Posts

Showing posts from 2026

ಹೀಗೊಂದು ಭಾರತೀಯ ಒಪರೇಯ್ಟಿಂಗ್‌ ಸಿಸ್ಟಮ್ಸ಼್‌ ಍ಂಡ್‌ ಸಲ್ಯೂಷನ್ಸ಼್‌/BOSS

 ಹೀಗೊಂದು ಭಾರತೀಯ ಒಪರೇಯ್ಟಿಂಗ್‌ ಸಿಸ್ಟಮ್ಸ಼್‌ ಍ಂಡ್‌ ಸಲ್ಯೂಷನ್ಸ಼್‌/BOSS ಪ್ರಸ್ತಾಪ: ಹೀಗೊಂದು ಭಾರತ-ಸರ್ಕಾರದ ಗಣಕ ಯಂತ್ರ ತಂತ್ರಾಂಶವಿದೆ, ಹೆಸರು "ಭಾರತೀಯ ಒಪರೇಯ್ಟಿಂಗ್‌ ಸಿಸ್ಟಮ್ಜ಼್‌ ಍ಂಡ್‌ ಸಲ್ಯೂಷನ್ಸ಼್‌, ಸಂಕ್ಷಿಪ್ತವಾಗಿ ಬೊಸ್‌(BOSS)", ಇದನ್ನದರ -4ನೇ ಅವತರಣಿಕೆಯ ಕಾಲದಿಂದಲೂ ಅಂದರೆ 2013ನೇ ಇಸವಿಯಿಂದಲೂ ಈ ಬರಹಗಾರ ಉಪಯೋಗಿಸುತ್ತಿದ್ದಾನೆ. ಕಾರಣ ಅದೇ ವರ್ಷ ವಿಂಡೊವ್ಸ಼್‌ 98 ಅವತರಣಿಕೆಯ ತಂತ್ರಾಂಶ ಮತ್ತದರ ಪದ-ಸಂಸ್ಕರಣ(MSWord)"ಎಮೆಸ್ ವಾ೟ಡ್‌" ನವೀಕರಿಸಿದ ವಿಂಡೊವ್ಸ಼್‌ ಸಂಸ್ಥೆ ಹಳೆಯ ಪದ-ಸಂಸ್ಕರಣಕ್ಕಿದ್ದ ಬೆಂಬಲವನ್ನು ಹಿಂಪಡೆದಿತ್ತು. ಮಾರಾಟಗಾರನೊಬ್ಬ ಸಿದ್ಧಪಡಿಸಿ ಬರಹಗಾರನಿಗೆ ಮಾರಾಟಮಾಡಿದ್ದ  ವಿಂಡೊವ್ಸ಼್‌ ಮೇಜು-ಗಣಕಯಂತ್ರ ಯೆಪ್ರತಪ್ರಾ ಆಡುತ್ತಾ ಗಟ್ಟಿಯಾಗಿ ಸಿಕ್ಕಿಹಾಕಿಕೊಳ್ಳುತ್ತಾ ಸರಿಯಾಗಿ ಕಾರ‍್ಯನಿರ‍್ವಹಿಸದೆ ನಿಂತುಬಿಡುತ್ತಿತ್ತು… ಕೊನೆಗದು ಸತ್ತೇಹೋಯಿತು! ಮುಂದೇನು… ಪ್ರಸ್ನೆ??? ಗಣಕದಲ್ಲಿ ಹಾಕಿದ್ದ ಕನ್ನಡದ "ನುಡಿ" ತಂತ್ರಾಂಶ ಉಪಯೋಗಿಸಿ ಆಗೊಂದು ಈಗೊಂದು ಬರವಣಿಗೆ ಮಾಡುತ್ತಿದ್ದ ಈ ಬರಹಗಾರನಿಗೆ ನಂತರ ಸಿಕ್ಕಿದ್ದು ಈ "ಬೊಸ್‌-4"…ಅದೂ ಮಗಳ ಮೂಲಕ…ಆಕೆ ಬೆಂಗಳೂರಿನ ಭಾರತ ಸರ್ಕಾರದ C-DAC ಸಂಸ್ಥೆಯಲ್ಲಿ "ಎಂಬೆಡೆಡ್‌" ತಂತ್ರಾಶದ ಆರು ತಿಂಗಳ ಡಿಪ್ಲೊಮ ಮಾಡುತ್ತಿದ್ದಳು. "ಬೊಸ್‌-4"ರಲ್ಲಿ ಭಾರತೀಯ ವಿವಿಧ ಭಾಷೆಗಳ...

