Posts

Showing posts from 2021

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

Image
 ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ ಪ್ರವಾಸವೆಂದರೆ ಏನೋ ಒಂದು ಹೊಸ ಪ್ರಪಂಚಕ್ಕೆ ಕಾಲಿಟ್ಟು ಹೊಸದನ್ನು ನೋಡುತ್ತಾ ಅನುಭವಿಸುವ ತವಕದ ಮನೋಲ್ಲಾಸದಾಯಕ ಸಮಯದ ಎದುರುನೋಟ! ನಮ್ಮ ಭಾರತದಲ್ಲಿಯೇ ತೆಗೆದುಕೊಳ್ಳಿ… ದಕ್ಷಿಣದಲ್ಲಿ ತಮಿಳುನಾಡು, ಕೇರಳ, ಕರ್ನಾಟಕದಲ್ಲಿನ ಮುಖ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಸಾಹಸಪ್ರದ, ಆನ್ವೇಷಣಾ ಪ್ರವಾಸಗಳ ಅನುಭವ ಮತ್ತು ಉತ್ತರ ಭಾರತದ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಮಾಡುವ ಪ್ರವಾಸದ ಅನುಭವಗಳನ್ನು ವರ್ಣಿಸಲಾಸಾಧ್ಯ!  ಮನಸ್ಸನ್ನು ಏನೋ ಒಂದು, ಊಹಿಸಲೂ ಇರದ ಹೊಸ ಪ್ರಪಂಚ, ಹೊಸ ವಾತಾವರಣದಿಂದ ಕೂಡಿದ ಉಲ್ಲಾಸದಾಯಕ ಪರಿಭ್ರಮಣೆಗೆ ಒಯ್ಯಲ್ಪಡುತ್ತದೆ. ಸರಿ, ಈಗ ಅಂತಹುದೊಂದು ಪ್ರವಾಸದ ಅನುಭವವನ್ನು ನಾನಿಲ್ಲಿ ತೆರೆದಿಡುತ್ತಿದ್ದೇನೆ… ಹತ್ತಿರ‍್ಹತ್ತಿರ ಎರಡೂಮುಕ್ಕಾಲು ವರ್ಷಗಳ ಹಿಂದಿನ ನನ್ನ ಪ್ರವಾಸವನ್ನು… ಅಮೆರಿಕಾ ಪ್ರವಾಸ… ಅದರಲ್ಲೂ ಕ್ಯಾಲಿಫ಼ೋರ್ನಿಯಾದ ಲಾಸ್‌ ಎಂಜಲಿಸ್‌, ನೆವಾಡ ರಾಜ್ಯದ ಲಾಸ್‌ ವೆಗಾಸ್‌, ಆರಿಜೋ಼ನಾದ ಗ್ರ್ಯಾಂಡ್‌ಕ್ಯಾನಿಯನ್‌ ಮತ್ತು ಯೂಟ ರಾಜ್ಯದ ಸಾಲ್ಟ್‌ ಲೇಕ್‌ ಸಿಟಿಯಿಂದ ಹಿಡಿದು ವೈಯೋಮಿಂಗ್‌ ರಾಜ್ಯದ ಟಿಟಾನ್‌ ಕೌಂಟಿಯ "ಟಿಟಾನ್‌ ವಿಲೇಜ್‌" ವರೆಗಿನ ಪಯಣ… ಮರೆಯಲಾಗದ ಪ್ರಯಾಣದ ಅನುಭವ.  ※ಟಿಪ್ಪಣಿ: ಈ ಪ್ರವಾಸದ ಬರಹದಲ್ಲಿ ನಾನು ಉಲ್ಲೇಖಿಸಿರುವ ಸಮಯಗಳನ್ನು "ಗೂಗಲ್‌ ಟೈಮ್ಲೈನ್‌" ನಲ್ಲಿ ತೋರಿಸಿರುವಂತೆ ಮತ್ತು ಸಿಂಚನ ತೆಗೆದ ಛಾಯಾಚಿತ್ರ

ಕನ್ನಡಕ್ಕೇಕೆ ಬೇಕು ಭಿನ್ನ ಶಬ್ದ ಸೂಚಕ ಚಿಹ್ನೆಗಳು?

