Posts

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ ಜೀ ವಶಾಸ್ತ್ರದಲ್ಲಿ ಪದವಿಪಡೆದ ಈ ಬ್ಲಾಗಿ ನಾಟಕ, ಪತ್ರಿಕೋಧ್ಯಮ ಎಂದು ತಲೆಕೆಡಿಸಿಕೊಂಡು ಓಡಾಡಿ ಕೊನೆಗೆ 1976 ರಲ್ಲಿ ಸೇರಿದ್ದು ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯಲ್ಲಿ ನಿರೀಕ್ಷರ ಕೆಲಸಕ್ಕೆ . ಇಲಾಖೆಗೆ ಸೇರಿದಂತೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ “ ಸಹಕಾರಿ ಆಢಳಿತ ತರಭೇತಿ ಸಂಸ್ಥೆ ‘ ಯಲ್ಲಿ ನೀಡಿದ ms-dos, wordstar ಮತ್ತೊಂದು lotus123 – graphic-presentation ಗಣಕೀಕರಣ ತರಭೇತು ಮಾತ್ರ . ಮತ್ತಿನ್ನಾವ ಅಧಿಕೃತ ಗಣಕ – ಕೌಶಲ್ಯ ತರಭೇತಿ ಪಡೆಯಲಿಲ್ಲ , ಕೇವಲ ಗಣಕದ ಮುಂದೆ ಕುಳಿತು ಪ್ರಯತ್ನ – ಅಪ್ರಯತ್ನಗಳ ಆಧಾರದಲ್ಲಿ windows ಮತ್ತು MS Office ತಂತ್ರಾಂಶದ ಒಳಹೊರಗನ್ನು ಕಲಿತದ್ದಾಯಿತು . ಹಾಗಾಗಿ ಅಂತರ್ಜಾಲ ಹುಡು/ಬೆದಕಾಟ , ವಿ – ಟಪಾಲು ಇತ್ಯಾದಿ … ಆದರೆ ವಿಷಯ ಅದಲ್ಲ ..?! ಇತ್ತೀಚೆಗೆ ಈ ಲೇಖಕ ಹಾಗೂ ಗಣಕ ಬಳಸುವ ಎಲ್ಲಾ ಕಂಪ್ಯೂಟರ್ ಗೀಕುಗಳಿಗೆ ಆದ ಒಂದು ದುಸ್ವಪ್ನವೆಂದರೆ ಮೈಕ್ರೊಸಾಫ್ಟ್ ಸಂಸ್ಥೆ windows-XP ನಿರ್ವಹಣಾ ತಂತ್ರಾಂಶ ಮತ್ತು MS Office 2003 ಇವುಗಳ ಸೇವಾಬೆಂಬಲವನ್ನು ಇದೇ ವರ್ಷದ ಏಪ್ರಿಲ್ 8 ರಿಂದ ಹಿಂಪಡೆದುಕೊಂಡದ್ದು ಮತ್ತು ಬಳಕೆದಾರರಿಗೆ ಆನಂತರದ ನಿರ್ವಹಣಾ ತಂತ್ರಾಂಶ windows-7 ಮತ್ತು -8 ಆಳವಡಿಸಿಕೊಳ್ಳಲು ಸೂಚಿಸಿದ್ದು ! “ ನುಡಿ ‘ ಕನ್ನಡ ತಂತ್ರಾಂಶವನ್ನು ಬಳಸುತ್ತಿದ್ದ ಲೇಖಕನಿಗೆ ಇದೊಂದು ಆಘಾತ ! ಈ ಕ