Posts

Showing posts from May, 2021

ಕನ್ನಡಕ್ಕೇಕೆ ಬೇಕು ಭಿನ್ನ ಶಬ್ದ ಸೂಚಕ ಚಿಹ್ನೆಗಳು?

Image
                                                           ಕನ್ನಡಕ್ಕೇಕೆ ಬೇಕು ಭಿನ್ನ ಶಬ್ದ ಸೂಚಕ ಚಿಹ್ನೆಗಳು ? ಒಂದು ಅವಲೋಕನ ಕನ್ನಡ ಕಲಿತಿರುವ ಅಥವಾ ಕನ್ನಡ ಪಂಡಿತರ‍್ಯಾರಾದರೂ ಕನ್ನಡ ವರ್ಣಮಾಲೆಯಲ್ಲಿ ಈ ಕನ್ನಡ " ಆ್ಯ " ಕಾಗುಣಿತವನ್ನು ತೋರಿಸಿಕೊಡುತ್ತಾರೆಯೆ… ? ಇದನ್ನು " ಯಾ " ಶಬ್ದಕ್ಕೆ ಸಮನಾಗಿ ಬಳಸಲಾಗಿದೆ… ವರ್ಣಮಾಲೆಯಲ್ಲಿ ಎಲ್ಲಿಯೂ ಈ ಕಾಗುಣಿತ ದೊರೆಯುವುದಿಲ್ಲ . ಇಂಗ್ಲೀಶಿನ ಪದಗಳಾದ Action, Anchor ಗಳನ್ನು ಕನ್ನಡ ಲಿಪ್ಯಂತರೀಕರಣ - ಗೊಳಿಸುವಲ್ಲಿ (transliteration) ಇಲ್ಲಿ ತಿಳಿಸಲಾದ ಸ್ವರಕ್ಕೆ ವ್ಯಂಜನವನ್ನು ಹಾಕುವ ಲಬ್ಯವಿಲ್ಲದ ಕಾಗುಣಿತವನ್ನು ನಾವು ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ . ಪತ್ರಿಕೆಗಳಿಗೆ ಮತ್ತು ಟಿವಿ ಮಾಧ್ಯಮಗಳಿಗೆ ಯಾರು ಕಲಿಸಿಕೊಟ್ಟರು ಈ ಕಾಗುಣಿತವನ್ನು ? ಅದೊಂದು ಪ್ರಶ್ನಾರ್ಹ ವಿಷಯ . ಬಹುತೇಕ ಕನ್ನಡವನ್ನೇ ಹೋಲುವ ತೆಲುಗು ಲಿಪಿಯನ್ನು ಬಳಸುವ ತೆಲುಗರು ಈ ರೀತಿಯ ಕಾಗುಣಿತವನ್ನು ಬಳಸುವುದಿಲ್ಲ . ಅವರು ಉದಾಹರಿತ ಪದಗಳ ತೆಲುಗೀಕರಣದಲ್ಲಿ " ಯಾಕ್ಷನ್‌ ", " ಯಾಂಕರ್‌ " ಎಂದು ಬರೆಯುತ್ತಾರೆ . ಆದರೆ ಕನ್ನಡದಲ್ಲೇಕೆ “ಆ್ಯಕ್ಷನ್‌” “ಆ್ಯಂಕರ್‌” ಎಂದು ಬರೆಯುತ್ತಾರೆ ? ತಿಳಿಯುವುದಿಲ್ಲ . ಉದಾಹರಿತ ಇಂಗ್ಲೀಶ್‌ ಪದಗಳಲ್ಲಿನ A ಅಕ್ಷರದ ಉಚ್ಛಾರಣೆಯ ಶಬ್ದ ಸಂಕೇತ “ æ”, a ಮತ್ತು e ಗಳನ್ನು ಕೂಡಿಸಿ

ಪ್ರವಾಸ ಕಥನ: ಜೀಪಿನಲ್ಲಿ ಲಡಖ್‌ ಪ್ರವಾಸ

Image
                                         ಪ್ರವಾಸ ಕಥನ                                ಜೀಪಿನಲ್ಲಿ ಲಡಖ್‌ ಪ್ರವಾಸ                                   ಬರಹ: ದಿವಾಕರ ತಿಮ್ಮಣ್ಣ                                               ಚಿತ್ರಗಳು: ಡಾ|| ಸಿಂಚನ ದಿವಾಕರ , ಚಿನ್ಮಯಿ ದಿವಾಕರ                                 ವರ್ಷ: 2011(ಜೂನ್‌ 03ರಿಂದ 12ರವರೆಗೆ)   ಪ್ರಸ್ತಾಪ:  ಯಶಪಾಲ ಮಾರ್ಚ್‌ ತಿಂಗಳಿನಿಂದಲೇ ನೊಯಿಡಾದಿಂದ ದೂರವಾಣಿ ಮೂಲಕ ನಮ್ಮ ಕುಟುಂಬದ ಸದಸ್ಯರೊಂದಿಗೆ ವಿಷಯ ಪ್ರಸ್ತಾಪಿಸಿ ಸತಾಯಿಸುತ್ತಿದ್ದ… ಜೂನ್‌ ತಿಂಗಳಿನಲ್ಲಿ ಮನಾಲಿಯ ಹತ್ತಿರದ ರೊಹ್ತಾಂಗ್‌ ಪಾಸ್‌ ತೆರೆಯುತ್ತದೆಂದು ತಿಳಿಸಿ ಲಡಖ್‌ನ ಲೆಹ್‌ಗೆ ದೆಹಲಿಯಿಂದ ಜೀಪಿನಲ್ಲಿ ಕುಲ್ಲು-ಮನಾಲಿ ಮಾರ್ಗವಾಗಿ ಪ್ರವಾಸ ಹೋಗೋಣವೆನ್ನುತ್ತಿದ್ದ. ಆ ವೇಳೆಗೆ 10 ದಿನಗಳ ರಜೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರು-ದೆಹಲಿ-ಬೆಂಗಳೂರು ಮಧ್ಯೆ ಮರುಪ್ರಯಾಣದ ಅನುವು ಮಾಡಿ ವಿಮಾನದ ಟಿಕೆಟ್‌ ಖರೀದಿಸಲು ಯೋಜಿಸಿ ಸಿದ್ಧವಾವಾಗಿರಲು ಸೂಚನೆ ನೀಡಿದ್ದ. ನಾವು ಏಪ್ರಿಲ್‌ ತಿಂಗಳಿನಲ್ಲಿ ವಿಮಾನಗಳ ಸೀಟು ಲಭ್ಯತೆ ನೋಡಿ ಜೂನ್‌ 03 ರಿಂದ 12ರವರೆಗೆ ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನಿಂದ ಐದು ಜನ ಹೊರಡುವುದೆಂದು ಟಿಕೆಟುಗಳನ್ನು ಕಾಯ್ದಿರಿಸಿದೆವು… ನಾನು ನನ್ನ ಪತ್ನಿ ವಸಂತ, ಮಕ್ಕಳಾದ ಡಾ|| ಸಿಂಚನ ಡಿ., ಚಿನ್ಮಯಿ ಡಿ., ಮತ್ತು ನನ್ನ ಷಡ್ಡಕನ ಮಗಳಾದ ಪುಷ್ಪಲತ