Posts

Showing posts from July, 2017

ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು

ಗುರುವಂದನಾ ಕಾರ್ಯಕ್ರಮ ಮತ್ತು ನನ್ನ ಪ್ರೌಢಶಾಲೆಯ ದಿನಗಳು ನ ಮ್ಮೂರು , ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ… ಆಂದ್ರಪ್ರದೇಶದ ಮಡಕಶಿರ ತಾಲ್ಲೂಕಿನ ಗಡಿಯಲ್ಲಿ ಐದಾರು ಕಿಲೋಮೀಟರುಗಳ ಅಂತರದಲ್ಲಿದೆ . ಇಲ್ಲಿ ಇದೇ ಜೂನ್‌ 14, 2017 ರಂದು ಗುರುವಂದನಾ ಕಾರ್ಯಕ್ರಮವೊಂದು ನಡೆದಿದೆ . ನಮ್ಮೂರಿನ ಪ್ರೌಢಶಾಲೆ , " ಶ್ರೀಮಾರುತಿ ಗ್ರಾಮಾಂತರ ಪ್ರೌಢಶಾಲೆ ' ಯಲ್ಲಿ ಹತ್ತನೇ ತರಗತಿಯವರೆಗೆ ಕಲಿತ ಅಂದಿನ ಹುಡುಗರು ಇಂದಿನ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು . ನಾನೂ ಸಹ ಅದೇ ಶಾಲೆಯಲ್ಲಿ 10 ನೇ ತರಗತಿ ಮುಗಿಸಿದ್ದುದರಿಂದ ನನಗೂ ಸಹ ಕರೆಯೋಲೆಯಿತ್ತು . ಹಲವಾರು ಕೆಲಸಗಳ ತೊಡಕಿನಲ್ಲಿ ಸಿಲುಕಿದ್ದುದರಿಂದ ನಾನು ಬರಲಾಗುವುದಿಲ್ಲವೆಂದು ಪೋ಼ನಿನ ಮೂಲಕ ಮತ್ತೊಮ್ಮೆ ಜ್ಞಾಪಿಸಿದ ತುಮಕೂರಿನ ಕುಮಾರನಿಗೆ ತಿಳಿಯ ಹೇಳಿದೆ . ಒಟ್ಟಿನಲ್ಲಿ ಆ ಕಾರ್ಯಕ್ರಮಕ್ಕೆ ನಾನು ಹೋಗಲಿಲ್ಲ . ನಮ್ಮ ಹನುಮಂತರಾಯಣ್ಣ ( ಮೂರ್ತಿ ) ನ ಮಗ ಕಿರಣ ವಾಟ್ಸಪ್‌ನಲ್ಲಿ ಕಾರ್ಯಕ್ರಮದ ಪೋ಼ಟೋಗಳನ್ನು ಹಾಕಿದ್ದನು . ತುಮಕೂರಿನ ಶಿವಕುಮಾರ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಸಚಿತ್ರ ವರದಿಯನ್ನು ಚಿತ್ರ ತೆಗೆದು ಅವನ ವಾಟ್ಸಪ್‌ನಲ್ಲಿ ಪ್ರಕಟಿಸಿಬಿಟ್ಟಿದ್ದ . ಇದನ್ನು ಗಮನಿಸಿದ ಮೇಲೆ ನಾನು ಹೋಗದೆ ಇದ್ದುದಕ್ಕೆ ಸ್ವಲ್ಪಮಟ್ಟಿನ ಬೇಜಾರಾಯಿತು…ಕಾರ್ಯಕ್ರಮದಲ್ಲಿ ನನ್ನ ಪ್ರೀತಿಯ ಮಾವ ಮುಖ್ಯೋಪಾಧ್ಯಾಯರಾಗಿದ್ದ ಹೆಚ್‌ . ಎಂ . ಹನು