ಚಲಚಿತ್ರ ಸಂಗೀತ ನಿರ‍್ದೇಶಕ, ಅ ರ ರೆಹಮಾನ್‌ ರ ಬಿಬಿಸಿ ವಿವಾದಾತ್ಮಕ ಸಂದರ್ಶನ:

 ಅ ರ ರೆಹಮಾನ್‌, ಖ್ಯಾತ ಚಲಚ್ಚಿತ್ರ ಸಂಗೀತ ನಿರ್ದೇಶಕ, ಒಂದು ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನಾನಿಲ್ಲಿ  ಒಂದು ಚಿಕ್ಕ ನನ್ನದೇ ಅಭಿಪ್ರಾಯವನ್ನು ಇಲ್ಲಿಡಲು ಇಚ್ಛಿಸುತ್ತೇನೆ: ಚಲಚ್ಚಿತ್ರ /ಸಿನೆಮಾ ಮಾಧ್ಯಮ ಭಾರತದಲ್ಲಿ ಹುಟ್ಟಿದ್ದು ಹೀಗೆ! ಹಿಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮನರಂಜನೆ ಒದಗಿಸಲು ಇದ್ದದ್ದು ನಾಟಕ ಸಂಘಟನೆಗಳು ಪ್ರದರ್ಶಿಸುತ್ತದ್ದ ನಾಟಕಗಳು ಮಾತ್ರ. ಇಪ್ಪತ್ತನೇ ಶತಮಾನದ ಮೂರು/ನಾಲ್ಕನೇ ದಶಕದಲ್ಲಿ ಹೊಸದಾಗಿ ಹುಟ್ಟಿಕೊಂಡ ದೃಶ್ಯ ಮಾಧ್ಯಮ ಈ ಸೆಲ್ಯುಲೊಯಿಡ್‌/ಪ್ಲಾಸ್ಟಿಕ್‌ ಪಟ್ಟಿ ಚಿತ್ರಮಾಧ್ಯಮ. ಇದೀಗ ಅಂಕಿಯ/ಡಿಜಿಟಲ್‌ ಮಾಧ್ಯಮ. ಇರಲಿ ಬಿಡಿ. ಆಗಿನ ನಾಟಕಗಳಲ್ಲಿ ಹೆಚ್ಚಾಗಿ ಸಂಗೀತ ಮತ್ತು ಹಾಡುಗಳಿಗೆ ಪ್ರಾಮುಖ್ಯತೆ ಇದ್ದುದರಿಂದ ಅದನ್ನೇ ಯತಾವತ್ತಾಗಿ ಭಟ್ಟಿಯಿಳಿಸಿ ತದ್ರೂಪದಲ್ಲಿ ಸಂಗೀತ ಮತ್ತು ಹಾಡುಗಳನ್ನು ಹೊಸೆದು ಸಿನೆಮಾಗಳನ್ನು ತಯಾರಿಸಲು ಪ್ರಾರಂಭಿಸಿದರು. ನಾಟಕಗಳಲ್ಲಿ ಸಾಧ್ಯವಿಲ್ಲದ ವಾಸ್ತವ ದೃಶ್ಯಗಳನ್ನು ಈ ಚಿತ್ರ ಪಟ್ಟಿಗಳಲ್ಲಿ ಅಳವಡಿಸಿದರು. ಇದು ಸಾರ್ವಜನಿಕರಲ್ಲಿ ಕುತೂಹಲಭರಿತ ಮನರಂಜನೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿತು. ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸಲು ಪ್ರಾರಂಭಿಸಿದ್ದರಿಂದ ಈ ಸಿನೆಮಾ ನೋಡುಗರಿಗೆ ಹೆಚ್ಚು ಆಕರ್ಷಣೀಯವಾತು. ಅದು ಮತ್ತಷ್ಟು ಮುಂದುವರೆದು ಅರೆಬೆತ್ತಲೆಯಲ್ಲಿ ಸ್ತ್ರೀಯರನ್ನು ತೆರೆದಿಡುತ್ತಿದ್ದಂತೆ ಮತ್ತಷ್ಟು ಆಕರ್ಷಣೀಯವಾಯಿತು, ಅ...