಂ ಮತ್ತೆ ಕೊನೆಗೆ ಇಂಗ್ಲಿಶಿನಲ್ಲಿ ಅವರ ಸಂಭಾಷಣೆಯಿರುತ್ತದೆ . ಈ ನಾಲ್ಕೈದು ಭಾಷೆಗಳಲ್ಲಿ ನಿರರ‍್ಗಳವಾಗಿ ಮಾತನಾಡುವ ಈ ಬೀದಿ ಬದಿಯ ವ್ಯಾಪಾರಿ ಹುಡುಗರು ಅವರ ನಾಡಿನ ಸಂಕುಚಿತ ಮನೋಭಾವದ ಮುಖ್ಯಮಂತ್ರಿ ಸ್ಟಾಲಿನ್‌ ವಿರುದ್ಧ ಭಾಷೆಯ ವಿಷಯವಾಗಿ ಎದರು ಮಾತನಾಡುವುದಿಲ್ಲವೇಕೆ ? ಎಂಬುದೊಂದು ಪ್ರಶ್ನೆ ? ಅವರು ಕಲಿತಿರುವ ಆ ಭಾಷೆಗಳು ಅವರ ಹೊಟ್ಟೆ ಹೊರೆಯುತ್ತವೆ . ಅವುಗಳವರ ದಿನದ ದುಡಿಮೆಯ ಮಾರ‍್ಗವಾಗಿವೆ ?! ಇದನ್ನು ಚೆನ್ನಾಗಿ ಅರಿಯಬೇಕು ನಮ್ಮನ್ನು ಆಳುವ ಮಂದಿ… ಅಂದರೆ ಮುಖ್ಯಮಂತ್ರಿ ಮತ್ತವನ ಸಹಚರ ಮಂತ್ರಿಗಳು . ಈ ವಿಷಯವನ್ನು ಯಾಕೆ ಹೇಳುತ್ತಿದ್ದೀನೆಂದರೆ ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವ ಬಹುಭಾಷೆಗಳು ಸುತ್ತಮುತ್ತಲಿನ ಯಾವುದೇ ರಾಜ್ಯದಲ್ಲಿ ಬೇಗನೆ ತಮಗೊಂದು ...