"ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ…
"ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ… ಬಹು ಭಾಷಾ ನಟ ಕಮಲ ಹಾಸನ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಕನ್ನಡವು ತಮಿಳಿನ ಮರಿಭಾಷೆಯೆಂದು ರಾಜಾರೋಷವಾಗಿ ಹೇಳಿ ಕೆಲವರಿಂದ ಅಂದರೆ ತಮಿಳು ಪ್ರೇಮಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರಿದು ಕನ್ನಡಿಗರ ಆಕ್ರೋಶ ಕೆರಳಿಸಿತು. ಸಮಯ ದಿನ ಗೊತ್ತಿಲ್ಲ … ಬೆಂಗಳೂರಿನಲ್ಲಿ ಅವರ ಸಿನೆಮ “Thug Life/ಥಗ್ ಲೈಫ್/ತಗ್ ಲೈಪ್" ಬಿಡುಗಡೆಗಾಗಿ ಅದರ ಪ್ರಚಾರದ ಸಮಯದಲ್ಲಿ ಈ ಹೇಳಿಕೆ ನೀಡಿದ್ದರು. ಆ ಸಮಾರಂಭದಲ್ಲಿ ಕನ್ನಡದ ನಟ ಶ್ರೀಯತ ಶಿವರಾಜಕುಮಾರ‍್ರವರೂ ಇದ್ದರು. ಕಾರಣ ಆ ಚಲಚಿತ್ರದಲ್ಲಿ ಅವರೂ ಸಹ ನಟಿಸಿರುತ್ತಾರೆ. ಕನ್ನಡದಲ್ಲಿಯೇ ಹೇಳಬೇಕೆಂದರೆ ಕಮಲ ಹಾಸನ್ ರವರ ಭಾಷಣದ ಸಾರಾಂಶ "ಕನ್ನಡ ಭಾಷೆಯ ತಂದೆ ತಮಿಳು ಭಾಷೆ, ಕನ್ನಡದ ಅಪ್ಪ ತಮಿಳು" ಎಂಬುದೇ ಆಗಿತ್ತು. ಈ ಮಾತು ಕನ್ನಡಿಗರಿಗೆ ಎಲ್ಲಿಲ್ಲದ ಕೋಪ ತರಿಸಿದೆ. ಇದೀಗ ಕನ್ನಡಿಗರು ಕಮಲ ಹಾಸನ್ ಅವರಿಂದ ಈ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಅವರ ಚಲಚಿತ್ರ “Thug Life /ಥಗ್ ಲೈಫ್/ತಗ್ ಲೈಪ್" ಅನ್ನು ಕರ‍್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಇಲ್ಲ!.. ಕನ್ನಡ ಹಿತರಕ್ಷಣಾ ಸಮಿತಿಯಿಂದ ಆಧ್ಯಾದೇಶವಾಗಿದೆ. ಈ ಕ್ರಮಕ್ಕೆ ಕನ್ನಡಿಗರು ಒಕ್ಕೊರಲಿನ ದ್ವನಿಗೂಡಿಸಿದ್ದಾರೆ. ಶ್ರೀ...