Posts

Showing posts from 2023

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

Image
ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ                                           18 ಗಂಟೆಗಳ  ಓಡಾಟ   ಟಿಟಾನ್‌ ವಿಲೇಜ್‌, ಟಿಟಾನ್‌ ಕೌಂಟಿ, ವೈಯೊಮಿಂಗ್‌, ಆಗಸ್ಟ್‌ 28, 2018: ಸ್ನೇಕ್‌ ರಿವರ್‌ ಲಾಜ್‌ ನ ಮುಂಭಾಗದಲ್ಲಿ ಸ್ನೇಕ್‌ ರಿವರ್‌ ಲಾಜ್‌ ನ ದ್ವಾರದಲ್ಲಿ ಚಿನ್ಮಯಿ ಬೆ ಳಗ್ಗೆ ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ನಮ್ಮ ಲಗೇಜನ್ನು ಜೋಡಿಸಿಟ್ಟು ಸ್ನೇಕ್‌ ರಿವರ್‌ ಲಾಜ್‌ನ  ಊಟತಿಂಡಿ ಮಾಡುವ ಸ್ಥಳಕ್ಕೆ ಹೋಗಿ ನಮಗೆ ನೀಡುವ ಬೆಳಗಿನ ಸೌಜನ್ಯದ (Complimentary) ಉಪಾಹಾರ ತಿಂದು ಮುಗಿಸಿ ಲಗೇಜುಗಳನ್ನು ಹೊರಗೆ ತಂದಿಟ್ಟುಕೊಂಡೆವು. ಚಿನ್ಮಯಿ, ವಾಹನ ನಿಲುಗಡೆ ಸ್ಥಳಕ್ಕೆ ಹೋಗಿ ಕಾರನ್ನು ತಂದು ಲಾಜ್‌ ಮುಂದೆ ನಿಲ್ಲಿಸಿದಳು. ಕಾರಿನ ಡಿಕ್ಕಿಯಲ್ಲಿ ಸರಿಯಾಗಿ ಜೋಡಿಸಿ ತುಂಬಿ ಸ್ನೇಕ್‌ ರಿವರ್‌ ಲಾಜ್‌ಗೆ ವಿಧಾಯ ಹೇಳಿ ಹೊರಡುವ ವೇಳೆಗೆ 10.25 ಗಂಟೆಯಾಗಿತ್ತು. ವಿಲೇಜ್‌ ಸಂಪರ್ಕ ರಸ್ತೆಯಿಂದ ಮೂಸ್‌-ವಿಲ್ಸನ್‌ ರಸ್ತೆಗೆ ಬರುವ ವೇಳೆಗೆ ಕಾರಿನ ಡ್ಯಾಶ್ಬೋರ್ಡಿನಲ್ಲಿ ಕಾರಿನ ಚಕ್ರಗಳ ಗಾಳಿ ಒತ್ತಡ-ಹೊಂದಾಣಿಕೆ ತೋರಿಸುವ ಮೀಟರು ವ್ಯತ್ಯಾಸ ತೋರಿಸುತ್ತಿತ್ತು. ಅದನ್ನು ಸರಿಪಡಿಸಲು ಗಾಳಿ ತುಂಬಿಸಿ ವ್ಯತ್ಯಾಸ ಸರಿಪಡಿಸಬೇಕಾಗಿತ್ತು. ಚಿನ್ಮಯಿ, ಹತ್ತಿರದಲ್ಲಿಯೇ ಇದ್ದ ವಿಲ್ಸನ್‌ ಪಟ್ಟಣದ ಕಡೆಗೆ ಕಾರನ್ನು ಓಡಿಸಿದಳು. ವಿಲ್ಸನ್‌ನಲ್ಲಿ ಒಂದು ಆಟೊ ಪರಿಕರಗಳ ಅಂಗಡಿ ಹುಡುಕಿ ನಮಗೆ ಬೇಕಾಕಿದ್ದ ಗಾಳಿ ಪ್ರೆಶರ್‌ ಅಳೆಯುವ