Posts

Showing posts from August, 2017

ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತದಲ್ಲಿ ಇನ್ನೂ ಜೀವಂತ?! British Colonial Slavery still exists in Independent India?!

ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತ ದಲ್ಲಿ ಇನ್ನೂ ಜೀವಂತ ?! British Colonial Slavery stillexists in Independent India?! British Colonial Slavery still exists in Independent India?! ಈ ಬರಹ ಕ್ರಿಕೆಟ್‌ ಪ್ರಿಯರಿಗೆ ಅಪ್ರಿಯವಾದೀತು . ನಾನೇನು ಮಾಡಲಿ ಅವರವರ ತೆವಲುಗಳು ಆಭಿಪ್ರಾಯಗಳು ಅವರವರಿಗೆ . ನನ್ನ ತೆವಲು ಮತ್ತು ಅಭಿಪ್ರಾಯ ನನಗೆ . ಇತರರೆಲ್ಲರ ಅಭಿಪ್ರಾಯಗಳೆಲ್ಲಾ ... ಪ್ರಪಂಚದ ಅಭಿಪ್ರಾಯಗಳಾಗುವುದಿಲ್ಲ . ಬಿಜೆಪಿಯವರ ಅಭಿಪ್ರಾಯ ಗಾಗ್ರೆಸ್ಸಿಗರಿಗೆ ಇಷ್ಟವಾಗುದಿಲ್ಲ ... ಕಾಂಗ್ರೆಸ್ಸಿಗರ ಅಭಿಪ್ರಾಯಗಳು ಬಿಜೆಪಿಯವರಿಗೆ ಇಷ್ಟವಾಗುವುದಿಲ್ಲ . ಒಟ್ಟಿನಲ್ಲಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಸಾಮಾನ್ಯರ ಮೇಲೆ ಹೇರಲಿಷ್ಟಪಡುತ್ತಾರೆ . ಹಾಗೇ ಇದೂ ಕೂಡ ... ಅಷ್ಟೇಯ .?! ಒಂ ದು ಕಟುಸತ್ಯ ಹೇಳಿದರೆ ಯಾರಿಗಾದರೂ ಕೋಪ ಬರುವುದು ಸಹಜ .. ಮತ್ತು ಅಂಥ ಸತ್ಯ ಹೇಳಲು ಈ ದೇಶದಲ್ಲಿ ಎಲ್ಲರಿಗೂ ಹಕ್ಕಿದೆ ... ಜೊತೆಗೆ ಸ್ವಾತಂತ್ರ್ಯವೂ ಇದೆ . ಎಷ್ಟು ಸ್ವಾತಂತ್ರ್ಯ ..? ಭಾರತದ ಸೈನಿಕರು ಪಾಕಿಸ್ತಾನ ಅಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿನ ಭಯೋತ್ಪಾದನಾ ಗುಂಪುಗಳಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನಿ ಸೈನಿಕರು ಮತ್ತವರ ತಾಣಗಳನ್ನು ಸದೆಬಡಿದು ಬಂದರೆ… . ಈ ರಾಗಾ ಎಂಬ ರಾಹುಲ್‌ ಗಾಂಧಿಯು ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿ ಯವರನ್ನು " ಖೂನ್‌ ಕಿ

ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ

                                                  ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ                                                        ಊರಿಂದಲ/ಊರಹಿಂದಲ ಮಲ್ಲೇಗೌಡ ಕುಟುಂಬ ಶ್ರೀ ಎಂ . ಚಂದ್ರಶೇಖರಯ್ಯ , ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಹೊಸಹಳ್ಳಿಯ ಊರಿಂದಲ ( ಊರಹಿಂದಲ ) ಮಲ್ಲೇಗೌಡರ ಹಿರಿಯ ಮಗ , ಅವರ ತಾತನ ಹೆಸರೂ ಮಲ್ಲೇಗೌಡ ... ಎಂದೇ . ' ಊರಹಿಂದಲ ' ಎಂಬುದಕ್ಕೆ ಕಾರಣ ..! ಊರಿನ ದೊಡ್ಡಮನೆಯ ಮುಂಬಾಗಿಲು ಪೂರ್ವಕ್ಕೆ ಇದ್ದು ಆಮನೆಯ ಹಿಂಭಾಗಕ್ಕೆ ಇದ್ದುದರಿಂದಲೋ ಅಥವಾ ಊರಿನಲ್ಲಿನ ದೇವಸ್ಥಾನಗಳು ಆ ಮನೆಯ ಪೂರ್ವಕ್ಕೆ ಇದ್ದುದರಿಂದಲೋ ಏನೋ ಇರಬೇಕು , ಇಲ್ಲವೆ ಅವರ ಮನೆ ಪಶ್ಚಿಮದಲ್ಲಿ ಒಂಟಿಯಾಗಿದ್ದುದರಿಂದಲೋ ಏನೋ ಇರಬೇಕು ..? ಒಟ್ಟಿನಲ್ಲಿ ' ಊರಿಂದಲ / ಊರಹಿಂದಲ ' ಎಂಬ ವಿಶೇಷಣ ಅವರ ಕುಟುಂಬಕ್ಕೆ ಅಂಟಿಕೊಂಡಿತ್ತು . ಮನೆಯಲ್ಲಿ ಬೆಳ್ಳಿಬಂಗಾರ ದವಸ - ಧಾನ್ಯ ತುಂಬಿ ತುಳುಕಾಡುತ್ತಿದ್ದುದೆಂದೇ ಹೇಳಬೇಕು . ಆ ಮಟ್ಟಿಗೆ ಅವರು ನಮ್ಮೂರಿನಲ್ಲಿ ಶ್ರೀಮಂತರೇ ಆಗಿದ್ದರು , ಮನೆಯ ಮುಂದೊಂದು ಬ್ರಿಟಿಷರ ಕಾಲದ ಕಪ್ಪುಕಾರೊಂದು ನಿಂತಿರುತ್ತಿತ್ತು ... ಬಾಕಿ ಮಂದಿ ನೀರಾವರಿ ಜಮೀನುಗಳಲ್ಲಿ ಕಪಿಲೆ ಹೊಡೆದು ಬಾವಿಗಳಿಂದ ನೀರೆತ್ತುತ್ತಿದ್ದರೆ ಇವರ ನೀರಾವರಿ ಬಾವಿಗೆ ಅಳವಡಿಸಿದ್ದ ಜರ್ಮನಿಯಲ್ಲಿ ತಯಾರಾಗಿದ್ದ