Image
                                                           ಕನ್ನಡಕ್ಕೇಕೆ ಬೇಕು ಭಿನ್ನ ಶಬ್ದ ಸೂಚಕ ಚಿಹ್ನೆಗಳು ? ಒಂದು ಅವಲೋಕನ ಕನ್ನಡ ಕಲಿತಿರುವ ಅಥವಾ ಕನ್ನಡ ಪಂಡಿತರ‍್ಯಾರಾದರೂ ಕನ್ನಡ ವರ್ಣಮಾಲೆಯಲ್ಲಿ ಈ ಕನ್ನಡ " ಆ್ಯ " ಕಾಗುಣಿತವನ್ನು ತೋರಿಸಿಕೊಡುತ್ತಾರೆಯೆ… ? ಇದನ್ನು " ಯಾ " ಶಬ್ದಕ್ಕೆ ಸಮನಾಗಿ ಬಳಸಲಾಗಿದೆ… ವರ್ಣಮಾಲೆಯಲ್ಲಿ ಎಲ್ಲಿಯೂ ಈ ಕಾಗುಣಿತ ದೊರೆಯುವುದಿಲ್ಲ . ಇಂಗ್ಲೀಶಿನ ಪದಗಳಾದ Action, Anchor ಗಳನ್ನು ಕನ್ನಡ ಲಿಪ್ಯಂತರೀಕರಣ - ಗೊಳಿಸುವಲ್ಲಿ (transliteration) ಇಲ್ಲಿ ತಿಳಿಸಲಾದ ಸ್ವರಕ್ಕೆ ವ್ಯಂಜನವನ್ನು ಹಾಕುವ ಲಬ್ಯವಿಲ್ಲದ ಕಾಗುಣಿತವನ್ನು ನಾವು ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ . ಪತ್ರಿಕೆಗಳಿಗೆ ಮತ್ತು ಟಿವಿ ಮಾಧ್ಯಮಗಳಿಗೆ ಯಾರು ಕಲಿಸಿಕೊಟ್ಟರು ಈ ಕಾಗುಣಿತವನ್ನು ? ಅದೊಂದು ಪ್ರಶ್ನಾರ್ಹ ವಿಷಯ . ಬಹುತೇಕ ಕನ್ನಡವನ್ನೇ ಹೋಲುವ ತೆಲುಗು ಲಿಪಿಯನ್ನು ಬಳಸುವ ತೆಲುಗರು ಈ ರೀತಿಯ ಕಾಗುಣಿತವನ್ನು ಬಳಸುವುದಿಲ್ಲ . ಅವರು ಉದಾಹರಿತ ಪದಗಳ ತೆಲುಗೀಕರಣದಲ್ಲಿ " ಯಾಕ್ಷನ್‌ ", " ಯಾಂಕರ್‌ " ಎಂದು ಬರೆಯುತ್ತಾರೆ . ಆದರೆ ಕನ್ನಡದಲ್ಲೇಕೆ “ಆ್ಯಕ್ಷನ್‌” “ಆ್ಯಂಕರ್‌” ಎಂದು ಬರೆಯುತ್ತಾರೆ ? ತಿಳಿಯುವುದಿಲ್ಲ . ಉದಾಹರಿತ ಇಂಗ್ಲೀಶ್‌ ಪದಗಳಲ್ಲಿನ A ಅಕ್ಷರದ ಉಚ್ಛಾರಣೆಯ ಶಬ್ದ ಸಂಕೇತ “ æ”, a ಮತ್ತು e ಗಳನ್ನು ಕೂಡಿಸಿ