Posts

Showing posts from 2016

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ ಆ ವತ್ತು ಸಂಕ್ರಾಂತಿ ಹಬ್ಬ . ಊರಿನಲ್ಲಿ ಹಬ್ಬದ ಸಡಗರ . ಆಚರಣೆ ಸಂಜೆ ಹೊತ್ನಾಗ್ಮಾತ್ರ . ನನಗಾಗ ಸುಮಾರು ಹನ್ನೊಂದ್ಹನ್ನೆರಡು ವರ್ಷಗಳಿದ್ದಿರಬಹ್ದು . ಮಾಧ್ಯಮಿಕ ಏಳನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಹುಡುಗ . ಹಬ್ಬದ ರಜೆ ಇತ್ತು . ಇಡೀದಿನ ಸಡಗರ ... ಊರು ಹುಡುಗ್ರು ಜೊತೆ ಕುಣಿದಾಡಿ ಸಂಜೆ ವೇಳ್ಯಾಗೊ ಹೊತ್ಗೆ ದಣಿದುಹೋಗಿದ್ದವ ನಾನು ! ಆಟವಾಡಿ ಮನೆಗೆ ಬಂದಾಗ ಸುಮಾರು ನಾಲ್ಕೂವರೆಯಿಂದ ಐದು ಗಂಟೆ ಸಮಯವಿರಬಹುದು . ಮನೆಯೊಳಗೆ ಹಬ್ಬದ ತಯಾರಿ ನಡೆಯುತ್ತಿತ್ತು . ಕಣ್ಣುಗಳಿಗೆ ನಿದ್ದೆಯಾವರಿಸುತ್ತಿತ್ತು ... ಮನೆಯ ಹೊರಗಿನ ಜಗುಲಿಯ ಮೇಲೆ ಮುದುರಿ ಮಲಗುತ್ತಾ ನಾನು ಅಮ್ಮನಿಗೆ ಹೇಳಿದ ತಾಕೀತಿನ ಮಾತು , “ ರಾತ್ರಿ ಎಚ್ಚರವಾದಮೇಲೆ ನನಗೆ ಹಬ್ಬದೂಟಕ್ಕೆ ಚಿತ್ರಾನ್ನವಿರಿಸಿರಬೇಕು .” ನಮ್ಮ ಮನೆಯ ಪಡಸಾಲೆಯಲ್ಲಿ ತಳವೂರುತ್ತಿದ್ದ ಅಗಸರ ನರಸವ್ವ ನಾನು ಅಮ್ಮನಿಗೆ ಹೇಳಿದ ಈ ತಾಕೀತಿನ ಮಾತನ್ನು ಕೇಳಿಸಿಕೊಂಡಿದ್ದಳು ! ನನ್ನನ್ನು ಯಾರೋ ಎಚ್ಚರಿಸುತ್ತಿದ್ದರು , “ ದಿವಾಕರ ... ಏಯ್‌ ದಿವಾಕರ ಏಳೋ…ಚಿತ್ರಾನ್ನ ತಿನ್ನಲ್ಲವೇನೋ ದಿವಾಕರ ..?” ಚಿತ್ರಾನ್ನದ ಮಾತು ಕಿವಿಗೆ ಬೀಳುತ್ತಲೇ ನಾನು ದಡಕ್ಕನೆ ಎದ್ದು ಕುಳಿತಿದ್ದೆ . ನನ್ನನ್ನು ಏಳಿಸುತ್ತಿದ್ದುದು ಅಗಸರ ನರಸವ್ವ . ಬುಜವಿಡಿದು ಅಲ್ಲಾಡಿಸುತ್ತಿದ್ದಳು ನಿದ್ದೆಯ ಮಂಪರಿನಿಂದ ಹೊರಬರಲು . ಕಣ್ಣುಜ್ಜಿಕೊ

ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು

ಸಿದ್ದಿ… ಸಿದ್ದಮ್ಮ… ಸಿದ್ದವ್ವ ! ಕೆ ಲವು ನೆನಪುಗಳು ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷ ಹನ್ನೊಂದು ದಿನಗಳಿಗೆ ... ಕರ್ನಾಟಕದ ಮೂಲೆಯೊಂದರ ಹಳ್ಳಿಯಲ್ಲಿ… ಅದರ ಹೆಸರು ಹೊಸಹಳ್ಳಿ ... ಜಂಗಮರ ಹೊಸಹಳ್ಳಿ ಎಂದೂ ಕರೆಯುತ್ತಾರೆ . ನನಗೀಗ ಅತ್ತಿರತ್ತಿರ ಅರವತ್ನಾಲ್ಕು ವರ್ಷಗಳು . ಅಗಾಗ್ಗೆ ಹಲವು ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತಿರುತ್ತವೆ . ಅವುಗಳೊಮ್ಮೊಮ್ಮೆ ಕನಸುಗಳಾಗಿ ಕಾಡುತ್ತಿರುತ್ತವೆ . ಅವುಗಳನ್ನು ದುಸ್ವಪ್ನಗಳು ಎನ್ನಲೂ ಆಗುವುದಿಲ್ಲ . ಹಲವಾರು ಬಾರಿ ಬಿದ್ದ ಕನಸುಗಳಲ್ಲಿ ಹೆಚ್ಚು ನಮ್ಮೂರಿನಲ್ಲಿ ಬದುಕುತ್ತಿದ್ದ ಹೊಲೆಯರ ಸಿದ್ದವ್ವನ ಬಗ್ಗೆಯಾಗಿದ್ದವು . ನನ್ನಮ್ಮನ ಅಪ್ಪ - ಅಮ್ಮನಿಗೆ ಆಗಿನ ಕಾಲಕ್ಕೆ ಮೂರೇ ಮಕ್ಕಳು , ಒಂದು ಗಂಡು ಎರಡು ಹೆಣ್ಣು . ಅದರಲ್ಲಿ ನನ್ನಮ್ಮನೇ ಹಿರಿಮಗಳು . ಹತ್ಹನ್ನೊಂದು ವರ್ಷದವಳಿದ್ದಾಗ ತನ್ನಮ್ಮನನ್ನು ಕಳೆದುಕೊಂಡಿದ್ದವಳು . ಬೆನ್ನಿಗೆ ಬಿದ್ದಿದ್ದ ತಮ್ಮ - ತಂಗಿಯನ್ನು ಸಾಕುವ ಹೊಣೆ ಆಕೆಯದಾಗಿತ್ತು . ಅಷ್ಟರ ವೇಳೆಗೆ ನನ್ನಜ್ಜನ ... ಅಮ್ಮನ ಅಪ್ಪ ... ಅಣ್ಣತಮ್ಮಂದಿರೆಲ್ಲಾ ಬೇರೆಯಾಗಿದ್ದು ಬೇರೆಬೇರೆ ಮನೆ ಮಾಡಿ ಸಂಸಾರ ಹೂಡಿದ್ದುದರಿಂದ ಈ ಮೂರು ಮಕ್ಕಳು ತಾಯಿಯಿಲ್ಲದ ತಬ್ಬಲಿಯಾಗಿದ್ದರು ... ಹಲವಾರು ಜನರ ಬುದ್ದಿ ಮಾತಿನಿಂದಾಗಿ ನನ್ನ ಹೆಣ್ಣಜ್ಜ ಎರಡನೆ ಮದುವೆಯಾಗುವ ಸಾಹಸಕ್ಕೆ ಹೋಗಿರಲಿಲ್ಲ . ಮನೆಯ ಅಡಿಗೆ ,

ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?

18-10-1015 ರ ಮೈಸೂರಿನ " ಕನ್ನಡಿಗರ ಪ್ರಜಾನುಡಿ " ದಿನಪತ್ರಿಕೆಯ ' ಪ್ರಜಾ ಸಾಪ್ತಾಹಿಕ ' ಪುರವಣಿಯಲ್ಲಿ ಪ್ರಕಟವಾಗಿದ್ದ ಈ ಬರವಣಿಗೆಯನ್ನು ನನ್ನ ಬ್ಲಾಗೋದುಗರಿಗಾಗಿ ಸಣ್ಣ ಸೇರಿಕೆ ತಿದ್ದುಪಡಿಯೊಡನೆ ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. ಕನ್ನಡ ದೂರದರ್ಶಿ ವಾಹಿನಿಗಳ ಮಹಾ ( ಮೆಗಾ ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು !? ನನ್ನ ಪತ್ನಿ " ಕಲರ್ಸ್‌ ಕನ್ನಡ " ( ಹಳೆಯ " ಈಟಿವಿ ಕನ್ನಡ '') ಎಂಬ ಕನ್ನಡ ದೂರದರ್ಶಿ ವಾಹಿನಿಯಲ್ಲಿ ಬರುವ ಕೆಲವು ಧಾರಾವಾಹಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದುದರಿಂದ ಸಮಯ ಕಳೆಯಲೆಂದು ಜೊತೆಯಲ್ಲಿ ಕೂತು ನೋಡುವುದು ನನಗೂ ಸಹ ಅಭ್ಯಾಸವಾಗಿಬಿಟ್ಟಿತ್ತು . .! ಮುಖ್ಯವಾಗಿ ನೋಡುತ್ತಿದ್ದುದು ಕನ್ನಡದ ಮಹಾ ಬುದ್ಧಿವಂತ ನಿರ್ದೇಶಕನೆಂದು ನಾನು ನಂಬಿದ್ದ ಟಿ . ಎನ್‌ . ಸೀತಾರಾಮ್‌ ನಿರ್ದೇಶನದ ಧಾರಾವಾಹಿಗಳನ್ನು . ... " ಮಾಯಾಮೃಗ , ಜ್ವಾಲಾಮುಖಿ , ಮನ್ವಂತರ ...'' ಮೊದಮೊದಲಿನವು ನೋಡಲು ಬೇಸರವಾಗುತ್ತಿರಲಿಲ್ಲ . ಅವುಗಳು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಗತಿಯಲ್ಲಿ ಚಲಿಸಿ ಮುಕ್ತಾಯವಾದಂಥ ಧಾರಾವಾಹಿಗಳು . ಆದರೆ ಆತ ಆನಂತರ ನಿರ್ದೇಶಿಸಿದ " ಮುಕ್ತ ; ಮುಕ್ತ ಮುಕ್ತ ಮತ್ತು ಮಹಾಪರ್ವ '' ಗಳೆಂಬ ಜಾಳು ಜಾಳಾಗಿ ನೇಯ್ದ ಹಳೆಯ ಬಟ್ಟೆಗಳಂತಹ ದಾರಾವಾಹಿಗಳು . "