Posts

Showing posts from June, 2021

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

Image
 ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ ಪ್ರವಾಸವೆಂದರೆ ಏನೋ ಒಂದು ಹೊಸ ಪ್ರಪಂಚಕ್ಕೆ ಕಾಲಿಟ್ಟು ಹೊಸದನ್ನು ನೋಡುತ್ತಾ ಅನುಭವಿಸುವ ತವಕದ ಮನೋಲ್ಲಾಸದಾಯಕ ಸಮಯದ ಎದುರುನೋಟ! ನಮ್ಮ ಭಾರತದಲ್ಲಿಯೇ ತೆಗೆದುಕೊಳ್ಳಿ… ದಕ್ಷಿಣದಲ್ಲಿ ತಮಿಳುನಾಡು, ಕೇರಳ, ಕರ್ನಾಟಕದಲ್ಲಿನ ಮುಖ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಸಾಹಸಪ್ರದ, ಆನ್ವೇಷಣಾ ಪ್ರವಾಸಗಳ ಅನುಭವ ಮತ್ತು ಉತ್ತರ ಭಾರತದ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಮಾಡುವ ಪ್ರವಾಸದ ಅನುಭವಗಳನ್ನು ವರ್ಣಿಸಲಾಸಾಧ್ಯ!  ಮನಸ್ಸನ್ನು ಏನೋ ಒಂದು, ಊಹಿಸಲೂ ಇರದ ಹೊಸ ಪ್ರಪಂಚ, ಹೊಸ ವಾತಾವರಣದಿಂದ ಕೂಡಿದ ಉಲ್ಲಾಸದಾಯಕ ಪರಿಭ್ರಮಣೆಗೆ ಒಯ್ಯಲ್ಪಡುತ್ತದೆ. ಸರಿ, ಈಗ ಅಂತಹುದೊಂದು ಪ್ರವಾಸದ ಅನುಭವವನ್ನು ನಾನಿಲ್ಲಿ ತೆರೆದಿಡುತ್ತಿದ್ದೇನೆ… ಹತ್ತಿರ‍್ಹತ್ತಿರ ಎರಡೂಮುಕ್ಕಾಲು ವರ್ಷಗಳ ಹಿಂದಿನ ನನ್ನ ಪ್ರವಾಸವನ್ನು… ಅಮೆರಿಕಾ ಪ್ರವಾಸ… ಅದರಲ್ಲೂ ಕ್ಯಾಲಿಫ಼ೋರ್ನಿಯಾದ ಲಾಸ್‌ ಎಂಜಲಿಸ್‌, ನೆವಾಡ ರಾಜ್ಯದ ಲಾಸ್‌ ವೆಗಾಸ್‌, ಆರಿಜೋ಼ನಾದ ಗ್ರ್ಯಾಂಡ್‌ಕ್ಯಾನಿಯನ್‌ ಮತ್ತು ಯೂಟ ರಾಜ್ಯದ ಸಾಲ್ಟ್‌ ಲೇಕ್‌ ಸಿಟಿಯಿಂದ ಹಿಡಿದು ವೈಯೋಮಿಂಗ್‌ ರಾಜ್ಯದ ಟಿಟಾನ್‌ ಕೌಂಟಿಯ "ಟಿಟಾನ್‌ ವಿಲೇಜ್‌" ವರೆಗಿನ ಪಯಣ… ಮರೆಯಲಾಗದ ಪ್ರಯಾಣದ ಅನುಭವ.  ※ಟಿಪ್ಪಣಿ: ಈ ಪ್ರವಾಸದ ಬರಹದಲ್ಲಿ ನಾನು ಉಲ್ಲೇಖಿಸಿರುವ ಸಮಯಗಳನ್ನು "ಗೂಗಲ್‌ ಟೈಮ್ಲೈನ್‌" ನಲ್ಲಿ ತೋರಿಸಿರುವಂತೆ ಮತ್ತು ಸಿಂಚನ ತೆಗೆದ ಛಾಯಾಚಿತ್ರ