Posts

Showing posts from December, 2016

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ

ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ ಆ ವತ್ತು ಸಂಕ್ರಾಂತಿ ಹಬ್ಬ . ಊರಿನಲ್ಲಿ ಹಬ್ಬದ ಸಡಗರ . ಆಚರಣೆ ಸಂಜೆ ಹೊತ್ನಾಗ್ಮಾತ್ರ . ನನಗಾಗ ಸುಮಾರು ಹನ್ನೊಂದ್ಹನ್ನೆರಡು ವರ್ಷಗಳಿದ್ದಿರಬಹ್ದು . ಮಾಧ್ಯಮಿಕ ಏಳನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಹುಡುಗ . ಹಬ್ಬದ ರಜೆ ಇತ್ತು . ಇಡೀದಿನ ಸಡಗರ ... ಊರು ಹುಡುಗ್ರು ಜೊತೆ ಕುಣಿದಾಡಿ ಸಂಜೆ ವೇಳ್ಯಾಗೊ ಹೊತ್ಗೆ ದಣಿದುಹೋಗಿದ್ದವ ನಾನು ! ಆಟವಾಡಿ ಮನೆಗೆ ಬಂದಾಗ ಸುಮಾರು ನಾಲ್ಕೂವರೆಯಿಂದ ಐದು ಗಂಟೆ ಸಮಯವಿರಬಹುದು . ಮನೆಯೊಳಗೆ ಹಬ್ಬದ ತಯಾರಿ ನಡೆಯುತ್ತಿತ್ತು . ಕಣ್ಣುಗಳಿಗೆ ನಿದ್ದೆಯಾವರಿಸುತ್ತಿತ್ತು ... ಮನೆಯ ಹೊರಗಿನ ಜಗುಲಿಯ ಮೇಲೆ ಮುದುರಿ ಮಲಗುತ್ತಾ ನಾನು ಅಮ್ಮನಿಗೆ ಹೇಳಿದ ತಾಕೀತಿನ ಮಾತು , “ ರಾತ್ರಿ ಎಚ್ಚರವಾದಮೇಲೆ ನನಗೆ ಹಬ್ಬದೂಟಕ್ಕೆ ಚಿತ್ರಾನ್ನವಿರಿಸಿರಬೇಕು .” ನಮ್ಮ ಮನೆಯ ಪಡಸಾಲೆಯಲ್ಲಿ ತಳವೂರುತ್ತಿದ್ದ ಅಗಸರ ನರಸವ್ವ ನಾನು ಅಮ್ಮನಿಗೆ ಹೇಳಿದ ಈ ತಾಕೀತಿನ ಮಾತನ್ನು ಕೇಳಿಸಿಕೊಂಡಿದ್ದಳು ! ನನ್ನನ್ನು ಯಾರೋ ಎಚ್ಚರಿಸುತ್ತಿದ್ದರು , “ ದಿವಾಕರ ... ಏಯ್‌ ದಿವಾಕರ ಏಳೋ…ಚಿತ್ರಾನ್ನ ತಿನ್ನಲ್ಲವೇನೋ ದಿವಾಕರ ..?” ಚಿತ್ರಾನ್ನದ ಮಾತು ಕಿವಿಗೆ ಬೀಳುತ್ತಲೇ ನಾನು ದಡಕ್ಕನೆ ಎದ್ದು ಕುಳಿತಿದ್ದೆ . ನನ್ನನ್ನು ಏಳಿಸುತ್ತಿದ್ದುದು ಅಗಸರ ನರಸವ್ವ . ಬುಜವಿಡಿದು ಅಲ್ಲಾಡಿಸುತ್ತಿದ್ದಳು ನಿದ್ದೆಯ ಮಂಪರಿನಿಂದ ಹೊರಬರಲು . ಕಣ್ಣುಜ್ಜಿಕೊ